ಪುಲ್ಲೇಲ ಆಲ್ ಇಂಗ್ಲೆಂಡ್ ಚಾಂಪಿಯನ್ ಗರಿಗೆ 20 ವರ್ಷ; ಭಾರತದ ಬ್ಯಾಡ್ಮಿಂಟನ್‌ಗೆ ಹೊಸ ಸ್ವರ್ಶ!
20 ವರ್ಷದ ಹಿಂದೆ ಇದೇ ದಿನ ಭಾರತದ ಕೀರ್ತಿ ಪತಾಕೆ ವಿಶ್ವಮಟ್ಟದಲ್ಲಿ ಹಾರಾಡಿದ ದಿನ. ಅದಕ್ಕೆ ಕಾರಣ ಪುಲ್ಲೇಲ ಗೋಪಿಚಂದ್. 20 ವರ್ಷದ ಹಿಂದೆ ಹಾಗೂ ಕಳೆದ 20 ವರ್ಷದಲ್ಲಿ ಪುಲ್ಲೇಲ ಗೋಪಿಚಂದ್ ಭಾರತದ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಮಾಡಿದ ಕ್ರಾಂತಿ ಅಷ್ಟಿಷ್ಟಲ್ಲ. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.
ಹೈದರಾಬಾದ್(ಮಾ.11): ಪುಲ್ಲೇಲ ಗೋಪಿಚಂದ್. ಭಾರತದ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಪುಲ್ಲೇಲಕ್ಕಿಂತ ದೊಡ್ಡ ಹೆಸರು ಮತ್ತೊಂದಿಲ್ಲ. ಬ್ಯಾಡ್ಮಿಂಟನ್ ಪಟುವಾಗಿ, ಇದೀಗ ಮಾರ್ಗದರ್ಶಕನಾಗಿಯೂ ಪುಲ್ಲೇಲ ಸಾಧನೆ ಅಮೋಘ. ಇಂದು ಪುಲ್ಲೇಲ ಗೋಪಿಚಂದ್ ಮಾತ್ರವಲ್ಲ, ಭಾರತೀಯರಿಗೆ ವಿಶೇಷ ದಿನ. 20 ವರ್ಷಗಳ ಹಿಂದೆ ಇದೇ ದಿನ ಅಂಬೆಗಾಲಿಡುತ್ತಿದ್ದ ಭಾರತದ ಬ್ಯಾಡ್ಮಿಂಟನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜ್ರಂಭಿಸಿದ ದಿನವಾಗಿದೆ.
ಬ್ಯಾಡ್ಮಿಂಟನ್ ಆಟಗಾರರಿಗೆ ಪುಲ್ಲೇಲಾ ಗೋಪಿಚಂದ್ ವಾಟ್ಸ್‌ಆ್ಯಪ್‌ನಲ್ಲಿ ಪಾಠ
ಅದು 2001, ಮಾರ್ಚ್ 11. ಭಾರತ 2ನೇ ಬಾರಿಗೆ ಆಲ್ ಇಂಡಿಯಾ ಬ್ಯಾಡ್ಮಿಂಟನ್ ಚಾಂಪಿಯನ್ ಟ್ರೋಫಿ ಎತ್ತಿಹಿಡಿದಿತ್ತು. ಇದಕ್ಕೆ ಕಾರಣ ಪುಲ್ಲೇಲ ಗೋಪಿಚಂದ್. ಸೆಮಿಫೈನಲ್ ಪಂದ್ಯದಲ್ಲಿ ಅಂದಿನ ವಿಶ್ವದ ನಂಬರ್ 1 ಬ್ಯಾಡ್ಮಿಂಟನ್ ಪಟು, ಡೆನ್ಮಾರ್ಕ್‌ನ ಪೇಟರ್ ಗೇಡ್ ಮಣಿಸಿ ಫೈನಲ್ ಗೇರಿದ ಗೋಪಿಚಂದ್, ಪ್ರಶಸ್ತಿ ಸುತ್ತಿನಲ್ಲಿ ಚೀನಾದ ಚೆನ್ ಹಾಂಗ್ ಮಣಿಸಿ ಆಲ್ ಇಂಡಿಯಾ ಬ್ಯಾಡ್ಮಿಂಟನ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇದೀಗ ಈ ಚಾಂಪಿಯನ್‌ಗರಿಗ 20 ವರ್ಷ ಸಂದಿದೆ.
1980ರಲ್ಲಿ ಕನ್ನಡಿಗ ಪ್ರಕಾಶ್ ಪಡುಕೋಣೆ ಮೊದಲ ಬಾರಿಗೆ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಸಾಧನೆ ಮಾಡಿದ ಬಳಿಕ ಪುಲ್ಲೇಲ ಗೋಪಿಚಂದ್ 2001ರಲ್ಲಿ ಮತ್ತೆ ಚಾಂಪಿಯನ್ ಪ್ರಶಸ್ತಿ ಮೂಲಕ ಭಾರತದ ಬ್ಯಾಡ್ಮಿಂಟ್ ಕ್ರೀಡೆಗೆ ಹೊಸ ವೇಗ ನೀಡಿದರು.
ಪಿ.ವಿ ಸಿಂಧು ಬಯೋಪಿಕ್; ಪುಲ್ಲೇಲ ಪಾತ್ರಕ್ಕೆ ಬಾಲಿವುಡ್ ಹೀರೋ
2004ರ ಇಂಡಿಯನ್ ಏಷ್ಯನ್ ಸ್ಯಾಟಲೈಟ್ ಟೂರ್ನಿ ಬಳಿಕ ಗೋಪಿಚಂದ್ ಬ್ಯಾಡ್ಮಿಂಟನಗೆ ವಿದಾಯ ಹೇಳಿದ ಪುಲ್ಲೇಲ ಗೋಪಿಚಂದ್, ವಿಶ್ರಾಂತಿಗೆ ಜಾರಲಿಲ್ಲ. 2008ರಲ್ಲಿ ಪುಲ್ಲೇಲ್ ಹೈದರಾಬಾದ್‌ನಲ್ಲಿ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ ಆರಂಭಿಸಿದರು. ಇದೇ ಅಕಾಡೆಮಿಯಲ್ಲಿ ಗೋಪಿಚಂದ್ ಗರಡಿಯಲ್ಲಿ ಸೈನಾ ನೆಹ್ವಾಲ್, ಪಿವಿ ಸಿಂಧೂ, ಪಾರುಪಳ್ಳಿ ಕಶ್ಯಪ್, ಶ್ರೀಕಾಂತ್ ಕಿಡಂಬಿ, ಸಾಯಿ ಪ್ರಣೀತ್ ಸೇರಿದಂತೆ ಅಂತಾರಾಷ್ಟ್ರೀಯ ಪ್ರತಿಭೆಗಳು ಮಿಂಚುತ್ತಿದೆ.
ಗೋಪಿಚಂದ್ ಮಾರ್ಗದರ್ಶನದಲ್ಲಿ ಸೈನಾ ನೆಹ್ವಾಗ್ 2012ರ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಹಾಗೂ 2016ರ ಒಲಿಂಪಿಕ್ಸ್‌ನಲ್ಲಿ ಪಿವಿ ಸಿಂಧೂ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಗೋಪಿಂಚದ್ ಅಕಾಡಮೆಯಲ್ಲಿ ಸಾವಿರಾರು ಪ್ರತಿಭೆಗಳು ಭಾರತದ ಬ್ಯಾಡ್ಮಿಂಟನ್ ಭವಿಷ್ಯವನ್ನು ಉಜ್ವಲಗೊಳಿಸಲು ಅವಿರತ ಪ್ರಯತ್ನ ನಡೆಯುತ್ತಿದೆ.
ಸಿಂಧುಗೆ ಚಾಂಪಿಯನ್ ಕಿರೀಟ ತೊಡಿಸಿದ ಬಂಗಾರದ ಮನುಷ್ಯ!
ಗೋಪಿಚಂದ್ ಅವರಿಗೆ 1999ರಲ್ಲಿ ಅರ್ಜುನ ಪ್ರಶಸ್ತಿ, 2001ರಲ್ಲಿ ಖೇಲ್ ರತ್ನ ಪ್ರಶಸ್ತಿ, 2005ರಲ್ಲಿ ಪದ್ಮಶ್ರೀ, 2009ರಲ್ಲಿ ದ್ರೋಣಾಚಾರ್ಯ ಪ್ರಶಸ್ತಿ, 2014ರಲ್ಲಿ ಪದ್ಮಭೂಷಣ್ ಪ್ರಶಸ್ತಿ ಲಭಿಸಿದೆ.
ಪುಲ್ಲೇಲ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಗೆದ್ದು ಇಂದಿಗೆ 20 ವರ್ಷ ಸಂದಿದೆ. ಈ 20 ವರ್ಷದಲ್ಲಿ ಪುಲ್ಲೇಲ ಗೋಪಿಚಂದ್ ಭಾರತವನ್ನು ಅದರಲ್ಲೂ ಗೋಪಿಚಂದ್ ಅಕಾಡೆಮಿ ಮೂಲಕ ಹೈದರಾಬಾದ್‌ನ್ನು ಭಾರತದ ಬ್ಯಾಡ್ಮಿಂಟನ್ ಹಬ್ ಮಾಡಿದ್ದಾರೆ. ಭಾರತದ ಬ್ಯಾಡ್ಮಿಂಟನ್ ಕ್ಷೇತ್ರಕ್ಕೆ ಹೊಸ ರೂಪ, ಹೊಸ ಆಯಾಮ ಹಾಗೂ ಹೊಸ ವೇಗ ನೀಡಿದ ಗೋಪಿಚಂದ್‌ಗೆ ಸಲಾಂ.