Asianet Suvarna News Asianet Suvarna News

ಜಿಲ್ಲಾ ಪಂಚಾಯತ್ ಸಿಇಒ ಕಾರು ಪಲ್ಟಿ

ಹಾವೇರಿ ಜಿಲ್ಲಾ ಪಂಚಾಯತ್ ಸಿಇಒ ಕಾರು ಪಲ್ಟಿಯಾಗಿ ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದೆ. 

Zilla Panchayat CEO Car overturns
Author
Bengaluru, First Published Oct 15, 2018, 8:48 AM IST
  • Facebook
  • Twitter
  • Whatsapp

ಹಾವೇರಿ: ಇಲ್ಲಿಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ನಾಗ್ ಅವರು ಪ್ರಯಾಣಿಸುತ್ತಿದ್ದ ಕಾರು ಪಲ್ಟಿಯಾಗಿ ಅವರೂ ಸೇರಿದಂತೆ ನಾಲ್ವರು ತೀವ್ರ ಗಾಯಗೊಂಡ ಘಟನೆ ಇಲ್ಲಿಗೆ ಸಮೀಪದ ದೇವಗಿರಿ ಬಳಿ ಭಾನುವಾರ ಸಂಭವಿಸಿದೆ. 

ಜಿಪಂ ಸಿಇಒ ಶಿಲ್ಪಾ ನಾಗ್, ಅವರ 12 ವರ್ಷದ ಮಗ ರಿಶಿ, ಸ್ನೇಹಿತೆ ಅರ್ಚನಾ ಪಿಳ್ಳೈ ಹಾಗೂ ಅರ್ಚನಾ ಅವರ ಪತಿ ವಿಶ್ವನಾಥ ಅಯ್ಯರ್ ಅವರಿಗೆ ಅಪಘಾತದಲ್ಲಿ ಗಾಯವಾಗಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ದೇವಗಿರಿಯಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಕಾರು ನಿಯಂತ್ರಣ ತಪ್ಪಿ ಎದುರಿಗಿದ್ದ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಬಾಗಿಲು ತೆಗೆಯಲು ಸಾಧ್ಯವಾಗದೇ ಹಿಂಭಾಗದ ಗಾಜು ಒಡೆದು ಎಲ್ಲರೂ ಕಾರಿನಿಂದ ಹೊರಬಿದ್ದಿದ್ದಾರೆ. 

(ಸಾಂದರ್ಬಿಕ ಚಿತ್ರ)

Follow Us:
Download App:
  • android
  • ios