ನವದೆಹಲಿ(ಡಿ.04): ಡಿಸೆಂಬರ್ 12 ರಿಂದ 18 ರವರೆಗೆ ಕುಸ್ತಿ ವಿಶ್ವಕಪ್‌ ನಡೆಸಲು ನಿರ್ಧರಿಸಲಾಗಿದೆ. ಸರ್ಬಿಯಾದ ಬೆಲಾಗ್ರೇಡ್‌ನಲ್ಲಿ ಕೂಟ ನಡೆಯಲಿದ್ದು, ಭಾರತದ ತಾರಾ ಕುಸ್ತಿಪಟುಗಳಾದ ದೀಪಕ್‌ ಪೂನಿಯಾ, ರವಿಕುಮಾರ್‌ ದಹಿಯಾ ಸೇರಿದಂತೆ 24 ಮಂದಿ ಭಾಗವಹಿಸಲಿದ್ದಾರೆ.ಭಾರತ ಕುಸ್ತಿ ಒಕ್ಕೂಟ (ಡಬ್ಲ್ಯೂಎಫ್‌ಐ) ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ. 

42 ಮಂದಿಯ ಪೈಕಿ 24 ಮಂದಿ ಕುಸ್ತಿಪಟುಗಳು, 9 ಮಂದಿ ಕೋಚ್‌ಗಳು, 3 ಮಂದಿ ಸಹಾಯಕ ಸಿಬ್ಬಂದಿ ಹಾಗೂ 3 ರೆಫ್ರಿಗಳು ಸರ್ಬಿಯಾದ ಬೆಲಾಗ್ರೇಡ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಮಾರ್ಚ್‌ನಲ್ಲಿ ಲಾಕ್‌ಡೌನ್ ಬಳಿಕ ಭಾರತೀಯ ಕುಸ್ತಿಪಟುಗಳು ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಆಸೀಸ್‌ ಗೆಳತಿಗೆ ಸಿಡ್ನಿಲೀ ಪ್ರಪೋಸ್ ಮಾಡಿದವ ಬೆಂಗ್ಳೂರಿಗ

ಡಿಸೆಂಬರ್ 12 ಹಾಗೂ 13 ರಂದು ಗ್ರೀಕೋ ರೋಮನ್‌ ವಿಭಾಗದ ಸ್ಪರ್ಧೆಗಳು ನಡೆಯಲಿವೆ. ಬಳಿಕ ಮಹಿಳಾ ಫ್ರೀಸ್ಟೈಲ್‌ ವಿಭಾಗ, ಆ ನಂತರ ಪುರುಷರ ಫ್ರೀಸ್ಟೈಲ್‌ ವಿಭಾಗದ ಸ್ಪರ್ಧೆಗಳು ನಡೆಯಲಿವೆ. ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಬೇಕಿರುವ ಹಿನ್ನೆಲೆಯಲ್ಲಿ ಭಾರತ ತಂಡದ ಸ್ಪರ್ಧಿಗಳು ಬೆಲಾಗ್ರೇಡ್‌ಗೆ ಮುಂಚಿತವಾಗಿ ಪ್ರಯಾಣ ಬೆಳೆಸಲಿದ್ದಾರೆ.

ಭಾರತ ತಂಡ:

ಫ್ರೀಸ್ಟೈಲ್‌: ರವಿಕುಮಾರ್‌, ರಾಹುಲ್‌, ನವೀನ್‌, ನರಸಿಂಗ್‌, ಗೌರವ್‌, ದೀಪಕ್‌, ಸತ್ಯವರ್ತ್‍, ಸುಮಿತ್‌

ಗ್ರೀಕೋ ರೋಮನ್‌: ಅರ್ಜುನ್‌, ಗ್ಯಾನೇಂದ್ರ, ಸಚಿನ್‌, ಅಶು, ಆದಿತ್ಯ, ಸಾಜನ್‌, ಗುರುಪ್ರೀತ್‌, ಸುನಿಲ್‌, ಹರ್‌ದೀಪ್‌, ನವೀನ್‌

ಮಹಿಳಾ ತಂಡ: ನಿರ್ಮಲಾ, ಪಿಂಕಿ, ಅನ್ಶು, ಸರಿತಾ, ಸೋನಮ್‌, ಸಾಕ್ಷಿ, ದಿವ್ಯಾ, ಗುರುಶರಣ್‌, ಕಿರಣ್‌.