Asianet Suvarna News Asianet Suvarna News

ಫ್ರೆಂಚ್ ಓಪನ್: ಸೆಮೀಸ್ ಪ್ರವೇಶಿಸಿ ದಾಖಲೆ ಬರೆದ ನಾಡಿಯಾ

ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅರ್ಜೆಂಟೀ​ನಾದ ನಾಡಿಯಾ ಪೊಡೊ​ರೊಸ್ಕಾ ಸೆಮಿಫೈನಲ್ ಪ್ರವೇಶಿಸುವ ಮೂಲಕ ದಾಖಲೆ ಬರೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Argentine Nadia Podoroska scripts French Open history after reaching Semi finals
Author
Paris, First Published Oct 7, 2020, 12:04 PM IST
  • Facebook
  • Twitter
  • Whatsapp

ಪ್ಯಾರಿ​ಸ್(ಅ.07)‌: ಅರ್ಜೆಂಟೀ​ನಾದ ನಾಡಿಯಾ ಪೊಡೊ​ರೊಸ್ಕಾ, ಫ್ರೆಂಚ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಂನ ಮಹಿಳಾ ಸಿಂಗಲ್ಸ್‌ ಸೆಮಿ​ಫೈ​ನಲ್‌ ಪ್ರವೇ​ಶಿ​ಸಿದ್ದಾರೆ. 

ಕ್ವಾರ್ಟರ್‌ ಫೈನಲ್‌ನಲ್ಲಿ 3ನೇ ಶ್ರೇಯಾಂಕಿತೆ ಉಕ್ರೇನ್‌ನ ಎಲೆನಾ ಸ್ವಿಟೊಲಿನಾ ವಿರುದ್ಧ 6-2, 6-4 ಸೆಟ್‌ಗಳಲ್ಲಿ ಜಯ​ಗ​ಳಿ​ಸಿ​ದರು. ಈ ಮೂಲಕ ಅರ್ಹತಾ ಸುತ್ತಿ​ನಿಂದ ಪ್ರಧಾನ ಸುತ್ತಿಗೆ ಪ್ರವೇ​ಶಿಸಿ ಫ್ರೆಂಚ್‌ ಓಪನ್‌ ಸೆಮೀಸ್‌ಗೇರಿದ ಮೊದಲ ಆಟ​ಗಾರ್ತಿ ಎನ್ನುವ ದಾಖಲೆ ಬರೆ​ದಿ​ದ್ದಾರೆ.

ಫ್ರೆಂಚ್ ಓಪನ್: ಕ್ವಾರ್ಟರ್‌ಗೆ ಕ್ವಿಟೋವಾ, ಜೋಕೋ ಲಗ್ಗೆ

ವಿಶ್ವ ಶ್ರೇಯಾಂಕದಲ್ಲಿ 131ನೇ ಸ್ಥಾನ​ದ​ಲ್ಲಿ​ರುವ ಪೊಡೊ​ರೊಸ್ಕಾ, ಕಳೆದ ವಾರದ ವರೆಗೂ ಗ್ರ್ಯಾನ್‌ಸ್ಲಾಂ ಪ್ರಧಾನ ಸುತ್ತಿ​ನಲ್ಲಿ ಒಂದೂ ಪಂದ್ಯ ಜಯಿ​ಸಿ​ರ​ಲಿಲ್ಲ. ಇದೇ ವೇಳೆ ಸ್ಪೇನ್‌ನ ಕಾರ್ರೆನೊ ಬುಸ್ಟಾ ಪುರು​ಷರ 4ನೇ ಸುತ್ತಿನ ಪಂದ್ಯ​ದಲ್ಲಿ ಜಯಿ​ಸಿ ಕ್ವಾರ್ಟರ್‌ ಫೈನಲ್‌ಗೇರಿದ್ದು, ಸೆಮೀಸ್‌ನಲ್ಲಿ ಸ್ಥಾನಕ್ಕಾಗಿ ಅಗ್ರ ಶ್ರೇಯಾಂಕಿತ ನೋವಾಕ್‌ ಜೋಕೋ​ವಿಚ್‌ರನ್ನು ಎದು​ರಿ​ಸ​ಲಿ​ದ್ದಾರೆ.

Follow Us:
Download App:
  • android
  • ios