ಮೆದುಳು ಕ್ಯಾನ್ಸರ್ ಹೊಂದಿರುವವರಿಗೆ ಈ ಜೀಕಾ ವೈರಾಣುಗಳನ್ನು ನೇರವಾಗಿ ಮೆದುಳಿಗೆ ನೀಡುವ ಮೂಲಕ ಕ್ಯಾನ್ಸರ್ ವಾಸಿ ಮಾಡಬಹುದಾಗಿದೆ.
ವಾಷಿಂಗ್ಟನ್(ಸೆ.07): ದಕ್ಷಿಣ ಅಮೆರಿಕ ದೇಶಗಳಲ್ಲಿ ಸಹಸ್ರಾರು ಕಂದಮ್ಮಗಳನ್ನು ಬಲಿ ಪಡೆದಿರುವ ಅತ್ಯಂತ ಮಾರಕ ‘ಜೀಕಾ’ ವೈರಾಣು ವಿರುದ್ಧ ಪ್ರಬಲ ಔಷಧವೊಂದನ್ನು
ಹುಡುಕಲು ಅವಿರತವಾಗಿ ಶ್ರಮಿಸಿದ ವೈದ್ಯರು, ಆ ವೈರಾಣು ಬಳಸಿ ಮತ್ತೊಂದು ಭಯಾನಕ ರೋಗ ವಾಸಿ ಮಾಡಬಹುದು ಎಂಬುದನ್ನು ಪತ್ತೆ ಮಾಡಿದ್ದಾರೆ.
ಲಭ್ಯವಿರುವ ಚಿಕಿತ್ಸೆಗಳಿಗೆ ಪ್ರತಿರೋಧಕ ಗುಣ ಬೆಳೆಸಿಕೊಂಡಿರುವ, ಮೆದುಳು ಕ್ಯಾನ್ಸರ್'ಗೆ ಕಾರಣವಾಗುವ ಕೋಶಗಳನ್ನು ಜೀಕಾ ವೈರಸ್ ಕೊಂದು ಹಾಕುತ್ತದೆ ಎಂಬುದನ್ನು ವಿಜ್ಞಾನಿಗಳು ಸಂಶೋಧನೆ ನಡೆಸಿ ಕಂಡುಕೊಂಡಿದ್ದಾರೆ.
‘ಗ್ಲಿಯೋಬ್ಲಾಸ್ಟೋಮಾ’ ಎಂಬ ಮೆದುಳಿನ ಕ್ಯಾನ್ಸರ್ ಮಾನವರಿಗೆ ಅತ್ಯಂತ ಅಪಾಯಕಾರಿ ರೋಗವಾಗಿದೆ. ಅದು ಪತ್ತೆಯಾದ ಒಂದು ವರ್ಷದೊಳಗಾಗಿ ರೋಗಿಗಳು ಸಾವನ್ನಪ್ಪುತ್ತಾರೆ. ಈ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ಗುಣ ಜೀಕಾ ವೈರಾಣುಗಳಿಗೆ ಇದೆ ಎಂದು ಅಮೆರಿಕದ ವಾಷಿಂಗ್ಟನ್ ವಿವಿಯ ಪ್ರಾಧ್ಯಾಪಕ ಮೈಕಲ್ ಎಸ್. ಡೈಮಂಡ್ ತಿಳಿಸಿದ್ದಾರೆ.
ಮೆದುಳು ಕ್ಯಾನ್ಸರ್ ಹೊಂದಿರುವವರಿಗೆ ಈ ಜೀಕಾ ವೈರಾಣುಗಳನ್ನು ನೇರವಾಗಿ ಮೆದುಳಿಗೆ ನೀಡುವ ಮೂಲಕ ಕ್ಯಾನ್ಸರ್ ವಾಸಿ ಮಾಡಬಹುದಾಗಿದೆ.
