ರಾಜ್ಯದಲ್ಲಿ ಮುಂದುವರಿದ ರಾಜಕೀಯ ಗೂಂಡಾಗಿರಿ : ಉಮೇಶ್ ಕತ್ತಿ ಸಹಚರರಿಂದ ಯುವಕನ ಮೇಲೆ ಹಲ್ಲೆ

First Published 8, Mar 2018, 2:34 PM IST
Youth Attack In Chikkodi
Highlights

ಚಿಕ್ಕೋಡಿಯಲ್ಲಿ ರಾಜಕೀಯ ಗೂಂಡಾಗಿರಿ ಮುಂದುವರಿದಿದೆ.  ಗ್ರಾಮ ಪಂಚಾಯಿತಿ ಸದಸ್ಯ  ಹಾಗೂ ಆತನ ಮಗನಿಂದ ಯುವಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆದಿದೆ.

ಚಿಕ್ಕೋಡಿ : ಚಿಕ್ಕೋಡಿಯಲ್ಲಿ ರಾಜಕೀಯ ಗೂಂಡಾಗಿರಿ ಮುಂದುವರಿದಿದೆ.  ಗ್ರಾಮ ಪಂಚಾಯಿತಿ ಸದಸ್ಯ  ಹಾಗೂ ಆತನ ಮಗನಿಂದ ಯುವಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆದಿದೆ.

ಹಲ್ಲೆ ನಡೆಸಿದ ಗ್ರಾಮ ಪಂಚಾಯಿತಿ ಸದಸ್ಯ ಸತಿಗೌಡ ಮಗೆನ್ನವರ ಬಿಜೆಪಿ ಶಾಸಕ ಉಮೇಶ್ ಕತ್ತಿ ಸಹಚರ ಎನ್ನಲಾಗಿದ್ದು, ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. ಸತಿಗೌಡ ಹಾಗೂ ಆತನ 15 ಮಂದಿ ಸಹಚರರು ಸೇರಿ ಭರತೇಶ ಮನಗೌಡನವರ ಮೇಲೆ ಹಲ್ಲೆ ನಡೆಸಿದ್ದಾರೆ.

ರಾಡ್ ಹಾಗೂ ದೊಣ್ಣೆಯಿಂದ ಗಂಭೀರವಾಗಿ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಭರತೇಶ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹುಕ್ಕೇರಿ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ಪ್ರಕರಣ ನಡೆದಿದೆ.

loader