ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರ ಬಹುಮತ ಸಾಬೀತುಪರೀಕ್ಷೆ ವೇಳೆ ಸ್ಪೀಕರ್ ಕೂರುವ ಜಾಗಕ್ಕೆ ನುಗ್ಗಿದ್ದ ಡಿಎಂಕೆ ಶಾಸಕರು, ಮೇಜು ಮುರಿದುಹಾಕಿದ್ದರು.

ಚೆನ್ನೈ(ಫೆ.18): ‘ವಿಧಾನಸಭೆಯಲ್ಲಿ ನಡೆದ ಗದ್ದಲದ ಸಂದರ್ಭದಲ್ಲಿ ಡಿಎಂಕೆ ಶಾಸಕರು ನನ್ನ ಅಂಗಿ ಹರಿದರು. ನನ್ನ ಮೇಲಾದ ಈ ದೌರ್ಜನ್ಯವನ್ನು ಯಾರ ಬಳಿ ಹೇಳಿಕೊಳ್ಳಲಿ?’ ಎಂದು ತಮಿಳುನಾಡು ಸ್ಪೀಕರ್ ಪಿ. ಧನಪಾಲ್ ಗೋಳು ತೋಡಿಕೊಂಡಿದ್ದಾರೆ.

ಕಾನೂನುಬದ್ಧವಾಗಿ ನಾನು ನನ್ನ ಕೆಲಸ ಮಾಡುತ್ತಿದ್ದರೂ, ಡಿಎಂಕೆ ಶಾಸಕರು ಅಡ್ಡಿಪಡಿಸಿ ಅಂಗಿ ಹರಿಯುವ ಮೂಲಕ ನನಗೆ ಅವಮಾನ ಮಾಡಿದ್ದಾರೆ ಎಂದು ಅವರು ಸುದ್ದಿಸಂಸ್ಥೆಗಳಿಗೆ ತಿಳಿಸಿದ್ದಾರೆ.

ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರ ಬಹುಮತ ಸಾಬೀತುಪರೀಕ್ಷೆ ವೇಳೆ ಸ್ಪೀಕರ್ ಕೂರುವ ಜಾಗಕ್ಕೆ ನುಗ್ಗಿದ್ದ ಡಿಎಂಕೆ ಶಾಸಕರು, ಮೇಜು ಮುರಿದುಹಾಕಿದ್ದರು. ಅಲ್ಲದೆ ಧನಪಾಲ್ ಅವರನ್ನು ತಳ್ಳಿದ್ದರು. ನಂತರ ಸ್ಪೀಕರ್ ಆಸನದಲ್ಲಿ ಕೂರುವ ಮೂಲಕ ಉದ್ಧಟತನ ತೋರಿದ್ದರು.