ಬಾರ್ಸಿಲೋನಾ ಓಪನ್ ಚೆಸ್: ಸೇತುರಾಮನ್ ಚಾಂಪಿಯನ್
* ಬಾರ್ಸಿಲೋನಾ ಓಪನ್ ಚೆಸ್ ಪಂದ್ಯಾವಳಿಯಲ್ಲಿ ಭಾರತದ ಗ್ರಾಂಡ್‌ಮಾಸ್ಟರ್ ಎಸ್.ಪಿ. ಸೇತುರಾಮನ್ ಚಾಂಪಿಯನ್
* ರಷ್ಯಾದ ಡ್ಯಾನಿಲ್ ಯುಫಾ ವಿರುದ್ಧ ಭರ್ಜರಿ ಜಯ
* ಟೂರ್ನಿಯಲ್ಲಿ ಅಜೇಯರಾಗಿ ಉಳಿದ ಅಗ್ರ ಶ್ರೇಯಾಂಕಿತ ಸೇತುರಾಮನ್
ಬಾರ್ಸಿಲೋನಾ(ಆ.28): ಬಾರ್ಸಿಲೋನಾ ಓಪನ್ ಚೆಸ್ ಪಂದ್ಯಾವಳಿಯಲ್ಲಿ ಭಾರತದ ಗ್ರಾಂಡ್‌ಮಾಸ್ಟರ್ ಎಸ್.ಪಿ. ಸೇತುರಾಮನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 9 ಸುತ್ತುಗಳಲ್ಲಿ 7.5 ಅಂಕಗಳನ್ನು ಗಳಿಸಿದ್ದ ಸೇತುರಾಮನ್‌ಗೆ ಉತ್ತಮ ಟೈ ಬ್ರೇಕರ್ ಅಂಕದ ಆಧಾರದ ಮೇಲೆ ರಷ್ಯಾದ ಡ್ಯಾನಿಲ್ ಯುಫಾ ವಿರುದ್ಧ ಜಯ ಒಲಿಯಿತು.
ಟೂರ್ನಿಯಲ್ಲಿ ಅಜೇಯರಾಗಿ ಉಳಿದ ಅಗ್ರ ಶ್ರೇಯಾಂಕಿತ ಸೇತುರಾಮನ್ 9 ಸುತ್ತುಗಳಲ್ಲಿ 6ರಲ್ಲಿ ಗೆದ್ದು, ಮೂರರಲ್ಲಿ ಡ್ರಾ ಮಾಡಿಕೊಂಡಿದ್ದರು. ಕೊನೆಯ ಸುತ್ತಿನಲ್ಲಿ ಅರ್ಮೇನಿಯಾದ ಅರಮ್ ಹಕೋಬ್ಯಾನ್ ವಿರುದ್ಧ ಸೇತುರಾಮನ್ ಜಯ ಸಾಧಿಸಿದರು. ಇನ್ನು ಭಾರತದ ಕಾರ್ತಿಕೇಯನ್ ಮುರಳಿ 3ನೇ ಸ್ಥಾನ ಪಡೆದುಕೊಂಡರು. ಅರವಿಂದ್ ಚಿತಾಂಬರಮ್ 5, ಅರ್ಜುನ್ ಕಲ್ಯಾಣ್ 9, ವಿಸಾಖ್ 10ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಕಿರಿಯರ ಕುಸ್ತಿ: ಭಾರತದ ಮೂವರು ಫೈನಲ್‌ಗೆ
ನವದೆಹಲಿ: ದುಬೈಯಲ್ಲಿ ನಡೆಯುತ್ತಿರುವ ಏಷ್ಯನ್ ಕಿರಿಯರ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯರ ಪ್ರಾಬಲ್ಯ ಮುಂದುವರೆದಿದ್ದು, ಮೂವರು ಫೈನಲ್ ಪ್ರವೇಶಿಸಿದ್ದಾರೆ.
ಪದಕ ಮಿಸ್ ಮಾಡಿಕೊಂಡ ಒಲಿಂಪಿಕ್ ಪಟುಗಳಿಗೆ ಟಾಟಾ ಅಲ್ಟ್ರೋಜ್ ಕಾರು ಗಿಫ್ಟ್!
ಸೆಮಿಫೈನಲ್‌ನಲ್ಲಿ ನೇಪಾಳದ ಸ್ವೊಸ್ತಿಕಾ ವಿರುದ್ಧ 5-0 ಅಂತರದಲ್ಲಿ ಜಯ ಸಾಧಿಸಿದ ತನು(52 ಕೆ.ಜಿ.), ಉಜ್ಬೇಕಿಸ್ತಾನದ ಮುಖುಸಾರ ವಿರುದ್ಧ 5-0 ಅಂತರದಲ್ಲಿ ಮಣಿಸಿದ ನಿಕಿತಾ ಚಾಂದ್(60 ಕೆ.ಜಿ.) ಫೈನಲ್ ಪ್ರವೇಶಿಸಿದರು. 48 ಕೆ.ಜಿ. ವಿಭಾಗದದಲ್ಲಿ ವಿಶು ರಾಥಿ, ಮಂಗೋಲಿಯಾದ ಯೆಸುಂಖುಸ್ಲೆನ್ ರನ್ನು ಸೋಲಿಸಿ ಫೈನಲ್ ತಲುಪಿದರು. ಭಾರತದ ಇನ್ನಿಬ್ಬರು ಕುಸ್ತಿಪಟುಗಳಾದ ಆಶಿಸ್(54ಕೆ.ಜಿ), ಅಂಶುಲ್(57ಕೆ.ಜಿ) ಉಜ್ಬೇಕಿಸ್ತಾನದ ಎದುರಾಳಿಗಳ ವಿರುದ್ಧ ಸೆಮೀಸ್‌ನಲ್ಲಿ ಸೋಲುಂಡು, ಕಂಚಿನ ಪದಕಕ್ಕೆ ತೃಪ್ತರಾದರು.