ವೇಳೆ ಬಾರ್'ನಲ್ಲಿದ್ದ ಮೂವರು ಯಾಕೋ ಗುರಾಯಿಸಿದ ಎಂದು ಗಲಾಟೆ ಶುರು ಮಾಡಿ ಚಾಕುವಿನಿಂದ ಇರಿದಿದ್ದಾರೆ.

ಬೆಂಗಳೂರು(ಫೆ.03): ಗುರಾಯಿಸಿದ ಕಾರಣಕ್ಕೆ ಯುವಕನೊಬ್ಬನನ್ನು ಕೊಲೆ ಮಾಡಿದ ಘಟನೆ ಮುದ್ದಿನಪಾಳ್ಯದಲ್ಲಿ ನಡೆದಿದೆ.

ಮಲ್ಲತ್ತಹಳ್ಳಿ ನಿವಾಸಿ ಅರುಣ್(22) ಕೊಲೆಯಾದ ದುರ್ದೈವಿ. ಕಳೆದ ರಾತ್ರಿ ಮುದ್ದಿನಪಾಳ್ಯದ ಮಾರುತಿ ಬಾರ್'ಗೆ ಅರುಣ್ ಸ್ನೇಹಿತರ ಜೊತೆ ಮದ್ಯ ಖರೀದಿಸಲು ತೆರಳಿದ್ದ. ಈ ವೇಳೆ ಬಾರ್'ನಲ್ಲಿದ್ದ ಮೂವರು ಯಾಕೋ ಗುರಾಯಿಸಿದ ಎಂದು ಗಲಾಟೆ ಶುರು ಮಾಡಿ ಚಾಕುವಿನಿಂದ ಇರಿದಿದ್ದಾರೆ. ಜೊತೆಯಲ್ಲಿದ್ದ ಕಿಶನ್ ಎಂಬಾತನಿಗೂ ಇರಿದಿದ್ದಾರೆ. ತಕ್ಷಣವೇ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅರುಣ್ ಮೃತಪಟ್ಟಿದ್ದಾನೆ. ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.