ಫೆ.3 ರಿಂದ ರಾಜ್ಯದಲ್ಲಿ ಮಿನಿ ಒಲಿಂಪಿಕ್ಸ್‌ ಕೂಟ

ರಾಜ್ಯದಲ್ಲಿ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಸಲು ಕರ್ನಾಟಕ ಒಲಿಂಪಿಕ್ಸ್‌ ಸಂಸ್ಥೆ ಸಜ್ಜಾಗಿದೆ. ಫೆಬ್ರವರಿ 03ರಿಂದ ಈ ಕ್ರೀಡಾಕೂಟ ನಡೆಯಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Bengaluru all set to host mini Olympics game 2020

ಬೆಂಗಳೂರು(ಡಿ.25): ಕರ್ನಾಟಕ ಒಲಿಂಪಿಕ್ಸ್‌ ಸಂಸ್ಥೆ (ಕೆಒಎ) ಯುವ ಕ್ರೀಡಾಪಟುಗಳನ್ನು ಗುರುತಿಸಿ ಪೋಷಿಸಲು ಮಿನಿ ಒಲಿಂಪಿಕ್ಸ್‌ ಕ್ರೀಡಾಕೂಟವನ್ನು ಆಯೋಜಿಸುತ್ತಿದೆ. 

ಜುಲೈ ತಿಂಗಳಲ್ಲಿ ರಾಜ್ಯ ಮಿನಿ ಒಲಿಂಪಿಕ್ಸ್: 15 ಕ್ರೀಡೆಗೆ ಅವಕಾಶ

2020ರ ಫೆ.3ರಿಂದ 9ರ ವರೆಗೂ ಬೆಂಗಳೂರಲ್ಲಿ ನಡೆಯಲಿರುವ ಅಂಡರ್‌-14 ಕ್ರೀಡಾಕೂಟಕ್ಕೆ ಕಂಠೀರವ ಸೇರಿದಂತೆ ನಗರದ ವಿವಿಧ ಕ್ರೀಡಾಂಗಣಗಳು ಆತಿಥ್ಯ ನೀಡಲಿವೆ. ಒಟ್ಟು 18 ಕ್ರೀಡೆಗಳ ಸ್ಪರ್ಧೆ ನಡೆಯಲಿದೆ. ದೇಶದಲ್ಲಿ ಮೊದಲ ಬಾರಿಗೆ ಕಿರಿಯರ ಪ್ರತಿಭಾನ್ವೇಷಣೆಗಾಗಿ ಮಿನಿ ಒಲಿಂಪಿಕ್ಸ್‌ ನಡೆಯಲಿದೆ.

2020ರ ಒಲಿಂಪಿಕ್ಸ್‌ಗೆ 90,000 ಕೋಟಿ ಬಜೆಟ್‌!

ಕೂಟಕ್ಕೆ ಸಿದ್ಧವಿಲ್ಲ ಸಿಂಥೆಟಿಕ್‌ ಟ್ರ್ಯಾಕ್‌: ಅಥ್ಲೆಟಿಕ್ಸ್‌ ಅನ್ನು ಕಂಠೀರವ ಕ್ರೀಡಾಂಗಣದಲ್ಲಿಯೇ ನಡೆಸಲು ನಿರ್ಧರಿಸಲಾಗಿದೆ. ಆದರೆ ಇನ್ನು ಸಿಂಥೆಟಿಕ್‌ ಟ್ರ್ಯಾಕ್‌ ಮರು ಅಳವಡಿಕೆ ಕಾರ್ಯ ಮಾತ್ರ ನಡೆದಿಲ್ಲ. ಕೂಟಕ್ಕೆ ಇನ್ನು 39 ದಿನಗಳು ಮಾತ್ರ ಬಾಕಿ ಉಳಿದಿವೆ.
 

Latest Videos
Follow Us:
Download App:
  • android
  • ios