ಟ್ವಿಟರ್ ನಲ್ಲಿ ಸದಾ ಬೇರೆಯವರ ಕಾಲೆಳೆಯುತ್ತಾ, ಎಲ್ಲಾ ಪಕ್ಷಗಳ ಮೇಲೆ ಒಂದಿಲ್ಲೊಂದು ಆರೋಪ ಮಾಡುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇದೀಗ ಕಾಂಗ್ರೆಸ್ ಮುಖಂಡ ಅಮರಿಂದರ್ ಸಿಂಗ್ ಒಡ್ಡಿದ ಮುಕ್ತ ಚರ್ಚಾ ಸವಾಲಿಗೆ ಒಪ್ಪಿಕೊಂಡಿದ್ದಾರೆ
ನವದೆಹಲಿ (ಅ.24): ಟ್ವಿಟರ್ ನಲ್ಲಿ ಸದಾ ಬೇರೆಯವರ ಕಾಲೆಳೆಯುತ್ತಾ, ಎಲ್ಲಾ ಪಕ್ಷಗಳ ಮೇಲೆ ಒಂದಿಲ್ಲೊಂದು ಆರೋಪ ಮಾಡುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇದೀಗ ಕಾಂಗ್ರೆಸ್ ಮುಖಂಡ ಅಮರಿಂದರ್ ಸಿಂಗ್ ಒಡ್ಡಿದ ಮುಕ್ತ ಚರ್ಚಾ ಸವಾಲಿಗೆ ಒಪ್ಪಿಕೊಂಡಿದ್ದಾರೆ.
ಕೇವಲ ಆರೋಪ ಮಾಡುವ ಬದಲು ನೇರಾನೇರಾ ಚರ್ಚೆ ಮಾಡೋಣ ಬನ್ನಿ ಎನ್ನುವ ಅಮರಿಂದರ್ ಸವಾಲಿಗೆ ಕೇಜ್ರಿ ಒಪ್ಪಿಕೊಂಡಿದ್ದಾರೆ. ಸಮಯ, ಸ್ಥಳ ನಿಗದಿಪಡಿಸಿ ನಾವು ಸಿದ್ಧರಿದ್ದೇವೆ ಎಂದಿದ್ದು ಚರ್ಚೆಗೆ ಎಎಪಿಯ ನಾಲ್ವರನ್ನು ಸಲಹೆ ಮಾಡಿದ್ದಾರೆ.
ಇವರಿಬ್ಬರ ಈ ಸವಾಲು-ಜವಾಬು ರಾಜಕೀಯಾಸಕ್ತರಿಗೆ ಕುತೂಹಲ ಕೆರಳಿಸಿದೆ.
