ಮನೆಗೆ ನುಗ್ಗಿದ  ದುಷ್ಕರ್ಮಿಗಳು ಆಂಧ್ರ ಪ್ರದೇಶ ಮಾಜಿ ಸಚಿವರೊಬ್ಬರ ಪುತ್ರನ ಹತ್ಯೆ ನಡೆಸಿರುವ ಘಟನೆ ನಿನ್ನೆ ರಾತ್ರಿ ಹೈದರಾಬಾದಿನ ಪ್ರತಿಷ್ಠಿತ ಬಂಜಾರಾ ಹಿಲ್ಸ್ ಬಡಾವಣೆಯಲ್ಲಿ ನಡೆದಿದೆ. ವೈಎಸ್'ಆರ್ ಸಂಪುಟದಲ್ಲಿ ಸಚಿವರಾಗಿದ್ದ ಮೂಲ ಮುಕೇಶ್ ಗೌಡ್'ರ ಪುತ್ರ ಯುವ ಕಾಂಗ್ರೆಸ್ ನಾಯಕ ವಿಕ್ರಮ್ ಗೌಡ್ ಹತ್ಯೆ ಬೆಳಗ್ಗಿನ ಜಾವ 3.30ಕ್ಕೆ ನಡೆದಿದೆ .

ಹೈದರಾಬಾದ್: ಮನೆಗೆ ನುಗ್ಗಿದ ದುಷ್ಕರ್ಮಿಗಳು ಆಂಧ್ರ ಪ್ರದೇಶ ಮಾಜಿ ಸಚಿವರೊಬ್ಬರ ಪುತ್ರನ ಹತ್ಯೆ ನಡೆಸಿರುವ ಘಟನೆ ನಿನ್ನೆ ರಾತ್ರಿ ಹೈದರಾಬಾದಿನ ಪ್ರತಿಷ್ಠಿತ ಬಂಜಾರಾ ಹಿಲ್ಸ್ ಬಡಾವಣೆಯಲ್ಲಿ ನಡೆದಿದೆ..

ವೈಎಸ್'ಆರ್ ಸಂಪುಟದಲ್ಲಿ ಸಚಿವರಾಗಿದ್ದ ಮೂಲ ಮುಕೇಶ್ ಗೌಡ್'ರ ಪುತ್ರ ಯುವ ಕಾಂಗ್ರೆಸ್ ನಾಯಕ ವಿಕ್ರಮ್ ಗೌಡ್ ಹತ್ಯೆ ಬೆಳಗ್ಗಿನ ಜಾವ 3.30ಕ್ಕೆ ನಡೆದಿದೆ .

ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ವಿಕ್ರಮ್ ಹಾಗೂ ಅವರ ಪತ್ನಿ ದೇವಸ್ಥಾನಕ್ಕೆ ಹೊರಡುತ್ತಿದ್ದರು. ಪತ್ನಿಗಾಗಿ ನೆಲಮಾಳಿಗೆಯಲ್ಲಿ ವಿಕ್ರಮ್ ಕಾಯುತ್ತಿದ್ದ ವೇಳೆ, ಹಂತಕರು ಬಂದು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪ್ರಥಾಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.