ಜೈಪುರದ ರಸ್ತೆಯೊಂದರಲ್ಲಿ ನಿಂತಿದ್ದ ಸರ್ಕಾರಿ ಕಾರಿನಲ್ಲಿ ಯುವ ಜೋಡಿಯೊಂದು ಬೆತ್ತಲಾಗಿ, ಆಕ್ಷೇಪಾರ್ಹ ಭಂಗಿಯಲ್ಲಿದ್ದ ಬಗ್ಗೆ ವರದಿಯಾಗಿದೆ
ಜೈಪುರ(ಸೆ.06): ಜೈಪುರದ ರಸ್ತೆಯೊಂದರಲ್ಲಿ ನಿಂತಿದ್ದ ಸರ್ಕಾರಿ ಕಾರಿನಲ್ಲಿ ಯುವ ಜೋಡಿಯೊಂದು ಬೆತ್ತಲಾಗಿ, ಆಕ್ಷೇಪಾರ್ಹ ಭಂಗಿಯಲ್ಲಿದ್ದ ಬಗ್ಗೆ ವರದಿಯಾಗಿದೆ. ಪಾರದರ್ಶಕ ಗಾಜಿನಲ್ಲಿ ಕಾಣುತ್ತಿದ್ದ ಅಸಹ್ಯ ದೃಶ್ಯ ಕಂಡು ಸ್ಥಳೀಯರು ಆಕ್ಷೇಪ ಎತ್ತಿದ್ಧಾರೆ. ಆದರೂ ತಾವೇನೂ ತಪ್ಪ ಮಾಡಿಲ್ಲವೆಂದು ಸಮರ್ಥಿಸಿಕೊಂಡಿದ್ದಾರೆ.
ವರದಿಗಳ ಪ್ರಕಾರ, ಜೈಪುರ ನಗರದ ಪ್ರಮುಖ ರಸ್ತೆಯೊಂದರ ಮೂಲೆಯಲ್ಲಿ ಬಂದು ನಿಂತಿದ್ದ ಬಿಳಿ ಬಣ್ಣದ ಕಾರಿನ ಮೇಲೆ ರಾಜಸ್ಥಾನ ಸರ್ಕಾರ ಎಂದು ಬರೆದಿತ್ತು. ಕೆಲ ಕಾಲ ಕಾರು ಅಲ್ಲೇ ನಿಂತಿದ್ದರಿಂದ ಅನುಮಾನಗೊಂಡ ಜನ ಸಮೀಪಕ್ಕೆ ತೆರಳಿ ವೀಕ್ಷಿಸಿದಾಗ ಕಾರಿನಲ್ಲಿ ನಡೆಯ ಬಾರದ್ದು ನಡೆಯುತ್ತಿತ್ತು ಎನ್ನುತ್ತಾರೆ ಸ್ಥಳೀಯರು.
ಒಳಗಿದ್ದ ಹೆಣ್ಣು ಗಂಡಿನ ಮೈಮೈಲೆ ಬಟ್ಟೆಯೇ ಇರಲಿಲ್ಲ. ಜೊತೆಗೆ, ಆ ಜೋಡಿ ಆಕ್ಷೇಪಾರ್ಹ ಭಂಗಿಯಲ್ಲಿತ್ತು ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.
