ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಂ: 3ನೇ ಸುತ್ತಿಗೇರಿದ ಜೋಕೋ, ಸರೆನಾ
ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಸರ್ಬಿಯಾದ ನೋವಾಕ್ ಜೋಕೋವಿಚ್ ಹಾಗೂ ಅಮೆರಿಕದ ದಿಗ್ಗಜ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಮೂರನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಮೆಲ್ಬರ್ನ್(ಫೆ.11): ಹಾಲಿ ಚಾಂಪಿಯನ್ ಹಾಗೂ ನಂ.1 ಆಟಗಾರ ಸರ್ಬಿಯಾದ ನೋವಾಕ್ ಜೋಕೋವಿಚ್, ಆಸ್ಪ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿಯ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಬುಧವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಫ್ರಾನ್ಸೆಸ್ ಟಿಯಾಫೋ ವಿರುದ್ಧ 6-3, 6-7,7-6,6-3 ಸೆಟ್‌ಗಳಲ್ಲಿ ಜಯಗಳಿಸಿದರು.
ಇದೇ ವೇಳೆ ಮಾಜಿ ಗ್ರ್ಯಾನ್ ಸ್ಲಾಂ ಚಾಂಪಿಯನ್ ಸ್ವಿಜರ್‌ಲೆಂಡ್‌ನ ಸ್ಟ್ಯಾನಿಸ್ಲಾಸ್ ವಾವ್ರಿಂಕಾ 2ನೇ ಸುತ್ತಿನಲ್ಲಿ ಸೋತು ಹೊರಬಿದ್ದರು. ಮಹಿಳಾ ಸಿಂಗಲ್ಸ್‌ನ 2ನೇ ಸುತ್ತಿನ ಪಂದ್ಯದಲ್ಲಿ ಸರ್ಬಿಯಾದ ಸ್ಟೊವಾನೊವಿಚ್ ವಿರುದ್ಧ 6-3, 6-0ಯಲ್ಲಿ ಗೆದ್ದ ಸೆರೆನಾ ವಿಲಿಯಮ್ಸ್, ಆಸ್ಪ್ರೇಲಿಯಾದ ಆಲಾ ಟಾಮ್ಲಿಯೊನಿಚ್ ವಿರುದ್ಧ ಸೋಲುವ ಭೀತಿಯಲ್ಲಿದ್ದ ರೊಮೇನಿಯಾದ ಸಿಮೋನಾ ಹಾಲೆಪ್ 4-6, 6-4, 7-5 ಸೆಟ್‌ಗಳಲ್ಲಿ ಗೆದ್ದು 3ನೇ ಸುತ್ತಿಗೇರಿದರು.
ಆಸ್ಟ್ರೇಲಿಯನ್ ಓಪನ್: 2ನೇ ಸುತ್ತಿಗೆ ಸೆರೆನಾ, ಜೋಕೋ ಲಗ್ಗೆ
ಬೋಪಣ್ಣ ಜೋಡಿಗೆ ಸೋಲು: ಪುರುಷರ ಡಬಲ್ಸ್ ಮೊದಲ ಸುತ್ತಿನಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಜಪಾನ್‌ನ ಬೆನ್ ಮೆಕ್‌ಲ್ಯಾಚ್‌ಲಾನ್ ಜೋಡಿ ಸೋಲು ಅನುಭವಿಸಿ ಹೊರಬಿದ್ದಿದೆ. ದ.ಕೊರಿಯಾದ ಜಿ ಸುಂಗ್ ಹಾಗೂ ಮಿನ್ ಸೊಂಗ್ ವಿರುದ್ಧ 4-6, 6-7 ಸೆಟ್‌ಗಳಲ್ಲಿ ಪರಾಭವಗೊಂಡಿತು.