ಕಾಲು ಸೂಪ್, ಬಿರಿಯಾನಿ, ಬೋಟಿ ಕಲೀಜ ಕೊಡಿಸ್ತಾರೆ ಅಂತಾ ಯಾರ್ಯಾರಿಗೋ ಮತ ಹಾಕಬೇಡಿ: ಮುಸ್ಲೀಮರಿಗೆ ಜಮ್ಮೀರ್ ಅಹ್ಮದ್ ಕರೆ

First Published 31, Jan 2018, 10:54 AM IST
Zamer Ahmad Critises HDK
Highlights

ಕುಮಾರಸ್ವಾಮಿ ಏನೋ ಹುಟ್ಟಿದಾಗಲೇ ಚಡ್ಡಿ ಹಾಕಿಕೊಂಡು ಹುಟ್ಟಿದ್ರು ಅನ್ನಿಸ್ತಿದೆ ಎಂದು  ಮುಸ್ಲಿಂ ಸಮುದಾಯದ ಜನರನ್ನು ಉದ್ದೇಶಿಸಿ ಮಾತನಾಡುವ ವೇಳೆ ಜಮೀರ್ ಎಚ್'ಡಿಕೆ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಬೆಂಗಳೂರು (ಜ.31): ಕುಮಾರಸ್ವಾಮಿ ಏನೋ ಹುಟ್ಟಿದಾಗಲೇ ಚಡ್ಡಿ ಹಾಕಿಕೊಂಡು ಹುಟ್ಟಿದ್ರು ಅನ್ನಿಸ್ತಿದೆ ಎಂದು  ಮುಸ್ಲಿಂ ಸಮುದಾಯದ ಜನರನ್ನು ಉದ್ದೇಶಿಸಿ ಮಾತನಾಡುವ ವೇಳೆ ಜಮೀರ್ ಎಚ್'ಡಿಕೆ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಬೆಳಗ್ಗೆ ಕಾಲು ಸೂಪ್, ಮಧ್ಯಾಹ್ನ ಬಿರಿಯಾನಿ, ರಾತ್ರಿ ಬೋಟಿ ಕಲೀಜ ಕೊಡಿಸ್ತಾರೆ ಅಂತಾ ತಿಂದು ಯಾರು ಯಾರಿಗೋ ವೋಟ್ ಹಾಕಿ 5 ವರ್ಷ ಹಾಳು ಮಾಡಬೇಡಿ. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ.  ಮುಂದಿನ 5 ವರ್ಷದ ಬಗ್ಗೆ ಯೋಚನೆ ಮಾಡಿ,  ಸಿದ್ದರಾಮಯ್ಯ ಸರ್ಕಾರ ಬರುತ್ತೆ. ಮುಸ್ಲಿಂ ಸಮುದಾಯಕ್ಕೆ ಒಳ್ಳೇದು ಮಾಡ್ತಾರೆ ಎಂದಿದ್ದಾರೆ.

 ಈ ಬಾರಿ ಜೆಡಿಎಸ್ ಪಕ್ಷಾನೂ  ಅಧಿಕಾರಕ್ಕೆ ಬರಲ್ಲ. ಬಿಜೆಪಿನೂ ಅಧಿಕಾರಕ್ಕೆ ಬರಲ್ಲ. ಜನತಾದಳಕ್ಕೆ ಮತ ಹಾಕಿದ್ರೆ ಅದು ಬಿಜೆಪಿಗೇ ಮತ ಹಾಕಿದಂತಾಗುತ್ತದೆ. ಯಾವುದೇ ಪರಿಸ್ಥಿತಿಯಲ್ಲೂ ಜನತಾದಳದ ನಾಯಕರು ಕಾಂಗ್ರೆಸ್ ಪಕ್ಷದ ಜತೆಗೆ ಸರ್ಕಾರ ಮಾಡಲ್ಲ. ಕುಮಾರಸ್ವಾಮಿ ಹುಟ್ಟುವಾಗಲೇ ಚಡ್ಡಿ ಹಾಕಿಕೊಂಡೆ ಹುಟ್ಟಿದ್ದಾರೋ ಗೊತ್ತಾಗ್ತಿಲ್ಲ. ದೇವೇಗೌಡರನ್ನು ಒಪ್ಪಿಕೊಳ್ತೀನಿ, ದೇವೇಗೌಡರು ಜಾತ್ಯತೀತ. ಕುಮಾರ ಸ್ವಾಮಿಯಲ್ಲಿ ಶೇಕಡಾ 10ರಷ್ಟು ಜಾತ್ಯತೀತತೆ ಅಂಶ ಇಲ್ಲ. ನೀವು ಜೆಡಿಎಸ್ ಗೆ ಮತ ಹಾಕಿದ್ರೆ ಅವರು 100 ಪರ್ಸೆಂಟ್ ಬಿಜೆಪಿ ಜತೆಗೆ ಹೋಗ್ತಾರೆ. ದಯವಿಟ್ಟು ನಿಮ್ಮ ಮತ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ್ ಗೆ ಹಾಕಿ ಎಂದು ಜಮ್ಮೀರ್ ಅಹ್ಮದ್ ಹೇಳಿದ್ದಾರೆ.  

loader