Asianet Suvarna News Asianet Suvarna News

ನಿಮ್ಮ ಆಧಾರ್ ಮಾಹಿತಿಯನ್ನು ಡಿಲೀಟ್ ಮಾಡಿಸಬಹುದು

ಆಧಾರ್ ಸಂಬಂಧ ಇದೀಗ ಸುಪ್ರೀಂಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದ್ದು, ಇದೀಗ ನೀವು ಖಾಸಗಿ ಸಂಸ್ಥೆಗಳಿಗೆ ಅಥವಾ ಆಧಾರ್ ಕಡ್ಡಾಯ ಮಾಡದ ಕಡೆ ನಿಮ್ಮ ಆಧಾರ್ ಡೇಟಾವನ್ನು ಡಿಲೀಟ್ ಮಾಡಿಸಬಹುದಾಗಿದೆ.

You Can Ask To Delete Your Aadhaar Data From Companies And Banks
Author
Bengaluru, First Published Sep 27, 2018, 12:15 PM IST

ನವದೆಹಲಿ :  ಸುಪ್ರೀಂಕೋರ್ಟ್ ಆಧಾರ್ ಸಂಬಂಧ ಮಹತ್ವದ ತೀರ್ಪನ್ನು ನೀಡಿದೆ. 

ಪ್ರತೀ ಭಾರತೀಯನಿಗೂ 12 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಮಹತ್ವಾಕಾಂಕ್ಷಿ ಯೋಜನೆ ಆಧಾರ್ ನ ಸಾಂವಿಧಾನಿಕ ಸಂಧುತ್ವವನ್ನು  ಸುಪ್ರೀಂಕೋರ್ಟ್  ಎತ್ತಿ ಹಿಡಿದಿದೆ. 

ಸಕಲ ಸೇವೆಗಳಿಗೂ ಕೂಡ ಆಧಾರ್ ಕಡ್ಡಾಯಗೊಳಿಸುವುದಕ್ಕೆ  ಕಡಿವಾಣ ಹಾಕಿದೆ. 

ಸರ್ಕಾರಿ ಸೇವೆಗೆ ಮಾತ್ರ ಆಧಾರ್ ಸಂಖ್ಯೆ ಕಡ್ಡಾಯವಾಗಿದ್ದು, ಬ್ಯಾಂಕ್, ಫೋನ್ ನಂಭರ್, ಖಾಸಗಿ ಕಂಪನಿಗಳಿಗೆ, ವಿವಿಧ ಪರೀಕ್ಷಗೆಳಿಗೆ ಕಡ್ಡಾಯವಲ್ಲ ಎಂದು ಹೇಳಿದೆ. ಈ ನಿಟ್ಟಿನಲ್ಲಿ ನೀವು ಈ ಎಲ್ಲಾ ಈಗಾಗಲೇ ಆಧಾರ್ ಸಂಖ್ಯೆಯನ್ನು ನೀಡಿದ್ದಲ್ಲಿ ಅದನ್ನು ವಾಪಸ್ ನೀಡುವಂತೆ ಅಥವಾ ಅಲ್ಲಿಂದ ಡಿಲೀಟ್ ಮಾಡುವಂತೆ  ನೀವೂ ಕೇಳಬಹುದಾಗಿದೆ. 

ಆಧಾರ್ ಬದಲಾಗಿ ನೀವು ಇತರೆ ದಾಖಲೆಗಳಾದ ಪಾಸ್ಪೋರ್ಟ್, ವೋಟರ್ ಐಟಿ, ಬ್ಯಾಂಕ್ ಸ್ಟೇಟ್ ಮೆಂಟ್ ಗಳನ್ನು ನೀಡಬಹುದಾಗಿದೆ. 

Follow Us:
Download App:
  • android
  • ios