Asianet Suvarna News Asianet Suvarna News

ನೀರಜ್ ಚೋಪ್ರಾ - ಮನು ಭಾಕರ್ ಆಸ್ತಿ ಎಷ್ಟು? ಯಾರ ಬಳಿಯಲ್ಲಿವೆ ಹೆಚ್ಚು ಪದಕಗಳು? ಇಬ್ಬರಲ್ಲಿ ಶ್ರೀಮಂತ ಯಾರು?

ನೀರಜ್ ಚೋಪ್ರಾ ಮತ್ತು ಮನು ಭಾಕರ್ ಮದುವೆ ವದಂತಿ ಬೆನ್ನಲ್ಲೇ ಇಬ್ಬರ ಸಾಧನೆ ಮತ್ತು ಆಸ್ತಿಯನ್ನು ಹೋಲಿಕೆ ಮಾಡಲಾಗುತ್ತಿದೆ. ಹಾಗಾದ್ರೆ ಇಬ್ಬರಲ್ಲಿ ಶ್ರೀಮಂತರು ಯಾರು ಗೊತ್ತಾ?

Athletes Neeraj Chopra And Manu Bhaker property details mrq
Author
First Published Aug 18, 2024, 9:00 PM IST | Last Updated Aug 18, 2024, 9:00 PM IST

ನವದೆಹಲಿ: ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಎರಡು ಪದಕ ಗೆದ್ದಿರುವ ಮನು ಭಾಕರ್ ಮತ್ತು ಜಾವೆಲಿನ್ ಥ್ರೋನಲ್ಲಿ ಬೆಳ್ಳಿ ಪದಕ ಗೆದ್ದಿರುವ ನೀರಜ್ ಚೋಪ್ರಾ ಮದುವೆಯಾದ್ರೆ ಚೆನ್ನಾಗಿರುತ್ತದೆ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪೋಟೋಗಳನ್ನು ಶೇರ್ ಮಾಡಿಕೊಳ್ಳಲು ಆರಂಭಿಸಿದ್ದರು. ಈ ಎಲ್ಲಾ ಬೆಳವಣಿಗೆ ನಡುವೆ ನೀರಜ್ ಚೋಪ್ರಾ ಅವರನ್ನು ಮನು ಭಾಕರ್ ತಾಯಿ ಭೇಟಿಯಾಗಿರುವ ವಿಡಿಯೋ ಸಹ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿತ್ತು. ಈ ವಿಡಿಯೋ ವೈರಲ್ ಬೆನ್ನಲ್ಲೇ ಮನು ಭಾಕರ್ ಮತ್ತು ಅವರ ತಂದೆ ಸ್ಪಷ್ಟನೆ ಸಹ ನೀಡಿದ್ದರು. ಸ್ಪಷ್ಟನೆ ನೀಡಿದರೂ ಅಭಿಮಾನಿಗಳು ಮಾತ್ರ ಪದಕ ವಿಜೇತರು ಮದುವೆಯಾದ್ರೆ ಚೆನ್ನಾಗಿರುತ್ತೆ ಎಂದು ತಮ್ಮ ಇಂಗಿತವನ್ನು ಹೊರ ಹಾಕುತ್ತಿದ್ದಾರೆ. ಎರಡು ಕಂಚಿನ ಪದಕ ಗೆಲ್ಲುವ ಮೂಲಕ ಮನು ಭಾಕರ್ ನ್ಯಾಷನಲ್ ಕ್ರಶ್ ಆಗಿದ್ದಾರೆ. ಈ ಹಿಂದಿನ ಒಲಂಪಿಕ್ಸ್ ನಲ್ಲಿ ಚಿನ್ನ ಗೆದ್ದಿದ್ದ ನೀರಜ್ ಚೋಪ್ರಾ ಕಂಡ ಯುವತಿಯರು ಸ್ಮಾರ್ಟ್ ಹೀರೋ ಅಂತ ಕಮೆಂಟ್ ಮಾಡಿದ್ದರು. 

ನೀರಜ್ ಚೋಪ್ರಾ ಮತ್ತು ಮನು ಭಾಕರ್ ಇಬ್ಬರಲ್ಲಿ ಯಾರು ಶ್ರೀಮಂತರು ಎಂಬ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿವೆ. ಪದಕ ಗೆದ್ದ ಬಳಿಕ ಹಲವು ಕಂಪನಿಗಳ ಉತ್ಪನ್ನಗಳಿಗೆ ರಾಯಭಾರಿಯನ್ನಾಗಿ ಮಾಡಲು ಮನು ಭಾಕರ್ ಅವರನ್ನು ಸಂಪರ್ಕಿಸುತ್ತಿವೆ. ಇತ್ತ ನೀರಜ್ ಚೋಪ್ರಾ ಈಗಾಗಲೇ ಹಲವು ಕಂಪನಿಗಳ ರಾಯಭಾರಿಯಾಗಿದ್ದಾರೆ. ಎರಡನೇ ಬಾರಿ ಪದಕ ಗೆದ್ದ ಮೇಲೆ ನೀರಜ್ ಚೋಪ್ರಾ ತಮ್ಮ ಬ್ರಾಂಡ್ ವ್ಯಾಲ್ಯೂ ಹೆಚ್ಚಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಜಿಕ್ಯೂ ವರದಿ ಪ್ರಕಾರ, ಮನು ಭಾಕರ್ ಒಟ್ಟು ಆಸ್ತಿ 12 ಕೋಟಿ ರೂಪಾಯಿ. ಎರಡು ಕಂಚಿನ ಪದಕವನ್ನು ಕೊರಳಿಗೆ ಹಾಕಿಕೊಂಡ ಬಳಿಕ ಮನು ಭಾಕರ್ ಆಸ್ತಿ ಮತ್ತಷ್ಟು ಹೆಚ್ಚಳವಾಗಲಿದೆ. ಇತ್ತ ನೀರಜ್ ಚೋಪ್ರಾ ಒಟ್ಟು ಆಸ್ತಿ 37 ಕೋಟಿ ರೂಪಾಯಿ ಆಗಿದೆ. ನೀರಜ್ ಚೋಪ್ರಾ ಹಲವು ಬ್ರ್ಯಾಂಡ್‌ಗಳ ರಾಯಭಾರಿಯಾಗಿದ್ದು, ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಮನು ಭಾಕರ್ ಅವರಿಗಿಂತ ನೀರಜ್ ಚೋಪ್ರಾ ಆಸ್ತಿ 25 ಕೋಟಿ ರೂಪಾಯಿ ಹೆಚ್ಚಿದೆ.

ನೀರಜ್ ಚೋಪ್ರಾ ಇದುವರೆಗೂ 13 ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ  9 ಚಿನ್ನ ಮತ್ತು 4 ಬೆಳ್ಳಿ ಪದಕಗಳು ಸೇರಿವೆ. 2020ರ ಟೋಕಿಯೋ ಒಲಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು. ಆದ್ರೆ ಮನು ಭಾಕರ್ 34 ಪದಕಗಳನ್ನು ಗೆದ್ದಿದ್ದು, ಇದರಲ್ಲಿ 24 ಚಿನ್ನ, 5 ಬೆಳ್ಳಿ ಮತ್ತು 5 ಕಂಚು ಸೇರಿವೆ.

ನೀರಜ್‌ನೊಂದಿಗೆ ಮದುವೆ ಮಾತುಕತೆ.. ನಾಚಿಕೊಳ್ಳುತ್ತಲೇ ಮನದ ಮಾತು ಬಿಚ್ಚಿಟ್ಟ ಮನು ಭಾಕರ್!

ಮದುವೆ ಬಗ್ಗೆ ಮನು ಭಾಕರ್ ಪ್ರತಿಕ್ರಿಯೆ 

ಸಾಮಾಜಿಕ ಜಾಲತಾಣದಲ್ಲಿ ಮದುವೆ ಸುದ್ದಿ ಹರಿದಾಡುತ್ತಿರುವ ಬಗ್ಗೆ ಮನು ಭಾಕರ್ ಸಂದರ್ಶನದಲ್ಲಿ ಮಾತನಾಡಿದ್ದರು. ಕೆಲವು ಇವೆಂಟ್‌ಗಳಲ್ಲಿ ನೀರಜ್ ಅವರನ್ನು ಭೇಟಿಯಾಗಿದ್ದೇನೆ. ಆದ್ರೆ ನಮಗೆ ಪರಿಚಯವಿಲ್ಲ. ಅಂದು ನೀರಜ್ ಚೋಪ್ರಾ ಜೊತೆ ನಮ್ಮ ತಾಯಿ ಏನು ಮಾತನಾಡಿದರೂ ಎಂಬವುದು ನನಗೆ ಖಂಡಿತ ಗೊತ್ತಿಲ್ಲ. ಅಲ್ಲಿ ನಾನು ಇರಲಿಲ್ಲ. ನಮ್ಮ ತಾಯಿ ಅಲ್ಲಿದ್ದ ಎಲ್ಲಾ ಅಥ್ಲೀಟ್‌ ಜೊತೆಯಲ್ಲಿಯೂ ಮಾತನಾಡಿದ್ದರು. ಆದರೆ ನೀರಜ್ ಜೊತೆಗಿನ ಮಾತನಾಡಿದ ಕ್ಲಿಪ್ ವೈರಲ್ ಆಗಿದೆ ಎಂದು ಮನು ಭಾಕರ್ ಹೇಳಿದ್ದರು.

ಮಗಳು ಇನ್ನೂ ಚಿಕ್ಕವಳು, ಮದುವೆ ಮಾಡಿಕೊಳ್ಳುವ ವಯಸ್ಸು ಅಲ್ಲ. ಆಕೆಯ ಮುಂದೆ ಇನ್ನು ಅನೇಕ ಗುರಿಗಳಿವೆ. ಆಕೆಯ ಸಾಧನೆ ಮಾಡಬೇಕಾಗಿರೋದು ಇನ್ನೂ ಇದೆ ಎಂದಿದ್ದ ಮನು ಭಾಕರ್ ತಂದೆ ವೈರಲ್ ಆಗುತ್ತಿರುವ ಸುದ್ದಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ನೀರಜ್ ಚೋಪ್ರಾ ಜೊತೆ ಮಗಳ ಮದುವೆ : ಗಾಸಿಪ್‌ ಬಗ್ಗೆ ಮನು ಭಾಕರ್ ತಂದೆ ಹೇಳಿದ್ದೇನು

Latest Videos
Follow Us:
Download App:
  • android
  • ios