* ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟ ಪಿವಿ ಸಿಂಧು* ಸಿಂಗಾಪುರದ ಯು ಯಾನ್‌ ಹೊಯಿ ವಿರುದ್ಧ 21-16, 21-16 ನೇರ ಗೇಮ್‌ಗಳಲ್ಲಿ ಜಯ* 8ರ ಸುತ್ತಿನಲ್ಲಿ 3ನೇ ಶ್ರೇಯಾಂಕಿತೆ ಚೀನಾದ ಹೆ ಬಿಂಗ್‌ ಜಿಯೊ ವಿರುದ್ಧ ಸಿಂಧು ಹೋರಾಟ

ಮನಿಲಾ(ಏ.29): ಭಾರತದ ತಾರಾ ಶಟ್ಲರ್‌ ಪಿ.ವಿ.ಸಿಂಧು (PV Sindhu) ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಶಿಪ್‌ನ (Badminton Asia Championships) ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಸಿಂಗಾಪುರದ ಯು ಯಾನ್‌ ಹೊಯಿ ವಿರುದ್ಧ 21-16, 21-16 ನೇರ ಗೇಮ್‌ಗಳಲ್ಲಿ ಜಯಗಳಿಸಿದರು. ಅಂತಿಮ 8ರ ಸುತ್ತಿನಲ್ಲಿ 3ನೇ ಶ್ರೇಯಾಂಕಿತೆ ಚೀನಾದ ಹೆ ಬಿಂಗ್‌ ಜಿಯೊ ವಿರುದ್ಧ ಸೆಣಸಲಿದ್ದಾರೆ. ಬಿಂಗ್‌ ಜಿಯೊ ವಿರುದ್ಧ ಟೋಕಿಯೋ ಒಲಿಂಪಿಕ್ಸ್‌ನ ಕಂಚಿನ ಪದಕದ ಪಂದ್ಯದಲ್ಲಿ ಸಿಂಧು ಜಯಿಸಿದ್ದರು.

ಇದೇ ವೇಳೆ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿಜೋಡಿ ಕ್ವಾರ್ಟರ್‌ ಫೈನಲ್‌ಗೇರಿತು. ಜಪಾನ್‌ನ ಅಕಿರಾ ಕೊಗಾ ಹಾಗೂ ತೈಚಿ ಸೈಟೊ ವಿರುದ್ಧ 21-17, 21-15 ಗೇಮ್‌ಗಳಲ್ಲಿ ಜಯಗಳಿಸಿತು. ಇನ್ನು ಸೈನಾ ನೆಹ್ವಾಲ್‌ ಹಾಗೂ ಕಿದಂಬಿ ಶ್ರೀಕಾಂತ್‌ ಸೋತು ಹೊರಬಿದ್ದರು.

ಸಂತೋಷ್ ಟ್ರೋಫಿ: ಕರ್ನಾಟಕಕ್ಕೆ 3-7ರ ಸೋಲು

ಮಲಪ್ಪುರಂ: 47 ವರ್ಷಗಳ ಬಳಿಕ ಸಂತೋಷ್‌ ಟ್ರೋಫಿ (Santhosh Trophy) ರಾಷ್ಟ್ರೀಯ ಫುಟ್ಬಾಲ್‌ ಟೂರ್ನಿಯ ಫೈನಲ್‌ ಪ್ರವೇಶಿಸುವ ಕರ್ನಾಟಕದ ಕನಸು ಭಗ್ನಗೊಂಡಿದೆ. 75ನೇ ಆವೃತ್ತಿಯ ಸೆಮಿಫೈನಲ್‌ನಲ್ಲಿ ಗುರುವಾರ ಕರ್ನಾಟಕ, ಆತಿಥೇಯ ಕೇರಳ ವಿರುದ್ಧ 3-7 ಗೋಲುಗಳ ಹೀನಾಯ ಸೋಲು ಅನುಭವಿಸಿತು. ಜೆಸಿನ್‌ ಥೋನಿಕ್ಕರ ಬರೋಬ್ಬರಿ 5 ಗೋಲು ಬಾರಿಸಿ ಕರ್ನಾಟಕಕ್ಕೆ ಕಂಟಕರಾದರು. 

ಪಂದ್ಯದ 25ನೇ ನಿಮಿಷದಲ್ಲಿ ನಾಯಕ ಸುಧೀರ್‌ ಗೋಲು ಬಾರಿಸಿ ಕರ್ನಾಟಕಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು. ಆದರೆ 35ನೇ ನಿಮಿಷದಲ್ಲಿ ಜೆಸಿನ್‌ ಮೊದಲ ಗೋಲು ಗಳಿಸಿ ಕೇರಳ ಸಮಬಲ ಸಾಧಿಸುವಂತೆ ಮಾಡಿದರು. ಬಳಿಕ 42, 45ನೇ ನಿಮಿಷದಲ್ಲಿ ಮತ್ತೆರಡು ಗೋಲು ಗಳಿಸಿದರು. ಮೊದಲಾರ್ಧಕ್ಕೆ 4-1ರಿಂದ ಮುಂದಿದ್ದ ಕೇರಳ ದ್ವಿತೀಯಾರ್ಧದಲ್ಲೂ ಪ್ರಾಬಲ್ಯ ಮೆರೆದು ಜಯಗಳಿಸಿತು. ಶುಕ್ರವಾರ 2ನೇ ಸೆಮೀಸ್‌ನಲ್ಲಿ ಬಂಗಾಳ ಹಾಗೂ ಮಣಿಪುರ ಸೆಣಸಲಿವೆ.

ಬೆಂಗಳೂರಲ್ಲಿ ಬಾಸ್ಕೆಟ್‌ಬಾಲ್‌ ಏಷ್ಯಾ ಕಪ್‌ ಟ್ರೋಫಿ ಟೂರ್‌

ಬೆಂಗಳೂರು: ಮುಂಬರುವ ಫಿಬಾ ಬಾಸ್ಕೆಟ್‌ಬಾಲ್‌ ಏಷ್ಯಾ ಕಪ್‌ ಲೀಗ್‌ನ ಟ್ರೋಫಿ ಪ್ರದರ್ಶನ ಕಾರ್ಯಕ್ರಮ ಬುಧವಾರ ನಗರದಲ್ಲಿ ನಡೆಯಿತು. ಮೊದಲು ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ ಪ್ರದರ್ಶನ ಸಮಾರಂಭದಲ್ಲಿ ರಾಜ್ಯ ಕ್ರೀಡಾ ಇಲಾಖೆ ಸಚಿವ ನಾರಾಯಣಗೌಡ, ರಾಷ್ಟ್ರೀಯ ಬಾಸ್ಕೆಟ್‌ಬಾಲ್‌ ಫೆಡರೇಶನ್‌ ಅಧ್ಯಕ್ಷ ಡಾ.ಕೆ.ಗೋವಿಂದರಾಜು ಸೇರಿದಂತೆ ರಾಜ್ಯ ಮತ್ತು ರಾಷ್ಟ್ರೀಯ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಬಳಿಕ ನಗರದ ಕಂಠೀರವ ಕ್ರೀಡಾಂಗಣದಲ್ಲಿಯೂ ಟ್ರೋಫಿಯನ್ನು ಪ್ರದರ್ಶನ ಮಾಡಲಾಯಿತು. ಬಳಿಕ ಬುಧವಾರ ಸಂಜೆಯೇ ಟ್ರೋಫಿ ಫಿಲಿಪ್ಪೀನ್ಸ್‌ಗೆ ಪ್ರಯಾಣ ಬೆಳೆಸಿತು.

Wimbledon ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಜೋಕೋವಿಚ್‌ಗೆ ಅನುಮತಿ

ಜುಲೈ 12ರಿಂದ 24ರ ವರೆಗೆ ನಡೆಯಲಿರುವ ಟೂರ್ನಿಗೆ ಭಾರತ ಸೇರಿದಂತೆ 16 ದೇಶಗಳು ಅರ್ಹತೆ ಗಿಟ್ಟಿಸಿಕೊಂಡಿದ್ದು, ಎಲ್ಲಾ ದೇಶಗಳಲ್ಲೂ ಟ್ರೋಫಿ ಪ್ರದರ್ಶನ ನಡೆಸಲಾಗುತ್ತದೆ. ಭಾರತ ಪುರುಷರ ತಂಡ ‘ಡಿ’ ಗುಂಪಿನಲ್ಲಿ ಲೆಬನಾನ್‌, ಫಿಲಿಪ್ಪೀನ್ಸ್‌ ಹಾಗೂ ನ್ಯೂಜಿಲೆಂಡ್‌ ಜೊತೆ ಸ್ಥಾನ ಪಡೆದಿದೆ.