Asianet Suvarna News Asianet Suvarna News

ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಭಾರತ ತಂಡದ ಸಿದ್ಧತೆ ಪರಿಶೀಲಿಸಿದ ಕ್ರೀಡಾ ಸಚಿವ!

  • 2020 ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲಿರುವ ಭಾರತ ತಂಡದ ಸಿದ್ಧತೆ ಪರಿಶೀಲನೆ
  • ನೂತನ ಕ್ರೀಡಾ ಸಚಿವರಿಂದ 7ನೇ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಪರಿಶೀಲನೆ
  • ನಾಳೆ ಪ್ರಧಾನಿ ನರೇಂದ್ರ ಮೋದಿ ಕ್ರೀಡಾಪಟುಗಳೊಂದಿಗೆ ಸಂವಾದ
Anurag Thakur chairs High Level Committee to review preparation of Indian team for  Tokyo Olympics ckm
Author
Bengaluru, First Published Jul 12, 2021, 11:16 PM IST

ನವದೆಹಲಿ(ಜು.12):  ಪ್ರತಿಷ್ಠಿತ ಟೊಕಿಯೊ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭಾರತ ಸಕಲ ಸಿದ್ಧತೆ ನಡೆಸಿದೆ. ನಾಳೆ(ಜು.13) ಸಂಜೆ ಒಲಿಂಪಿಕ್ಸ್ ಪ್ರತಿನಿಧಿಸುತ್ತಿರುವ ಭಾರತೀಯ ಕ್ರೀಡಾಪಟುಗಳ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ. ಇದಕ್ಕೂ ಮೊದಲು 2020 ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲಿರುವ ಭಾರತ ತಂಡದ ಸಿದ್ಧತೆ ಕುರಿತು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ 7ನೇ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಪರಿಶೀಲನೆ ನಡೆಸಿದರು.

ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಗೋಪಿಚಂದ್ ಬೆಂಬಲಿತ ಧ್ಯಾನಾ ಜೊತೆ ಸಹಭಾಗಿತ್ವ ಘೋಷಿಸಿದ IOA!

ಯುವ ವ್ಯಹಾರಗಳು ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವ ಶ್ರೀ ನಿಶಿತ್ ಪ್ರಾಮಾಣಿಕ್ ಅವರು ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು. ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ಶ್ರೀ ರವಿ ಮಿತ್ತಲ್, ಭಾರತೀಯ ಕ್ರೀಡಾ ಪ್ರಾಧಿಕಾರ – ಎಸ್.ಎ.ಐ ನ ಮಹಾನಿರ್ದೇಶಕ ಶ್ರೀ ಸಂದೀಪ್ ಪ್ರಧಾನ್, ಒಲಿಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಶ್ರೀ ನರಿಂದರ್ ಬಾತ್ರಾ ಹಾಗೂ ಕ್ರೀಡಾ ಸಚಿವಾಲಯದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಒಲಿಂಪಿಕ್ಸ್ ಜ್ಯೋತಿ ಟೋಕಿಯೋಗೆ ಆಗಮನ

ಟೋಕಿಯೋ ಒಲಿಂಪಿಕ್ಸ್ ಗೆ ಆಯ್ಕೆಯಾಗಿರುವ ಆಟಗಾರರಿಗೆ ವಿಶ್ವದರ್ಜೆಯ ತರಬೇತಿ ಮತ್ತು ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ ಹಲವು ಆಯಾಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.ಶ್ರೀ ಅನುರಾಗ್ ಸಿಂಗ್  ಠಾಕೂರ್ ಅವರು  # ಚಿಯರ್ ಫಾರ್ ಇಂಡಿಯಾ ಅಭಿಯಾನದ ಪ್ರಗತಿ ಮತ್ತು ಮುಂಬರುವ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸುತ್ತಿರುವ ಅಥ್ಲೀಟ್ ಗಳನ್ನು ಪ್ರೇರೇಪಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಜುಲೈ 13 ರ ಸಂಜೆ 5 ಗಂಟೆಗೆ ನಡೆಸುತ್ತಿರುವ ಸಂವಾದದ ಕುರಿತ ಸಿದ್ಧತೆಗಳನ್ನು ಸಹ ಪರಿಶೀಲಿಸಿದರು.  ಪ್ರಧಾನಮಂತ್ರಿ ಅವರ ಈ ಸಂವಾದ ದೂರದರ್ಶನ ಮತ್ತು ಸರ್ಕಾರದ ವಿವಿಧ ಸಾಮಾಜಿಕ ಮಾಧ್ಯಮಗಳ ವೇದಿಕೆಗಳಲ್ಲೂ ನೇರ ಪ್ರಸಾರವಾಗಲಿದೆ.

Follow Us:
Download App:
  • android
  • ios