ಇಂದಿರಾ ಅವರು ಪ್ರಧಾನಿ ಆಗಿದ್ದಾಗ 14 ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿದರು. ಆರ್ಥಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಮಹಾನ್ ಬದಲಾವಣೆ ತಂದರು. ಬಡವರಿಗೆ ಬ್ಯಾಂಕಿನ ಬಾಗಿಲು ತೆರೆದದ್ದು ಇಂದಿರಾ ಗಾಂ. ಆಗಲೂ ಕೆಲ ಪಟ್ಟಭದ್ರರು ಇಂದಿರಾ ಆಡಳಿತ ಸುಧಾರಣೆಯನ್ನು ವಿರೋಸಿದ್ದರು. ಪ್ರತಿ ಬಾರಿ ವಿರೋಧ ವ್ಯಕ್ತವಾದಾಗಲೂ ಇಂದಿರಾ ಗಾಂ ಬಲಿಷ್ಠರಾಗುತ್ತಾ ಹೋದರು
ಮಂಗಳೂರು(ನ.20): ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳೂರು ನೆಹರೂ ಮೈದಾನದಲ್ಲಿ ಶನಿವಾರ ಕೆಪಿಸಿಸಿ ಆಯೋಜಿಸಿದ್ದ ಮಾಜಿ ಪ್ರಧಾನಿ ದಿ.ಇಂದಿರಾ ಗಾಂ ಅವರ ರಾಜ್ಯ ಮಟ್ಟದ ಜನ್ಮಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಇಂದಿರಾ ಅವರ ತ್ಯಾಗ, ಬಲಿದಾನ ಎಲ್ಲರಿಗೂ ಸೂರ್ತಿಯಾಗಬೇಕು. ಇಂದಿರಾ ಜನ್ಮದಿನವನ್ನು ಭಾವೈಕ್ಯ ಹಾಗೂ ಏಕತೆಯ ದಿನವಾಗಿ ಆಚರಿಸಲಾಗುವುದು. ಇದರ ನೆನಪಿನಲ್ಲಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಶೇ.4 ಬಡ್ಡಿದರದಲ್ಲಿ ನೀಡುತ್ತಿದ್ದ ಸಾಲವನ್ನು ಶೂನ್ಯ ಬಡ್ಡಿದರಕ್ಕೆ ಇಳಿಸಲು ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.
ಇಂದಿರಾ ಅವರು ಪ್ರಧಾನಿ ಆಗಿದ್ದಾಗ 14 ಬ್ಯಾಂಕ್ಗಳ ರಾಷ್ಟ್ರೀಕರಣ ಮಾಡಿದರು. ಆರ್ಥಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಮಹಾನ್ ಬದಲಾವಣೆ ತಂದರು. ಬಡವರಿಗೆ ಬ್ಯಾಂಕಿನ ಬಾಗಿಲು ತೆರೆದದ್ದು ಇಂದಿರಾ ಗಾಂ. ಆಗಲೂ ಕೆಲ ಪಟ್ಟಭದ್ರರು ಇಂದಿರಾ ಆಡಳಿತ ಸುಧಾರಣೆಯನ್ನು ವಿರೋಸಿದ್ದರು. ಪ್ರತಿ ಬಾರಿ ವಿರೋಧ ವ್ಯಕ್ತವಾದಾಗಲೂ ಇಂದಿರಾ ಗಾಂ ಬಲಿಷ್ಠರಾಗುತ್ತಾ ಹೋದರು ಎಂದರು.
ಇದೇ ವೇಳೆ, ಅಕಾರಕ್ಕೆ ಬಂದರೆ ಸಾಲ ಮನ್ನಾ ಮಾಡುವುದಾಗಿ ಜೆಡಿಎಸ್ ಕೂಡ ಹೇಳುತ್ತಿದೆ. ಅವರು ಅಕಾರಕ್ಕೆ ಬರುವುದೇ ಇಲ್ಲ. ಮತ್ತೆ ಸಾಲ ಮನ್ನಾ ಎಲ್ಲಿ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಇದಕ್ಕೂ ಮೊದಲು ಮಹಾನಗರ ಪಾಲಿಕೆ ನೆಹರೂ ಮೈದಾನದಲ್ಲಿ ನಿರ್ಮಿಸಿದ ಮಾಜಿ ಪ್ರಧಾನಿ ದಿ.ಜವಾಹರಲಾಲ್ ನೆಹರೂ ಅವರ ಪ್ರತಿಮೆಯನ್ನು ಸಿಎಂ ಸಿದ್ದರಾಮಯ್ಯ ಅನಾವರಣಗೊಳಿಸಿದರು.
ಗೂಂಡಾ ಕಾಯ್ದೆ: ರಾಜ್ಯದಲ್ಲಿ ಮತಾಂಧ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಗೂಂಡಾ ಕಾಯಿದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ. ಕರಾವಳಿಯಲ್ಲಿ ಇತ್ತೀಚೆಗೆ ನಡೆದಿರುವ ಅಹಿತಕರ ಘಟನೆಗಳಿಗೆ ಸಂಬಂಸಿ ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದ್ದು, ಮತೀಯ ಗಲಭೆಗಳಿಗೆ ಅವಕಾಶ ಒದಗಿಸುವುದಿಲ್ಲ ಎಂದರು.
ಕ್ಯೂನಲ್ಲಿ ನಿಂತವರು ಬಂಡವಾಳಶಾಹಿಗಳಲ್ಲ
ಮೈಸೂರು: ನೋಟು ರದ್ದತಿ ಬಳಿಕ ಹಣಕ್ಕಾಗಿ ಕ್ಯೂನಲ್ಲಿ ನಿಂತು ಸತ್ತಿರುವ 42 ಮಂದಿ ಬಡವರೇ ಹೊರತು, ಬಂಡವಾಳ ಶಾಹಿಗಳಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, 1978ರಲ್ಲಿ ಮೊರಾರ್ಜಿ ದೇಸಾಯಿ ಅವರೂ ನೋಟು ನಿಷೇಸಿದ್ದರು. ಆದರೆ ಈಗ ಕಾಳಧನಿಕರು ಕ್ಯೂನಲ್ಲಿ ನಿಂತಿಲ್ಲ. 42 ಮಂದಿ ಸತ್ತಿರುವವರು ಬಡವರೇ ಹೊರತು, ಬಂಡವಾಳ ಶಾಹಿಗಳಲ್ಲ. ನ್ಯಾಯಾಲಯಕ್ಕೂ ಅರಿವಾಗಿದೆ. ಬಡವರ ಬವಣೆ ಗೊತ್ತಾಗಿದೆ. ಕೆಲಸಕ್ಕೆ ಹೋಗದೆ ಸಾಮಾನ್ಯ ಜನ ಕ್ಯೂನಲ್ಲಿ ನಿಂತಿದ್ದಾರೆ. ಜನಸಾಮಾನ್ಯರು, ರೈತರು, ವ್ಯಾಪಾರಿಗಳು ತೊಂದರೆ ಪಡುತ್ತಿದ್ದಾರೆ. ಕೇಂದ್ರ ಸರ್ಕಾರ 100 ಮತ್ತು 500 ನೋಟು ಮುದ್ರಿಸಿ ಸಿದ್ಧತೆ ಮಾಡಿಕೊಂಡು ನಿಷೇಸಬೇಕಿತ್ತು. ಪ್ರಚಾರಕ್ಕಾಗಿ ಮಾಡಬಾರದಿತ್ತು ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ನವರು ಕಪ್ಪು ಹಣವನ್ನು ಬಿಳಿ ಮಾಡುತ್ತಿದ್ದಾರೆ ಎಂಬ ಸಂಸದೆ ಶೋಭಾ ಕರಂದ್ಲಾಜೆ ಆರೋಪಕ್ಕೆ ಗರಂ ಆದ ಸಿಎಂ, ಮಹಾರಾಷ್ಟ್ರದಲ್ಲಿ ಅಕ್ರಮವಾಗಿ ನೋಟು ಸಾಗಿಸುವಾಗ ಸಿಕ್ಕಿಬಿದ್ದಿರುವುದು ಬಿಜೆಪಿ ಮಂತ್ರಿಯೇ ಹೊರತು ಕಾಂಗ್ರೆಸ್ನವರಲ್ಲ ಎಂದು ಕಿಡಿಕಾರಿದರು.
