ಸಿದ್ದರಾಮಯ್ಯ ಬಳಸಿದ ಅದೃಷ್ಟದ ಕಾರು ಕೊನೆಗೂ ಜಮೀರ್‌ಗೆ ಸಿಕ್ತು!

Zameer Ahmed Khan get Fortuner Car from Siddaramaiah
Highlights

ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿಯಾದ ಬಳಿಕ ಅವರು ಸರ್ಕಾರಕ್ಕೆ ಒಪ್ಪಿಸಿದ್ದ ಕಾರನ್ನು ಪಡೆಯಲು ಆಹಾರ ಸಚಿವ ಜಮೀರ್‌ ಅಹಮದ್‌ಖಾನ್‌ ತೀವ್ರ ಲಾಬಿ ನಡೆಸಿದ್ದರು. ತಮಗೆ ನೀಡಿದ್ದ ಇನ್ನೋವಾ ಕಾರು ಬದಲಿಗೆ ಫಾರ್ಚೂನರ್‌ ಕಾರು ಬೇಕು ಎಂದು ಮನವಿ ಮಾಡಿದ್ದರು. ಇದೀಗ ಫಾರ್ಚುನರ್ ಕಾರು ಪಡೆಯಲು ಯಶಸ್ವಿಯಾಗಿದ್ದಾರೆ. 
 

ಬೆಂಗಳೂರು (ಜೂ. 03):  ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಬಿ.ಝಡ್‌. ಜಮೀರ್‌ ಅಹಮದ್‌ ಖಾನ್‌ ಅವರು ಕೊನೆಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳಸುತ್ತಿದ್ದ ಫಾರ್ಚೂನರ್‌ ಕಾರು ಪಡೆಯಲು ಯಶಸ್ವಿಯಾಗಿದ್ದಾರೆ.

ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿಯಾದ ಬಳಿಕ ಅವರು ಸರ್ಕಾರಕ್ಕೆ ಒಪ್ಪಿಸಿದ್ದ ಕಾರನ್ನು ಪಡೆಯಲು ಆಹಾರ ಸಚಿವ ಜಮೀರ್‌ ಅಹಮದ್‌ಖಾನ್‌ ತೀವ್ರ ಲಾಬಿ ನಡೆಸಿದ್ದರು. ತಮಗೆ ನೀಡಿದ್ದ ಇನ್ನೋವಾ ಕಾರು ಬದಲಿಗೆ ಫಾರ್ಚೂನರ್‌ ಕಾರು ಬೇಕು ಎಂದು ಮನವಿ ಮಾಡಿದ್ದರು.

ಈ ಬಗ್ಗೆ ಸುದ್ದಿಗಾರರಿಗೆ ವಿವರಣೆಯನ್ನೂ ನೀಡಿದ್ದ ಅವರು, ನನಗೆ ಮೊದಲಿನಿಂದಲೂ ದೊಡ್ಡ ಕಾರಿನಲ್ಲಿ ಓಡಾಡಿ ಅಭ್ಯಾಸ. ಹೀಗಾಗಿ ಹಳೆಯ ಫಾರ್ಚೂನರ್‌ ಕಾರು ಕೇಳಿದ್ದೇನೆ. ಸಿದ್ದರಾಮಯ್ಯ ಅವರು ಬಳಸಿದ್ದ ಕಾರು ಆದರೆ ಇನ್ನೂ ಉತ್ತಮ ಎಂದಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದರು.

ಇದೀಗ ಹಲವು ದಿನಗಳ ಲಾಬಿ ಬಳಿಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಬಳಸಿದ್ದ ಕೆಎ-01, ಜಿಎ-2016 ಕಾರು ಜಮೀರ್‌ ಅವರಿಗೆ ಸರ್ಕಾರ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಈ ಕಾರಿಗೂ ಮೊದಲು 2013ರಿಂದ ಸಿದ್ದರಾಮಯ್ಯ ಅವರು ಕೆಎ-01, ಜಿ-5734 ಫಾರ್ಚೂನರ್‌ ಕಾರು ಬಳಸುತ್ತಿದ್ದರು. 2016ರ ಜೂನ್‌ನಲ್ಲಿ ಕೆಎ-01, ಜಿಎ-2016 ಕಾರನ್ನು ಹೊಸದಾಗಿ ಪಡೆದಿದ್ದರು. ಹಳೆಯ ಕಾರಿನ ಮೇಲೆ ಕಾಗೆ ಕುಳಿತಿದ್ದರಿಂದ ಕಾರು ಬದಲಿಸಿದ್ದಾಗಿಯೂ ವಿವಾದ ಉಂಟಾಗಿತ್ತು. ಇದೀಗ 2016ರ ಜೂನ್‌ನಿಂದ ಸಿದ್ದರಾಮಯ್ಯ ಬಳಸಿದ್ದ ಕಾರು ಜಮೀರ್‌ ಪಾಲಾಗಿದೆ ಎಂದು ತಿಳಿದುಬಂದಿದೆ. 

[ಸಾಂದರ್ಭಿಕ ಚಿತ್ರ]

loader