’ನನ್ನ  ವಿರುದ್ಧ  ಕರ್ನಾಟಕದ ಮುಸ್ಲಿಂಮರು ಮಾತ್ರವಲ್ಲ, ಜಮ್ಮು ಕಾಶ್ಮೀರದ ಮುಸ್ಲೀಮರನ್ನು ಕರೆ ತಂದ್ರೂ ಹೆದರಲ್ಲ’

First Published 2, Apr 2018, 2:45 PM IST
Zameer Ahmed  Tang to Congress
Highlights

ಅಲ್ತಾಫ್  ಪಾಷಾ ಜೆಡಿಎಸ್ ಸೇರ್ಪಡೆಯಲ್ಲಿ  ಹಿನ್ನೆಲೆಯಲ್ಲಿ  ಜಮೀರ್ ಅಹಮದ್ ಹೇಳಿಕೆ ನೀಡಿದ್ದಾರೆ.  ಅಲ್ತಾಫ್ ಮೊದಲು ಕಾಂಗ್ರೆಸ್’ನಲ್ಲಿದ್ದರು.  ಈಗ ಜೆಡಿಎಸ್’ಗೆ  ಬಂದಿದ್ದಾರೆ ಎಂದಿದ್ದಾರೆ.  

ಬೆಂಗಳೂರು  (ಏ. 02):   ಅಲ್ತಾಫ್  ಪಾಷಾ ಜೆಡಿಎಸ್ ಸೇರ್ಪಡೆಯಲ್ಲಿ  ಹಿನ್ನೆಲೆಯಲ್ಲಿ  ಜಮೀರ್ ಅಹಮದ್ ಹೇಳಿಕೆ ನೀಡಿದ್ದಾರೆ.  ಅಲ್ತಾಫ್ ಮೊದಲು ಕಾಂಗ್ರೆಸ್’ನಲ್ಲಿದ್ದರು.  ಈಗ ಜೆಡಿಎಸ್’ಗೆ  ಬಂದಿದ್ದಾರೆ ಎಂದಿದ್ದಾರೆ.  

ನನ್ನ  ವಿರುದ್ಧ  ಕರ್ನಾಟಕದ ಮುಸ್ಲಿಂಮರು ಸಾಕಾಗಲ್ಲ.  ಜಮ್ಮು ಕಾಶ್ಮೀರದ ಫಾರೂಕ್ ಅಬ್ದುಲ್ಲಾರನ್ನೇ  ಕರೆ ತಂದು ನಿಲ್ಲಿಸಲಿ. ನಾನು  ಹೆದರುವವನಲ್ಲ.  ನಾನು ನಾಲ್ಕೂವರೆ ಅಡಿ ಇದ್ದೇನೆ ಎಂದು ವ್ಯಂಗ್ಯವಾಡಿದ್ದಾರೆ.  ಅಮಿತಾಬ್ 7  ಅಡಿ ಸಚಿನ್ ಮೂರವರೆ ಅಡಿ ಇದ್ದಾರೆ.  ಇಬ್ಬರಲ್ಲಿ ಯಾರು ಫೇಮಸ್ಸು?  ತೆಂಡೂಲ್ಕರ್  ಹೆಚ್ಚು ಫೇಮಸ್  ಅಲ್ವಾ? ಅಲ್ತಾಫ್ 6 ಅಡಿ ಇದ್ದರೇನಂತೆ? ನಾನು ಸಚಿನ್ ತೆಂಡೂಲ್ಕರ್'ನಂತೆ ಎಂದಿದ್ದಾರೆ.  

ಶರವಣ ಬಗ್ಗೆ ನಾನು ಮಾತನಾಡುವುದಿಲ್ಲ.  ಶರವಣ ರಾಜಕಾರಣಿಯೇ ಅಲ್ಲ.  ಬಂಗಾರದ ವ್ಯಾಪಾರ ಮಾಡಿ ಎಂಎಲ್’ಸಿಯಾದವರು.  ನನ್ನ ವಿರುದ್ಧ ಅಲ್ಲಿ ಗೆದ್ದು ತೋರಿಸಲಿ.  ಈಗಾಗಲೇ ಹೇಳಿದ್ದೇನೆ ತಲೆ ಕತ್ತರಿಸಿಕೊಳ್ಳುತ್ತೇನೆ ಎಂದು.  ಈಗಲೂ ಆಮಾತಿಗೆ ನಾನು ಬದ್ಧ ಎಂದು 
ಜಮೀರ್ ಅಹ್ಮದ್ ಟಾಂಗ್ ನೀಡಿದ್ದಾರೆ. 
 

loader