ಶಾಸಕನ ವಿವಾದದ ಮಾತು

ತುಮಕೂರು(ಅ.15): ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ಮಾಜಿ ಸಚಿವ ಎಚ್.ಡಿ.ರೇವಣ್ಣ ಅರನ್ನು ಟೀಕಿಸುವ ಭರದಲ್ಲಿ ಸಭ್ಯತೆ ಮೀರಿ ಮಾತನಾಡಿದ್ದಾರೆ.

ದೇವೇಗೌಡರು ಇರುವರೆಗೂ ಜನತಾದಳ ಇರುತ್ತೆ. ದೇವೇಗೌಡರು ಸತ್ತನಂತರ ಜನತಾದಳ ಇರಲ್ಲ. ರೇವಣ್ಣ ಇದನ್ನು ಬರೆದಿಟ್ಟುಕೊಳ್ಳಬೇಕು. ದೇವೇಗೌಡರು ಸತ್ತ 11 ದಿನದ ತಿಥಿ ಕಾರ್ಯವರೆಗೂ ರೇವಣ್ಣ ಕಾಯದೇ ‘ಅಣ್ಣಾ ನನಗೆ ಕಾಂಗ್ರೆಸ್ ಗೆ ಸೇರಿಸಿ’ ಎಂದು ಬರುತ್ತಾನೆ. ಬೇಕಾದರೆ ಬರೆದಿಟ್ಟುಕೊಳ್ಳಿ ಎಂದು ಜಮೀರ್ ಅಹಮದ್ ಹೇಳಿದ್ದಾರೆ. ಅಕ್ಟೋಬರ್ 8 ರಂದು ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಸ್ಥಳೀಯ ವಾಹಿನಿಗಳಿಗೆ ನೀಡಿದ ಸಂದರ್ಶನದಲ್ಲಿ ಈ ರೀತಿ ಅಸಭ್ಯವಾಗಿ ಮಾತನಾಡಿದ್ದಾರೆ. ಜಮೀರ್ ಅವರ ಈ ಹೇಳಿಕೆಗೆ ಭಾರೀ ಟೀಕೆ ವ್ಯಕ್ತವಾಗಿದೆ.

(ಸಂಗ್ರಹ ಫೋಟೊ)