ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ತಮ್ಮ ಸ್ವಕ್ಷೇತ್ರ ಗೋರಕ್ ಪುರಕ್ಕೆ ಇಂದು ಭೇಟಿ ನೀಡಲಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಗೋರಕ್ ಪುರಕ್ಕೆ ಭೇಟಿ ನೀಡುತ್ತಿದ್ದಾರೆ.

ನವದೆಹಲಿ (ಮಾ.25): ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ತಮ್ಮ ಸ್ವಕ್ಷೇತ್ರ ಗೋರಕ್ ಪುರಕ್ಕೆ ಇಂದು ಭೇಟಿ ನೀಡಲಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಗೋರಕ್ ಪುರಕ್ಕೆ ಭೇಟಿ ನೀಡುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇವರನ್ನು ಆಹ್ವಾನಿಸಲು ಗೋರಕ್ ಪುರದಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ರಸ್ತೆ ಬದಿಗಳಲ್ಲಿ ಪೋಸ್ಟರ್ ಗಳು ರಾರಾಜಿಸುತ್ತಿವೆ. ಗೋರಕ್ ಪುರ ವಿಮಾನ ನಿಲ್ದಾಣದಿಂದ ನಂದಾನಗರ್, ಮೋಹ್ದಿ ಪುರ್ ಪುರ್, ಚೌರಾ ವಿವಿ, ಎಂಪಿ ಇಂಟರ್ ಕಾಲೇಜ್ ಗ್ರೌಂಡ್ ವರೆಗೆ ರೋಡ್ ಶೋ ನಡೆಸಲಿದ್ದಾರೆ. ಬಳಿಕ ಗೋರಕನಾಥ ದೇವಾಲಯಕ್ಕೆ ಭೇಟಿ ನೀಡಲಿದ್ದು ಇವರನ್ನು ಸ್ವಾಗತಿಸಲು ನೂರಾರು ಮಂದಿ ಹೊರಗಡೆ ಸಾಲಾಗಿ ನಿಂತಿದ್ದಾರೆ. ನಾಳೆವರೆಗೂ ಆದಿತ್ಯನಾಥ್ ಗೋರಕ್ ಪುರದಲ್ಲಿಯೇ ತಂಗಲಿದ್ದಾರೆ ಎನ್ನಲಾಗಿದೆ.