Asianet Suvarna News Asianet Suvarna News

ಮಹಿಳಾ ಸುರಕ್ಷತೆಗಿಂತ ಸರ್ಕಾರಕ್ಕೆ ಗೋವುಗಳದ್ದೇ ಚಿಂತೆ: ಕೇಂದ್ರದ ವಿರುದ್ಧ ಜಯಾ ವಾಗ್ದಾಳಿ

ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿದ್ದರೂ ಸರ್ಕಾರ ಇತ್ತ ಹೆಚ್ಚಿನ ಗಮನ ಹರಿಸದೇ ಗೋವುಗಳ ರಕ್ಷಣೆಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಮಾಜವಾದಿ ಪಕ್ಷದ ಎಂಪಿ ಜಯಾ ಬಚ್ಚನ್ ರಾಜ್ಯ ಸಭೆಯಲ್ಲಿಂದು ವಾಗ್ದಾಳಿ ನಡೆಸಿದ್ದಾರೆ. ಮಹಿಳಾ ಸುರಕ್ಷತೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

You are protecting cows but women are suffering atrocities Jaya Bachchan takes on Centre in RS

ನವದೆಹಲಿ (ಏ.12): ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿದ್ದರೂ ಸರ್ಕಾರ ಇತ್ತ ಹೆಚ್ಚಿನ ಗಮನ ಹರಿಸದೇ ಗೋವುಗಳ ರಕ್ಷಣೆಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಮಾಜವಾದಿ ಪಕ್ಷದ ಎಂಪಿ ಜಯಾ ಬಚ್ಚನ್ ರಾಜ್ಯ ಸಭೆಯಲ್ಲಿಂದು ವಾಗ್ದಾಳಿ ನಡೆಸಿದ್ದಾರೆ. ಮಹಿಳಾ ಸುರಕ್ಷತೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ತಲೆ ಕಡಿದು ತಂದವರಿಗೆ 11 ಲಕ್ಷ ಬಹುಮಾನ ಕೊಡುವುದಾಗಿ ಬಿಜೆಪಿ ಯುವ ಘಟಕದ ನಾಯಕ ಯೋಗೇಶ್ ನೀಡಿದ ವಿವಾದಾತ್ಮಕವಾಗಿ ಹೇಳಿಕೆಯಿಂದಾಗಿ ರಾಜ್ಯಸಭೆಯಲ್ಲಿ ಬಿಸಿಯಾದ ವಾತಾವರಣ ಸೃಷ್ಟಿಯಾಯಿತು.   ಈ ಸಂದರ್ಭದಲ್ಲಿ ಜಯಾ ಬಚ್ಚನ್ ನೀವು ಗೋವುಗಳ ರಕ್ಷಣೆಯ ಮಾತನಾಡುತ್ತೀರಿ ಆದರೆ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿದ್ದರೂ ಯಾವುದೇ ಕಠಿಣ ಕ್ರಮ ಕೈಗೊಳ್ಳುವುದಿಲ್ಲ. ಮಹಿಳಾ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳಬೇಕು ಎಂದು ಜಯಾ ಬಚ್ಚನ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಯೋಗೇಶ್ ರವರ ಹೇಳಿಕೆಯಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆ. ಇಂತಹ ಹೇಳಿಕೆಯನ್ನು ನಾವು ಒಪ್ಪುವುದಿಲ್ಲ. ಮಮತಾರವರ ಓಲೈಕೆ ರಾಜಕಾರಣದ ವಿರುದ್ಧ ಆಕ್ರೋಶದಲ್ಲಿ ಈ ರೀತಿ ಹೇಳಿದ್ದಾರೆ.ಆದರೆ ಹಿಂಸೆಯನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಹೇಳಿದೆ.

Follow Us:
Download App:
  • android
  • ios