ಉತ್ತರ ಪ್ರದೇಶದ ನವವಿವಾಹಿತ ಜೋಡಿಗಳಿಗೆ ಕಾಂಡೋಮ್ ವಿತರಣೆಗೆ ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧರಿಸಿದೆ. ಆಶಾ ಕಾರ್ಯಕರ್ತೆಯರು ಕಾಂಡೊಮ್ ಹೊಂದಿದ ಉಡುಗೊರೆ ಕಿಟ್ ವಿತರಿಸಲಿದ್ದಾರೆ.
ಲಖನೌ: ಉತ್ತರ ಪ್ರದೇಶದ ನವವಿವಾಹಿತ ಜೋಡಿಗಳಿಗೆ ಕಾಂಡೋಮ್ ವಿತರಣೆಗೆ ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧರಿಸಿದೆ.
ಆಶಾ ಕಾರ್ಯಕರ್ತೆಯರು ಕಾಂಡೊಮ್ ಹೊಂದಿದ ಉಡುಗೊರೆ ಕಿಟ್ ವಿತರಿಸಲಿದ್ದಾರೆ. ಕುಟುಂಬ ಯೋಜನೆ ಉತ್ತೇಜಿಸುವ ಸಲುವಾಗಿ ಕಾಂಡೋಮ್, ಗರ್ಭ ನಿರೋಧಕ ಮಾತ್ರೆ ಮತ್ತಿತರ ವಸ್ತುಗಳನ್ನು ಕಿಟ್’ನಲ್ಲಿ ನೀಡಲಾಗುವುದು.
ಕುಟುಂಬ ಯೋಜನೆಯ ಅಗತ್ಯ, ಇಬ್ಬರು ಮಕ್ಕಳ ನಡುವೆ ಇರಬೇಕಾದ ಅಂತರ, ಇತ್ಯಾದಿ ಅಗತ್ಯ ಮಾಹಿತಿಯ ಕಿರಹೊತ್ತಗೆ ಇರಲಿದೆ. ಜು.11ರ ವಿಶ್ವ ಜನಸಂಖ್ಯಾ ದಿನದಂದು ಮಿಶನ್ ಪರಿವಾರ್ ವಿಕಾಸ್ ಯೋಜನೆಯಡಿ ಇದು ಜಾರಿಗೊಳ್ಳಲಿದೆ.
ಉತ್ತರ ಪ್ರದೇಶ ಸರ್ಕಾರದ ಯೋಜನೆಯನ್ನು ಟೀಕಿಸಿರುವ ಪ್ರತಿಪಕ್ಷಗಳು, ರಾಜ್ಯದ ನ್ನೂ ಗಂಭೀರ ವಿಚಾರಗಳಿವೆ. ಅವುಗಳತ್ತ ಗಮನಹರಸಿವುದನ್ನು ಬಿಟ್ಟು ಯೋಗಿ ಸರ್ಕಾರವು ಅನಗತ್ಯವಾದ ಯೋಜನೆಗಳನ್ನು ಆರಂಭಿಸುತ್ತಿದೆ ಎಂದು ಹೇಳಿವೆ.
