ರೆಫ್ರಿಯ ಬೋಳು ತಲೆಯನ್ನೇ ಚೆಂಡೆಂದು ಭಾವಿಸಿದ ಕ್ಯಾಮರಾ ಮಾಡಿದ ಎಡವಟ್ಟು!
ಇದೊಂದು ವಿಚಿತ್ರ ಸುದ್ದಿ/ ರೆಫ್ರಿ ಬೋಳು ತಲೆಯನ್ನೇ ಚೆಂಡು ಎಂದುಕೊಂಡ ಕ್ಯಾಮರಾ/ ಎಲ್ಲವೂ ಎಡವಟ್ಟು/ ಕೃತಕ ಕ್ಯಾಮರಾ ಬಳಸಿ ಪೇಚಿಗೆ ಸಿಲುಕಿದರು
ಲಂಡನ್(ನ. 02) ಇದೊಂದು ವಿಚಿತ್ರದಲ್ಲಿ ವಿಚಿತ್ರ ಸುದ್ದಿ. ಹೋಟೆಲ್ ನಲ್ಲಿ ರೋಬೋಟ್ ಬಂತಂತೆ, ಟಿವಿ ನಿರೂಪಕಿ ಸಹ ರೋಬೋಟ್ ಅಂತೆ ಎಂದೆಲ್ಲಾ ಕೇಳಿದ್ದೇವು. ಇದು ಅದಕ್ಕಿಂತ ವಿಚಿತ್ರ!
ಸ್ಕಾಟ್ಲೆಂಡ್ ನಲ್ಲಿ ಫುಟ್ ಬಾಲ್ ಪಂದ್ಯವೊಂದು ನಡೆಯುತ್ತಿತ್ತು. ಎಲ್ಲವೂ ಚೆನ್ನಾಘಿಯೇ ಇತ್ತು. ಆದರೆ ಅತ್ತಿಂದಿತ್ತ ಓಡಾಡುವ ರೆಫ್ರಿ ಮಾತ್ರ ಬೋಳು ತಲೆಯವ. ಕೃತಕ ಬುದ್ಧಿಮತ್ತೆಯ ಕ್ಯಾಮರಾಕ್ಕೆ ಬೋಳು ತಲೆ ಯಾವುದು , ಚೆಂಡು ಯಾವುದು ಗೊತ್ತಾಗಿಲ್ಲ.
ಆನ್ ಲೈನ್ ಕ್ಲಾಸ್ ನಡುವೆಯೇ ಪತ್ನಿಯ ಸ್ತನ ಚುಂಬಿಸಿದ!
ರೆಫ್ರಿ ತಲೆಯನ್ನೇ ಚೆಂಡು ಅಂದುಕೊಂಡು ಹಿಂಬಾಲಿಸತೊಡಗಿದೆ. ತಪ್ಪು ಸಂದೇಶ ರವಾನಿಸಿ ವೀಕ್ಷಕರು ಗೊಂದಲಕ್ಕೆ ಸಿಲುಕುವಂತೆ ಮಾಡಿದೆ. ಶನಿವಾರ ಇನ್ ವರ್ನೆಸ್ ಕ್ಯಾಲೆಡೋನಿಯನ್ ಥಿಸೆಲ್ ಮತ್ತು ಐರ್ ಯುನೈಟಡ್ ನಡುವಿನ ಪಂದ್ಯದಲ್ಲಿ ಈ ಎಡವಟ್ಟಾಗಿದೆ. ಕ್ಯಾಮರಾಮೆನ್ ಬದಲು ಕೃತಕ ಬುದ್ಧಿಮತ್ತೆಯ ಕ್ಯಾಮರಾ ಬಳಸಲಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ದೊಡ್ಡ ವೈರಲ್ ಸುದ್ದಿಯಾಗಿದೆ.