ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌: ಜಿತೇಂದರ್‌ಗೆ ಬೆಳ್ಳಿ, ದೀಪಕ್‌ಗೆ ಕಂಚು

ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕುಸ್ತಿ ಪಟುಗಳು ಅಮೋಘ ಪ್ರದರ್ಶನ ಮುಂದುವರೆಸಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.

Asian Wrestling Championships India wins one silver two bronze medals

ನವದೆಹಲಿ(ಫೆ.24): ಭಾರತದ ತಾರಾ ಕುಸ್ತಿಪಟುಗಳಾದ ಜಿತೇಂದರ್‌ ಕುಮಾರ್‌, ದೀಪಕ್‌ ಪೂನಿಯಾ ಹಾಗೂ ರಾಹುಲ್‌ ಅವಾರೆ, ಇಲ್ಲಿ ಭಾನುವಾರ ಮುಕ್ತಾಯವಾದ ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌: ಚಿನ್ನಕ್ಕೆ ಮುತ್ತಿಟ್ಟ ರವಿ

ಕೊನೆಯ ದಿನದ ಸ್ಪರ್ಧೆಯಲ್ಲಿ ಭಾರತದ ಸ್ಪರ್ಧಿಗಳು 1 ಬೆಳ್ಳಿ, 2 ಕಂಚು ಗೆದ್ದರು. ಒಟ್ಟಾರೆ ಭಾರತ 5 ಚಿನ್ನ, 6 ಬೆಳ್ಳಿ ಹಾಗೂ 9 ಕಂಚಿನೊಂದಿಗೆ 20 ಪದಕ ಗೆದ್ದಿದ್ದು ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. 8 ಚಿನ್ನದೊಂದಿಗೆ 16 ಪದಕ ಗೆದ್ದ ಜಪಾನ್‌ ಮೊದಲ ಸ್ಥಾನ ಪಡೆದರೆ, 7 ಚಿನ್ನದೊಂದಿಗೆ 17 ಪದಕ ಗೆದ್ದ ಇರಾನ್‌ 2ನೇ ಸ್ಥಾನ ಪಡೆಯಿತು.

74 ಕೆ.ಜಿ. ವಿಭಾಗದ ಫ್ರೀಸ್ಟೈಲ್‌ ಫೈನಲ್‌ನಲ್ಲಿ ಜಿತೇಂದರ್‌, ಕಜಕಸ್ತಾನದ ದನಿಯರ್‌ ಕೈಸಾನೊವ್‌ ವಿರುದ್ಧ 1-3 ರಿಂದ ಸೋಲು ಕಂಡರು. ಫೈನಲ್‌ಗೇರುವ ಮೂಲಕ ಜಿತೇಂದರ್‌ ಟೋಕಿಯೋ ಒಲಿಂಪಿಕ್‌ಗೆ ಟಿಕೆಟ್‌ ಪಡೆದರು. 61 ಕೆ.ಜಿ. ವಿಭಾಗದ ಕಂಚು ಪದಕದ ಸ್ಪರ್ಧೆಯಲ್ಲಿ ರಾಹುಲ್‌ ಅವಾರೆ, ಇರಾನ್‌ನ ಮಜಿದ್‌ ಅಲ್ಮಾಸ್‌ ದಸ್ತಾನ್‌ ವಿರುದ್ಧ 5-2 ರಿಂದ ಗೆಲುವು ಸಾಧಿಸಿ ಕಂಚಿನ ಪದಕ ಗೆದ್ದರು. ಕಳೆದ ವರ್ಷ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ರಾಹುಲ್‌ ಕಂಚು ಗೆದ್ದಿದ್ದರು.

ಏಷ್ಯನ್‌ ಕುಸ್ತಿ: ಸಾಕ್ಷಿಗೆ ಬೆಳ್ಳಿ, ವಿನೇಶ್‌ಗೆ ಕಂಚು

86 ಕೆ.ಜಿ. ವಿಭಾಗದ ಕಂಚಿನ ಪದಕದ ಸ್ಪರ್ಧೆಯಲ್ಲಿ ದೀಪಕ್‌ ಪೂನಿಯಾ, ಇರಾಕ್‌ನ ಇಸಾ ಅಬ್ದುಸ್ಲಾಮ್‌ ಅಬ್ದುವಹಾಬ್‌ ವಿರುದ್ಧ 10-0 ಯಿಂದ ಜಯ ಪಡೆದರು. ಈಗಾಗಲೇ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿರುವ ದೀಪಕ್‌, ಕಳೆದ ವರ್ಷ ನಡೆದಿದ್ದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
 

Latest Videos
Follow Us:
Download App:
  • android
  • ios