ಇಂಥ ಬರವಣಿಗೆಗಳು ಅಮಾಯಕ ಮುಸ್ಲಿಮರನ್ನು ತಪ್ಪು ದಾರಿಗೆ ಎಳೆಯುತ್ತವೆ. ಕಾಫಿರರು ಮತ್ತು ನಾಸ್ತಿಕರಿಗೆ ಇಸ್ಲಾಂಗೆ ಮತಾಂತರವಾಗಲು 6 ತಿಂಗಳ ಗಡುವು ನೀಡಲಾಗುತ್ತದೆ. ಅಷ್ಟೊರಳಗೆ ಮತಾಂತರವಾಗದವರನ್ನು ಹತ್ಯೆ ಮಾಡಲೇಬೇಕು ಎಂಬುದಾಗಿ ಉಲ್ಲೇಖಿಸಲಾಗಿದೆ’

ತಿರುವನಂತಪುರ(ಜು.23): ಮುಂದಿನ 6 ತಿಂಗಳಲ್ಲಿ ಇಸ್ಲಾಂಗೆ ಮತಾಂತರವಾಗದಿದ್ದರೆ ಬಲಗೈ ಮತ್ತು ಎಡಗಾಲನ್ನು ಕತ್ತರಿಸಿ ಹಾಕುವುದಾಗಿ ಅನಾಮಧೇಯ ಪತ್ರದ ಮೂಲಕ ಮಲಯಾಳಂನ ಖ್ಯಾತ ಲೇಖಕ ಕೆ.ಪಿ.ರಾಮನುಣ್ಣಿ ಅವರಿಗೆ ಬೆದರಿಕೆ ಹಾಕಲಾಗಿದೆ.

6 ದಿನಗಳ ಹಿಂದಷ್ಟೇ ತಮಗೆ ತಲುಪಿರುವ ಅನಾಮಧೇಯ ಪತ್ರದಲ್ಲಿ ‘ನೀವು ಹಿಂದೂ ಮತ್ತು ಮುಸ್ಲಿಂ ಧರ್ಮಗಳ ನಡುವೆ ಯಾವುದೇ ಭಿನ್ನತೆಯನ್ನು ಕಾಣದೇ ಸರಿ-ಸಮಾನ ಎಂದು ಪ್ರತಿಪಾದಿಸಿದ್ದೀರಿ. ಇಂಥ ಬರವಣಿಗೆಗಳು ಅಮಾಯಕ ಮುಸ್ಲಿಮರನ್ನು ತಪ್ಪು ದಾರಿಗೆ ಎಳೆಯುತ್ತವೆ. ಕಾಫಿರರು ಮತ್ತು ನಾಸ್ತಿಕರಿಗೆ ಇಸ್ಲಾಂಗೆ ಮತಾಂತರವಾಗಲು 6 ತಿಂಗಳ ಗಡುವು ನೀಡಲಾಗುತ್ತದೆ. ಅಷ್ಟೊರಳಗೆ ಮತಾಂತರವಾಗದವರನ್ನು ಹತ್ಯೆ ಮಾಡಲೇಬೇಕು ಎಂಬುದಾಗಿ ಉಲ್ಲೇಖಿಸಲಾಗಿದೆ’ ಎಂದು ಲೇಖಕ ಕೆ.ಪಿ.ರಾಮನುಣ್ಣಿ ಹೇಳಿದ್ದಾರೆ.

ಈ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿದ್ದು, ಸ್ವತಂತ್ರ ಮತ್ತು ಪ್ರಗತಿಪರ ಚಿಂತನೆಗಳನ್ನು ಹೊಂದಿದವರ ಮೇಲೆ ಇಂಥ ಭೀತಿಗಳನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದಿದ್ದಾರೆ. ಮಜ್ಲಿಸ್ ಪಕ್ಷದ ಮುಖಂಡ ಅಸಾದುದ್ದೀನ್ ಒವೈಸಿ ಕೂಡ ಈ ಬೆದರಿಕೆಯನ್ನು ಖಂಡಿಸಿದ್ದು, ಬೆದರಿಕೆ ಹಾಕಿದವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.