ವಿಶ್ವ 10ಕೆ ರೇಸ್‌ ಕೇವಲ 62 ನಿಮಿಷದಲ್ಲಿ ಓಟ ಪೂರ್ಣಗೊಳಿಸಿದ 5 ತಿಂಗಳ ಗರ್ಭಿಣಿ

ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಎನ್ನುವುದಕ್ಕೆ ಮತ್ತೊಂದು ನಿದರ್ಶನ ಬೆಂಗಳೂರಿನಲ್ಲಿ ಸಿಕ್ಕಿದೆ. 5 ತಿಂಗಳ ಗರ್ಭಿಣಿಯೊಬ್ಬರು 10ಕೆ ರೇಸ್ ಪೂರ್ಣಗೊಳಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

5 month pregnant Ankita Gaur finishes TCS World 10K race in Bengaluru kvn

ಬೆಂಗಳೂರು(ಡಿ.24): ಕೊರೋನಾ ಕಾರಣದಿಂದಾಗಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ವರ್ಚುವಲ್‌ ವಿಶ್ವ 10ಕೆ ರೇಸ್‌ನಲ್ಲಿ ಅಂಕಿತಾ ಗೌರ್‌ ಎಂಬ 5 ತಿಂಗಳ ಗರ್ಭಿಣಿಯೊಬ್ಬರು ಭಾಗಿಯಾಗಿ ಕೇವಲ 62 ನಿಮಿಷಗಳಲ್ಲಿ ಓಟವನ್ನು ಪೂರ್ಣಗೊಳಿಸಿದ್ದಾರೆ. 

ಕಳೆದ 9 ವರ್ಷಗಳಿಂದ ಸತತವಾಗಿ ಓಡುತ್ತಿದ್ದೇನೆ. ಹೀಗಾಗಿ ಗರ್ಭಿಣಿಯಾಗಿದ್ದರೂ ರೇಸ್‌ನಲ್ಲಿ ಭಾಗವಹಿಸಬೇಕು ಎನ್ನುವ ಉತ್ಸಾಹವಿತ್ತು ಎಂದು ಅಂಕಿತಾ ಹೇಳಿದ್ದಾರೆ. ಓಡುವುದು ನನ್ನ ಪಾಲಿಗೆ ನಿತ್ಯದ ಚಟುವಟಿಕೆಯಿದ್ದಂತೆ. ನಾವು ಹೇಗೆ ಉಸಿರಾಡುತ್ತೇವೆಯೋ ಹಾಗೆಯೇ ಓಡುವುದು ನನಗೆ ಸಹಜ ಚಟುವಟಿಕೆಯಾಗಿದೆ ಎಂದು ಅಂಕಿತಾ ಗೌರ್ ಹೇಳಿದ್ದಾರೆ.

ಕ್ಲಬ್‌ ಗೋಲು: ಫುಟ್ಬಾಲ್ ದಿಗ್ಗಜ ಪೀಲೆ ದಾಖಲೆ ಮುರಿದ ಲಿಯೋನೆಲ್ ಮೆಸ್ಸಿ!

ನಿರಂತರವಾಗಿ ನಿಯಮಿತವಾಗಿ ಓಡುವುದು ಒಳ್ಳೆಯ ಚಟುವಟಿಕೆಯಾಗಿದೆ. ಪ್ರೆಗ್ನೆನ್ಸಿ ಸಮಯದಲ್ಲಿ ಓಡುವುದು ಒಳ್ಳೆಯ ವ್ಯಾಯಾಮ ಕೂಡಾ ಹೌದು. ನಾನು ಆರೋಗ್ಯ ಹದಗೆಟ್ಟಾಗ ಓಡುವುದನ್ನು ಬಿಟ್ಟಿದ್ದೇನು. ಇದನ್ನು ಹೊರತುಪಡಿಸಿ ಪ್ರತಿನಿತ್ಯ ನಾನು ಓಡುತ್ತೇನೆ ಎಂದು ಅಂಕಿತಾ ಗೌರ್ ಹೇಳಿದ್ದಾರೆ.

ಟಿಸಿಎಸ್‌ ವಿಶ್ವ 10ಕೆ ಆ್ಯಪ್‌ನಿಂದ ಹೊಸ ರೇಸ್‌ ಮಾದರಿಗಳನ್ನು ಓಟಗಾರರಿಗೆ ನೀಡಿದೆ. ಆ್ಯಪ್‌ನಲ್ಲಿ ನೋಂದಾಣಿ ಮಾಡಿಕೊಂಡ ಓಟಗಾರರು ಡಿ.20 ರಿಂದ 27 ರವರೆಗೆ ಓಟ ನಡೆಸಿ ಅಪ್‌ಲೋಡ್‌ ಮಾಡಲು ಅವಕಾಶ ಕಲ್ಪಿಸಿದೆ. ಇದರಿಂದಾಗಿ ವಿಶ್ವದಾದ್ಯಂತ ಓಟಗಾರರು ಭಾಗವಹಿಸಬಹುದಾಗಿದೆ.
 

Latest Videos
Follow Us:
Download App:
  • android
  • ios