Winter Olympics 2022‌: ಭಾರತ ತಂಡ ಮುನ್ನಡೆಸಿದ ಆರಿಫ್‌ ಖಾನ್

* ಬೀಜಿಂಗ್‌ನಲ್ಲಿ ಚಳಿಗಾಲದ ಒಲಿಂಪಿಕ್ಸ್‌ಗೆ ಚಾಲನೆ

* ಉದ್ಘಾಟನಾ ಸಮಾರಂಭದಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಆರಿಫ್‌ ಖಾನ್‌

* ಸ್ಕೀಯಿಂಗ್‌ ಪಟು ಆರಿಫ್‌ ಖಾನ್‌ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವ ಏಕೈಕ ಭಾರತೀಯ ಪಟು

Arif Khan lone Indian athlete attends opening ceremony in Beijing at Winter Olympics 2022 kvn

ಬೀಜಿಂಗ್‌(ಫೆ.05): ಭಾರತದ ರಾಜತಾಂತ್ರಿಕ ಬಹಿಷ್ಕಾರದ ನಡುವೆಯೂ ಶುಕ್ರವಾರ ಬೀಜಿಂಗ್‌ ಚಳಿಗಾಲದ ಒಲಿಂಪಿಕ್ಸ್‌ನ (Winter Olympics 2022‌) ಉದ್ಘಾಟನಾ ಸಮಾರಂಭದಲ್ಲಿ ಭಾರತ ತಂಡವನ್ನು ಸ್ಕೀಯಿಂಗ್‌ ಪಟು ಆರಿಫ್‌ ಖಾನ್‌ (Arif Khan) ಮುನ್ನಡೆಸಿದರು. ಇಲ್ಲಿನ ಬರ್ಡ್ಸ್ ನೆಟ್ಸ್‌ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಭಾರತದ ಒಟ್ಟು 4 ಮಂದಿ ಪಾಲ್ಗೊಂಡರು. 31 ವರ್ಷದ, ಜಮ್ಮು ಮತ್ತು ಕಾಶ್ಮೀರ ಆರಿಫ್‌ ಭಾರತದ ಏಕೈಕ ಸ್ಪರ್ಧಿಯಾಗಿದ್ದು, ಸ್ಲಾಲೊಮ್‌ ಹಾಗೂ ಜೈಂಟ್‌ ಸ್ಲಾಲೊಮ್‌ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಒಲಿಂಪಿಕ್ಸ್‌ ಫೆಬ್ರವರಿ 20ಕ್ಕೆ ಕೊನೆಗೊಳ್ಳಲಿದೆ.

ಇಮ್ರಾನ್‌ ಖಾನ್‌ ಟೀಕೆ: ಒಲಿಂಪಿಕ್ಸ್‌ ಚಿನ್ನ ವಿಜೇತ ಹಾಕಿ ಆಟಗಾರನಿಗೆ ನಿಷೇಧ

ಇಸ್ಲಾಮಾಬಾದ್‌: ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ರನ್ನು (Imran Khan) ಟೀಕಿಸಿದ್ದಕ್ಕಾಗಿ, 1984 ಒಲಿಂಪಿಕ್ಸ್‌ ಚಿನ್ನ ವಿಜೇತ ಪಾಕ್‌ ಹಾಕಿ ತಂಡದ ಸದಸ್ಯ ರಶೀದ್‌ ಉಲ್‌ ಹಸನ್‌ ಎಂಬವರಿಗೆ 10 ವರ್ಷಗಳ ನಿಷೇಧ ಹೇರಲಾಗಿದೆ ಎಂದು ವರದಿಯಾಗಿದೆ. 62 ವರ್ಷದ ರಶೀದ್‌, ಪ್ರಧಾನಿ ಇಮ್ರಾನ್‌ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎನ್ನಲಾಗಿದೆ. 

ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಹಾಕಿ ಫೆಡರೇಶನ್‌ ಗುರುವಾರ ರಶೀದ್‌ರನ್ನು 10 ವರ್ಷ ನಿಷೇಧಕ್ಕೊಳಪಡಿಸಿದೆ. ಆದರೆ ಫೆಡರೇಶನ್‌ನಲ್ಲಿ ಯಾವುದೇ ಹುದ್ದೆ ಹೊಂದಿಲ್ಲದ ರಶೀದ್‌ ಅವರು ನಿಷೇಧ ಆದೇಶಕ್ಕೆ ಆಶ್ವರ್ಯ ವ್ಯಕ್ತಪಡಿಸಿದ್ದಾರೆ.

ಪ್ರೊ ಕಬಡ್ಡಿ: ಬುಲ್ಸ್‌-ಡೆಲ್ಲಿ ಪಂದ್ಯ ಡ್ರಾ

ಬೆಂಗಳೂರು: 8ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ (Pro Kabaddi League) ಶುಕ್ರವಾರ ನಡೆದ ಬೆಂಗಳೂರು ಬುಲ್ಸ್‌ ಹಾಗೂ ದಬಾಂಗ್ ಡೆಲ್ಲಿ (Dabang Delhi) ನಡುವಿನ ಪಂದ್ಯ 36-36 ಅಂಕಗಳಿಂದ ಡ್ರಾಗೊಂಡಿತು. ಇದರೊಂದಿಗೆ ಡೆಲ್ಲಿ 57 ಅಂಕದೊಂದಿಗೆ ಅಗ್ರಸ್ಥಾನ, ಬುಲ್ಸ್‌ 54 ಅಂಕದೊಂದಿಗೆ 3ನೇ ಸ್ಥಾನದಲ್ಲಿದೆ. 

ಬೆಂಗಳೂರು ಬುಲ್ಸ್‌(Bengaluru Bulls) ಮೊದಲಾರ್ಧಕ್ಕೆ 14-18ರಿಂದ ಹಿನ್ನಡೆಯಲ್ಲಿತ್ತು. ಆದರೆ ದ್ವಿತೀಯಾರ್ಧದಲ್ಲಿ ಹೋರಾಟ ಪ್ರದರ್ಶಿಸಿ 34-24 ಅಂಕಗಳಿಂದ ಮುನ್ನಡೆ ಸಾಧಿಸಿತ್ತು. ಕೊನೆಯಲ್ಲಿ ಡೆಲ್ಲಿ ಸತತ ಅಂಕಗಳನ್ನು ಗಳಿಸಿ ಟೈ ಸಾಧಿಸಲು ಯಶಸ್ವಿಯಾಯಿತು. ಶುಕ್ರವಾರದ ಮೊದಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಹರ್ಯಾಣ ಸ್ಟೀಲ್ಸ್ 46-29 ಅಂಕಗಳಿಂದ ಗೆಲುವು ಸಾಧಿಸಿತು. 3ನೇ ಪಂದ್ಯದಲ್ಲಿ ಗುಜರಾತ್ ಫಾರ್ಚೂನ್ ಜೈಂಟ್ಸ್‌ ವಿರುದ್ಧ ಪಾಟ್ನಾ ಪೈರೇಟ್ಸ್‌ 43-23 ಅಂಕಗಳಿಂದ ಗೆದ್ದು, 2ನೇ ಸ್ಥಾನಕ್ಕೇರಿತು. 7ನೇ ಸೋಲುಂಡ ಗುಜರಾತ್ 11ನೇ ಸ್ಥಾನದಲ್ಲಿದೆ.  

ಫುಟ್ಬಾಲ್‌: ಭಾರತಕ್ಕೆ 2 ಸೌಹಾರ್ದ ಪಂದ್ಯ

ನವದೆಹಲಿ: 2023ರ ಎಎಫ್‌ಸಿ ಏಷ್ಯನ್‌ ಕಫ್‌ ಫುಟ್ಬಾಲ್‌ ಟೂರ್ನಿಯ ಅರ್ಹತಾ ಸುತ್ತಿನ ಸಿದ್ಧತೆಗಾಗಿ ಭಾರತ ಪುರುಷರ ತಂಡ ಬಹರೈನ್‌ ಹಾಗೂ ಬೆಲಾರಸ್‌ ವಿರುದ್ಧ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯಗಳನ್ನು ಆಡಲಿದೆ. ಪಂದ್ಯಗಳು ಬಹರೈನ್‌ ರಾಜಧಾನಿ ಮನಾಮದಲ್ಲಿ ನಡೆಯಲಿದ್ದು, ಫೆ.23ಕ್ಕೆ ಬಹರೈನ್‌, ಫೆ.26ಕ್ಕೆ ಬೆಲಾರಸ್‌ ವಿರುದ್ಧ ಸ್ಪರ್ಧಿಸಲಿದೆ. ಫಿಫಾ ರಾರ‍ಯಂಕಿಂಗ್‌ನಲ್ಲಿ ಬಹರೈನ್‌ 91, ಬೆಲಾರಸ್‌ 94 ಹಾಗೂ ಭಾರತ 104ನೇ ಸ್ಥಾನದಲ್ಲಿದೆ.

ಪ್ರೊ ಲೀಗ್‌: ದಕ್ಷಿಣ ಆಫ್ರಿಕಾಕ್ಕೆ ತೆರಳಿದ ಭಾರತ ಹಾಕಿ ತಂಡ

ಬೆಂಗಳೂರು: ಎಫ್‌ಐಎಚ್ ಪುರುಷರ ಪ್ರೊ ಲೀಗ್‌ನಲ್ಲಿ ಪಾಲ್ಗೊಳ್ಳಲು ಭಾರತ ಹಾಕಿ ತಂಡ ಶುಕ್ರವಾರ ದಕ್ಷಿಣ ಆಫ್ರಿಕಾದ ಜೋಹಾನ್‌ಸ್ಬರ್ಗ್‌ಗೆ ತೆರಳಿತು. ಮನ್‌ಪ್ರೀತ್ ಸಿಂಗ್ ನೇತೃತ್ವದ ತಂಡ ಫೆಬ್ರವರಿ 8, 12ರಂದು ಫ್ರಾನ್ಸ್‌ ವಿರುದ್ಧ, ಫೆ.9, 13ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲಿದೆ. ಅನಾರೋಗ್ಯದ ಕಾರಣ ಹಿರಿಯ ಆಟಗಾರ ಲಲಿತ್ ಕುಮಾರ್, ಮಿಡ್‌ಫೀಲ್ಡರ್ ಜಸ್ಕರನ್ ಸಿಂಗ್‌ರನ್ನು ಕೊನೆ ಕ್ಷಣದಲ್ಲಿ ತಂಡದಿಂದ ಕೈಬಿಡಲಾಯಿತು.

Latest Videos
Follow Us:
Download App:
  • android
  • ios