Asianet Suvarna News Asianet Suvarna News

ಕರ್ನಾಟಕದ ಮೇಲೆ ನಿಮಗೇನಾದರೂ ಅಸಮಾಧಾನವಿದೆಯೇ..?: ಮೋದಿಗೆ ಯೂತ್ ಕಾಂಗ್ರೆಸ್ ಪತ್ರ

ಕಾವೇರಿ ವಿವಾದದಲ್ಲಿ ಮೋದಿ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

youth congress letter to pm narendra modi

ಬೆಂಗಳೂರು(ಸೆ.24): ಕಾವೇರಿ ನದಿ ನೀರಿನ ವಿಚಾರವಾಗಿ ಇಡೀ ರಾಜ್ಯವೇ ಹೊತ್ತಿ ಉರಿದರೂ ಪ್ರಧಾನಮಂತ್ರಿ ನರೇಂದ್ರಮೋದಿ ಮಧ್ಯ ಪ್ರವೇಶಿಸುವ ಮನಸ್ಸು ಮಾಡಲಿಲ್ಲ. ಕೇಂದ್ರ ಸಚಿವರ ಭೇಟಿ ಬಳಿಕವೂ ಮನಸ್ಸು ಬದಲಿಸಲಿಲ್ಲ. ಹೀಗಾಗಿ, ನಿಮಗೇನಾದರೂ ಕರ್ನಾಟಕದ ಜನತೆ ಬಗ್ಗೆ  ಅಸಮಾಧಾನವಿದೆಯೇ..? ತಿಳಿಸಿ ಎಂದು ಕೋರಿ ಯೂತ್ ಕಾಂಗ್ರಸ್`ನಿಂದ ಪ್ರಧಾನಮಂತ್ರಿ ನರೇಂದ್ರಮೋದಿಗೆ ಪತ್ರ ಬರೆಯಲಾಗಿದೆ.

ಕಾವೇರಿ ವಿವಾದದಲ್ಲಿ ಮೋದಿ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿ ಬೆಂಗಳೂರಿನ ಮೌರ್ಯ ಸರ್ಕಲ್`ನಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ  ದಿನೇಶ್ ಗುಂಡುರಾವ್, ಕಾವೇರಿ ವಿಚಾರದಲ್ಲಿ ಪ್ರಧಾನಿ ಮಧ್ಯಸ್ತಿಕೆ ವಹಿಸಬೇಕು. ಈವರೆಗೆ ಸಿ.ಎಂ ಸಿದ್ದರಾಮಯ್ಯ ಪ್ರಧಾನಿಗಳಿಗೆ ಹಲವಾರು ಪತ್ರಬರೆದಿದ್ದಾರೆ. ಆದರೆ, ಈವರೆಗೂ ಪ್ರಧಾನಿಗಳು ಸ್ಪಂದಿಸಿಲ್ಲ. ದೂರದ ಬಲುಚಿಸ್ತಾನ್ ಸಮಸ್ಯೆ ಬಗೆಹರಿಸೋಕೆ ಆಗುತ್ತೆ, ಆದರೆ, ಕರ್ನಾಟಕದ ಸಮಸ್ಯೆ ಬಗೆಹರಿಸಲು ಯಾಕೆ ಪ್ರಧಾನಿ ಮನಸ್ಸು ಮಾಡುತ್ತಿಲ್ಲ. ಕರ್ನಾಟಕದ ಜನತೆಯ ಮೇಲೆ ಏನಾದರೂ ಅಸಮಾಧಾನವಿದೆಯೆ..? ಎಂದು ಪ್ರಧಾನಿಗೆ ಪತ್ರ ಬರೆದು ಕೇಳಿ ಕೊಂಡಿದ್ಧೆವೆ ಎಂದು ತಿಳಿಸಿದರು. ಈಗ ನಮ್ಮ ಸಂಕಷ್ಟವನ್ನು ಪ್ರಧಾನಿ ಮೋದಿಗೆ ಪತ್ರ ಮುಖೇನ ತಿಳಿಸಿದ್ದೇವೆ. ಆ ಮೂಲಕವಾದರೂ ಪ್ರಧಾನಿಗೆ ಅರ್ಥವಾದಿತು ಎನ್ನುವ ನಂಬಿಕೆ ನಮ್ಮದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಹೇಳಿದ್ದಾರೆ.