ಬಿಜೆಪಿ ಶಾಸಕನ ಪುತ್ರನಿಗೆ ದಾರಿ ಬಿಡದ ಯುವಕನಿಗೆ ಥಳಿತರಾಜಸ್ಥಾನದ ಬನ್ಸವಾಡ್ ದಲ್ಲಿ ನಡೆದ ಘಟನೆಬಿಜೆಪಿ ಶಾಸಕ ದಾನ್ ಸಿಂಗ್ ರಾವತ್ ಮಗ ರಾಜಾ
ಬನ್ಸವಾಡ್(ಜು.1): ರಾಜಸ್ಥಾನದಲ್ಲಿ ಶಾಸಕನ ಮಗನಿಗೆ ದಾರಿ ಬಿಡಲಿಲ್ಲ ಎಂಬ ಕಾರಣಕ್ಕೆ ಯುವಕನೊರ್ವನಿಗೆ ಹಿಗ್ಗಾಮುಗ್ಗಾ ರೀತಿಯಲ್ಲಿ ಥಳಿಸಲಾಗಿದೆ. ಇಲ್ಲಿನ ಬನ್ಸವಾಡ್‌ದ ವಿದ್ಯುತ್ ಕಾಲೂನಿಯಲ್ಲಿ ಈ ಘಟನೆ ನಡೆದಿದ್ದು, ಬಿಜೆಪಿ ಶಾಸಕ ದಾನ್ ಸಿಂಗ್ ರಾವತ್ ಮಗ ರಾಜಾ ಯುವಕನೋರ್ವನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಸ್ವೀಪ್ಟ್ ಕಾರು ತನ್ನ ಕಾರನ್ನು ಓವರ್ ಟೇಕ್ ಮಾಡುತ್ತಿರುವುದನ್ನು ಗಮನಿಸಿದ ರಾಜಾ ರಸ್ತೆಯನ್ನು ಬಂದ್ ಮಾಡಿಸಿದ್ದಾನೆ. ನಂತರ ಕಾರಿನಿಂದ ಚಾಲಕನನ್ನು ಎಳೆದು ಹಲ್ಲೆ ನಡೆಸಿದ್ದಾನೆ. ಸ್ಕಾರ್ಪಿಯೋ ವಾಹನದಿಂದ ಇಳಿದ ಅನೇಕ ಮಂದಿ ಕೂಡಾ ಆ ಯುವಕನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.
ಏಕಮುಖ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಶಾಸಕನ ಪುತ್ರನ ಕಾರನ್ನು ಓವರ್ ಟೇಕ್ ಮಾಡಿದ್ದಕ್ಕಾಗಿ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹಲ್ಲೆಗೊಳಗಾದ ಯುವಕ ನೀರವ್ ಉಪಾಧ್ಯಾಯ ಹೇಳಿದ್ದಾನೆ. ಈ ಘಟನೆ ನಡೆದು ಒಂದು ತಿಂಗಳು ಕಳೆದಿದ್ದರೂ ಪೊಲೀಸರು ಈವರೆಗೂ ಯಾವುದೇ ಎಫ್‌ಐಆರ್ ದಾಖಲಿಸಿಕೊಂಡಿಲ್ಲ. ಈ ಕುರಿತು ಮಾಹಿತಿ ಇಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
