ದೇಶದಲ್ಲೇ ಮೊದಲ ಬಾರಿ ಬೆಂಗಳೂರು ಏರ್ಪೋರ್ಟ್ ನಲ್ಲಿ ಹೊಸ ವ್ಯವಸ್ಥೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 6, Sep 2018, 12:56 PM IST
Your Face Will Be Your Boarding Pass In Bengaluru Airport
Highlights

ಬೆಂಗಳೂರು ವಿಮಾನ ನಿಲ್ದಾಣವೂ ನೂತನವಾದ ಟೆಕ್ನಾಲಜಿಯೊಂದನ್ನು ತೆರೆದುಕೊಳ್ಳುತ್ತಿದೆ. ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ವಿಮಾನ ನಿಲ್ದಾಣ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದೆ. ಇಲ್ಲಿ ಇನ್ನು ಮುಖವೇ ಬೋರ್ಡಿಂಗ್ ಪಾಸ್ ಆಗಿರಲಿದೆ. 

ಬೆಂಗಳೂರು :  ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಹೊಸದಾದ ವ್ಯವಸ್ಥೆಯೊಂದನ್ನು ಜಾರಿಗೆ ತರಲಾಗುತ್ತಿದೆ. ಇನ್ನು ಮುಂದೆ ಇಲ್ಲಿ ನಿಮ್ಮ ಮುಖವನ್ನೇ ಬೋರ್ಡಿಂಗ್ ಪಾಸ್ ಆಗಿ ಪರಿಗಣಿಸಲಾಗುತ್ತದೆ. 

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಡಳಿತ ಮಂಡಳಿ ಬಯೋಮೆಟ್ರಿಕ್ ಸೆಲ್ಫ್ ಬೋರ್ಡಿಂಗ್ ಟೆಕ್ನಾಲಜಿ ಅಗ್ರಿಮೆಂಟ್ ಗೆ ಸಹಿಯನ್ನು ಹಾಕಿದ್ದಾಗಿ ತಿಳಿಸಿದೆ. 

ಮೊದಲ ಬಾರಿಗೆ ದೇಶದಲ್ಲೇ ಇಂತಹ ವ್ಯವಸ್ಥೆಯನ್ನು ಇಲ್ಲಿ ಜಾರಿಗೆ ತರಲಾಗುತ್ತಿದೆ. 2019ರ ಆರಂಭದಲ್ಲಿಯೇ ಈ ನೂತನ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.  ಏರ್ ಏಷಿಯಾ, ಸ್ಪೈಸ್ ಜೆಟ್, ಜೆಟ್ ಏರ್ ವೇಸ್ ಪ್ರಯಾಣಿಕರು ಇದರ ಮೊದಲ ಬಳಕೆದಾರರಾಗಿರಲಿದ್ದಾರೆ. 

ಈ ನೂತನ ಟೆಕ್ನಾಲಜಿ ಅಡಿಯಲ್ಲಿ ಮುಖವನ್ನೇ ಬೋರ್ಡಿಂಗ್ ಪಾಸ್ ಆಗಿ ಪರಿಗಣಿಸಲಾಗುತ್ತದೆ. ಇದರಿಂದ ಹೆಚ್ಚಿನ ಸಮಯವು ಉಳಿತಾಯವಾಗಲಿದೆ ಎಂದು ಆಡಳಿತ ಮಂಡಳಿ ಹೇಳಿದೆ. 

ಹೆಚ್ಚಿನ ಸಮಯ ನಿಲ್ಲುವುದು, ಪರಿಶೀಲನೆಗೆ ತಡೆಯುವುದು ಸೇರಿದಂತೆ ಯಾವುದೇ ರೀತಿಯ ಹೆಚ್ಚಿನ ಕಾರ್ಯಗಳಿಗೆ ವ್ಯಯವಾಗುವ ಸಮಯವು ಈ ನೂತನ ಟೆಕ್ನಾಲಜಿಯಿಂದ ಉಳಿತಾಯವಾಗಲಿದೆ.

loader