ವರ್ಷದ ಮೊದಲ ಗ್ರ್ಯಾನ್‌ಸ್ಲಾಂ ಟೂರ್ನಿಯಾದ ಆಸ್ಟ್ರೇಲಿಯಾ ಓಪನ್ ಟೆಸ್ಟ್ ಟೂರ್ನಿ ಆರಂಭದ ವೇಳಾಪಟ್ಟಿ ಪ್ರಕಟಗೊಂಡಿದ್ದು, ಮೂರು ವಾರ ತಡವಾಗಿ ಆರಂಭವಾಗಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮೆಲ್ಬರ್ನ್(ಡಿ.19): ಕೊರೋನಾ ಕಾರಣದಿಂದಾಗಿ ಈ ಬಾರಿಯ ಆಸ್ಪ್ರೇಲಿಯನ್ ಓಪನ್ ನಿಗದಿತ ಸಮಯಕ್ಕಿಂತ 3 ವಾರ ತಡವಾಗಿ ಆರಂಭವಾಗಲಿದ್ದು, ಫೆ.8 ರಿಂದ 2021ರ ಮೊದಲ ಗ್ರ್ಯಾನ್‌ಸ್ಲಾಮ್ ನಡೆಸಲು ನಿರ್ಧರಿಸಲಾಗಿದೆ ಎಂದು ಎಟಿಪಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
7 ವಾರ ಮುಂಚಿತವಾಗಿ ಟೂರ್ನಿ ದಿನಾಂಕವನ್ನು ಪ್ರಕಟಿಸಲಾಗಿದೆ. ಪುರುಷರ ಅರ್ಹತಾ ಸುತ್ತಿನ ಪಂದ್ಯಗಳು ಜ.10 ರಿಂದ 13ರವರೆಗೆ ದೋಹಾದಲ್ಲಿ ನಡೆಯಲಿವೆ. ಪ್ರಮುಖ ಸುತ್ತಿಗೆ ಪ್ರವೇಶಿಸಿದ ಟೆನಿಸಿಗರು ಮೆಲ್ಬರ್ನ್‌ನಲ್ಲಿ 14 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಬೇಕಿದೆ.
ಮೈಕ್ ಟೈಸನ್: ನಿಮಗೆ ಗೊತ್ತಿರದ ಬಾಕ್ಸರ್‌ನ ಡ್ರಗ್ಸ್, ಕ್ರೈಂ, ಸೆಕ್ಸ್ ಕಹಾನಿ
Australian Open 2021 will take place at Melbourne Park from 8 to 21 February.
— #AusOpen (@AustralianOpen) December 19, 2020
Tickets will go on sale on Wednesday 23 December.#AusOpen | #AO2021
ಗ್ರ್ಯಾನ್‌ಸ್ಲಾಮ್ ಸಂಬಂಧ ಮೆಲ್ಬರ್ನ್‌ಗೆ ಬರುವ ಕೋಚ್‌ಗಳು ಹಾಗೂ ಸಹಾಯಕ ಸಿಬ್ಬಂದಿಗಳಿಗೂ ಕ್ವಾರಂಟೈನ್ ಕಡ್ಡಾಯವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಆಸ್ಪ್ರೇಲಿಯನ್ ಓಪನ್‌ಗೆ ಪೂರ್ವಭಾವಿಯಾಗಿ ಎಟಿಪಿ ಕಪ್ ಟೆನಿಸ್ ಟೂರ್ನಿಯನ್ನು ನಡೆಸಲಾಗುತ್ತಿದೆ. ಪುರುಷರ ಟೆನಿಸ್ ಟೂರ್ನಿ ಇದಾಗಿದ್ದು, ಮೆಲ್ಬರ್ನ್‌ನಲ್ಲಿ ನಡೆಯಲಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 19, 2020, 3:07 PM IST