Asianet Suvarna News Asianet Suvarna News

ಮತದಾರರಾಗಲು ರಾಜಧಾನಿ ಯುವಜನರ ನಿರಾಸಕ್ತಿ!: ಮತಪಟ್ಟಿಯಲ್ಲಿ 65 ಸಾವಿರ ಮೃತರು!

ನಗರದ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ಎಲ್ಲಾ ಯುವಕರನ್ನೂ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಬಿಬಿಎಂಪಿಯು ವಿಶೇಷ ಅಭಿಯಾನ ಕೈಗೊಂಡಿದ್ದು ಎಲ್ಲಾ ಕಾಲೇಜುಗಳಿಗೆ ಭೇಟಿ ನೀಡಿ ಯುವಕರನ್ನು ಮತದಾರರಾಗಿ ನೋಂದಣಿ ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಹಾಗೂ ನಗರ ಜಿಲ್ಲಾ ಚುನಾವಣಾಧಿಕಾರಿ ಎನ್. ಮಂಜುನಾಥಪ್ರಸಾದ್ ಹೇಳಿದ್ದಾರೆ.

Youths from Bangalore are not interested election

ಬೆಂಗಳೂರು(ಜು.16): ನಗರದ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ಎಲ್ಲಾ ಯುವಕರನ್ನೂ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಬಿಬಿಎಂಪಿಯು ವಿಶೇಷ ಅಭಿಯಾನ ಕೈಗೊಂಡಿದ್ದು ಎಲ್ಲಾ ಕಾಲೇಜುಗಳಿಗೆ ಭೇಟಿ ನೀಡಿ ಯುವಕರನ್ನು ಮತದಾರರಾಗಿ ನೋಂದಣಿ ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಹಾಗೂ ನಗರ ಜಿಲ್ಲಾ ಚುನಾವಣಾಧಿಕಾರಿ ಎನ್. ಮಂಜುನಾಥಪ್ರಸಾದ್ ಹೇಳಿದ್ದಾರೆ.

ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಚುನಾವಣಾ ಆಯೋಗವು ನಗರದಲ್ಲಿ ಹೆಚ್ಚು ಮಂದಿ ಯುವಕರು ಚುನಾವಣಾ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೆ ಎಂಬ ಅಂಕಿ ಅಂಶಗಳನ್ನು ನೀಡಿದೆ. ಸೇರ್ಪಡೆ ಯಾಗಬೇಕಿರುವ ಅಂದಾಜು ಮತದಾರರಲ್ಲಿ ಶೇ.10ರಷ್ಟು ಮಾತ್ರ ಸೇರ್ಪಡೆಗೊಂಡಿದ್ದಾರೆ. ಹೀಗಾಗಿ 2017ರ ಜನವರಿ 1ರ ವೇಳೆಗೆ 18 ವರ್ಷ ತುಂಬಿದ ಎಲ್ಲಾ ಯುವಕರನ್ನೂ ಮತದಾರರ ಪಟ್ಟಿಗೆಸೇರ್ಪಣೆ ಮಾಡಲು ಬಿಬಿಎಂಪಿ ಕಂದಾಯ ಅಧಿಕಾರಿಗಳು ಕಾಲೇಜಿಗೆ ಭೇಟಿ ನೀಡಲಿದ್ದಾರೆ ಎಂದು ಹೇಳಿದರು.

84.97 ಲಕ್ಷ ಮತದಾರರು:

ಕೇಂದ್ರ ಚುನಾವಣಾ ಆಯೋಗದ ವರದಿ ಪ್ರಕಾರ ಪ್ರಸ್ತುತ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 1.35 ಕೋಟಿ ಜನಸಂಖ್ಯೆ ಇದ್ದಾರೆ. ಇದರಲ್ಲಿ 84,97,192 ಮತದಾರರಿದ್ದು, 44,61,725 ಪುರುಷ ಹಾಗೂ 40,35,467 ಮಹಿಳಾ ಮತದಾರರು ಇದ್ದಾರೆ. ಈ ಮತದಾರರ ಪಟ್ಟಿ ಪ್ರಕಾರ 18-19 ವರ್ಷ ವಯಸ್ಸಿನ 2.75 ಲಕ್ಷ ಯುವಕರು ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿರಬೇಕಾಗಿತ್ತು ಎಂದು ಕೇಂದ್ರ

ಚುನಾವಣಾ ಆಯೋಗ ಹೇಳಿದೆ. ಆದರೆ, ನಮ್ಮಲ್ಲಿ ೨೭,೫೦೦ ಮಂದಿ ಮಾತ್ರ ನೋಂದಣಿ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಶೇ.90ರಷ್ಟು ಯುವಕರು ಮತದಾರರ ಪಟ್ಟಿಯಿಂದ ತಪ್ಪಿಹೋಗಿರುವ ಕಾರಣ ಜುಲೈ 1ರಿಂದ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಇದಲ್ಲದೆ ಜುಲೈ 9ರಿಂದ 23ರವರೆಗೆ ಮತಗಟ್ಟೆ ಅಧಿಕಾರಿಗಳು ತಮ್ಮ ಮತಗಟ್ಟೆಗಳಲ್ಲಿ ಉಪಸ್ಥಿತರಿದ್ದು ನಮೂನೆ -6 ರ ಅರ್ಜಿಗಳನ್ನು ಸ್ವೀಕರಿಸುವಂತೆ ಸೂಚಿಸಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು, ತಹಶೀಲ್ದಾರ್ ಕಾರ್ಯಾಲಯಗಳು ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ನಮೂನೆ 6ನ್ನು ಪಡೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು

ಮತಪಟ್ಟಿಯಲ್ಲಿ 65 ಸಾವಿರ ಮೃತರು!

ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಜನಸಂಖ್ಯೆ ಶೇ.70ಕ್ಕಿಂತ ಹೆಚ್ಚು ಮಂದಿ ಮತದಾರರಾಗಿದ್ದಾರೆ. ಈ ಬಗ್ಗೆಯೂ ಚುನಾವಣಾ ಆಯೋಗವು ಆಕ್ಷೇಪ ವ್ಯಕ್ತಪಡಿಸಿದ್ದು ಮೃತರ ಹೆಸರನ್ನು ಪಟ್ಟಿಹಿಂದ ತೆಗೆದಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದೆ. ಇದು ನಿಜವೂ ಕೂಡ ಹೌದು, ಬಿಬಿಎಂಪಿ ಮರಣ ಪತ್ರ ವಿತರಿಸುವ ಪ್ರತಿ ಪ್ರಕರಣದಲ್ಲೂ ಖುದ್ದು ಪಟ್ಟಿಯಿಂದ ಹೆಸರು ತೆಗೆಸಬೇಕಾಗಿತ್ತು. ಈ ರೀತಿ ಒಟ್ಟು 65,635 ಮಂದಿ ಮರಣ ಹೊಂದಿರುವವರ ಹೆಸರು ಮತದಾರರ ಪಟ್ಟಿಯಲ್ಲಿ ಉಳಿದುಕೊಂಡಿದೆ. ಇದೇ ಮೊದಲ ಬಾರಿಗೆ ಇವುಗಳನ್ನು ಸ್ವಯಂ ಪ್ರೇರಿತವಾಗಿ ತೆರವು ಮಾಡಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದರು.

 

 

Follow Us:
Download App:
  • android
  • ios