ಹುತಾತ್ಮ ಬಿಎಸ್‌‌ಎಫ್‌ ಪೇದೆ ಪ್ರೇಮ್‌ ಸಾಗರ್‌ ಅವರ ಕುಟುಂಬಕ್ಕೆ ಉತ್ತರ ಪ್ರದೇಶದ ಅಧಿಕಾರಿಗಳು ಅವಮಾನ ಮಾಡಿದ್ದಾರೆ. ಹುತಾತ್ಮನ ಮನೆಗೆ ಸಿಎಂ ಯೋಗಿ ಆದಿತ್ಯನಾಥ್‌ ಭೇಟಿ ನೀಡಲಿದ್ದಾರೆ ಎಂದು ತಿಳಿದ ಅಧಿಕಾರಿಗಳು ಆತನ ಮನೆಗೆ ವಿಂಡೋ ಏರ್‌‌ ಕಂಡಿಷನ್‌‌, ಕಾರ್ಪೆಟ್, ಸೋಫಾ ಸೆಟ್‌‌ ಮತ್ತಿತರ ಐಷಾರಾಮಿ ವಸ್ತುಗಳನ್ನು ಅಳವಡಿಸಿದ್ದರು. ಆದರೆ, ಸಿಎಂ ತೆರಳುತ್ತಿದ್ದಂತೆ ಹುತಾತ್ಮನ ಮನೆಗೆ ಅಳವಡಿಸಿದ್ದ ಐಷಾರಾಮಿ ವಸ್ತುಗಳನ್ನು ತೆರವು ಮಾಡಿದ್ದಾರೆ. 

ಲಕ್ನೋ(ಮೇ.15): ಹುತಾತ್ಮ ಬಿಎಸ್‌‌ಎಫ್‌ ಪೇದೆ ಪ್ರೇಮ್‌ ಸಾಗರ್‌ ಅವರ ಕುಟುಂಬಕ್ಕೆ ಉತ್ತರ ಪ್ರದೇಶದ ಅಧಿಕಾರಿಗಳು ಅವಮಾನ ಮಾಡಿದ್ದಾರೆ. ಹುತಾತ್ಮನ ಮನೆಗೆ ಸಿಎಂ ಯೋಗಿ ಆದಿತ್ಯನಾಥ್‌ ಭೇಟಿ ನೀಡಲಿದ್ದಾರೆ ಎಂದು ತಿಳಿದ ಅಧಿಕಾರಿಗಳು ಆತನ ಮನೆಗೆ ವಿಂಡೋ ಏರ್‌‌ ಕಂಡಿಷನ್‌‌, ಕಾರ್ಪೆಟ್, ಸೋಫಾ ಸೆಟ್‌‌ ಮತ್ತಿತರ ಐಷಾರಾಮಿ ವಸ್ತುಗಳನ್ನು ಅಳವಡಿಸಿದ್ದರು. ಆದರೆ, ಸಿಎಂ ತೆರಳುತ್ತಿದ್ದಂತೆ ಹುತಾತ್ಮನ ಮನೆಗೆ ಅಳವಡಿಸಿದ್ದ ಐಷಾರಾಮಿ ವಸ್ತುಗಳನ್ನು ತೆರವು ಮಾಡಿದ್ದಾರೆ. 

ಇತ್ತೀಚೆಗೆ ಪಾಕ್ ಸೇನೆಯಿಂದ ಶಿರಚ್ಛೇದಕ್ಕೊಳಾಗದ ಇಬ್ಬರು ಯೋಧರ ಪೈಕಿ ಬಿಎಸ್‌‌ಎಫ್‌ ಪೇದೆ ಪ್ರೇಮ್‌ ಸಾಗರ್‌ ಒಬ್ಬರು. ಪ್ರೇಮ್‌ ಸಾಗರ್‌ ಅವರ ಕುಟುಂಬ ಇಲ್ಲಿನ ಡಿಯೋರಿಯಾದಲ್ಲಿ ವಾಸವಿದೆ. ಹೀಗಾಗಿ ಸಿಎಂ ಯೋಗಿ ಹುತಾತ್ಮ ಪ್ರೇಮ್‌ ಸಾಗರ್‌ ಮನೆಗೆ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ನಿರ್ಧರಿಸಿದ್ದರು.

ಸಿಎಂ ಯೋಗಿ ಹುತಾತ್ಮ ಪ್ರೇಮ್‌ ಸಾಗರ್‌ ಮನೆಗೆ ಭೇಟಿ ಕೊಡುತ್ತಾರೆ ಎಂಬ ವಿಷಯ ತಿಳಿದಾಕ್ಷಣ ಜಿಲ್ಲಾಡಳಿತ ಅಧಿಕಾರಿಗಳು ಸಿಎಂರನ್ನು ರತ್ನಗಂಬಳಿ ಹಾಸಿ ಸ್ವಾಗತಿಸಲು ಸಜ್ಜಾಗಿದ್ದಾರೆ. ಜೊತೆಗೆ ಹುತಾತ್ಮನ ಯೋಧ ಮನೆಯಲ್ಲೂ ವಿಂಡೋ ಏರ್‌‌ ಕಂಡಿಷನ್‌‌, ಕಾರ್ಪೆಟ್, ಸೋಫಾ ಸೆಟ್‌‌ ಮತ್ತಿತರ ಐಷಾರಾಮಿ ವಸ್ತುಗಳನ್ನು ಅಳವಡಿಸಿದ್ದಾರೆ. ಅಂತೆಯೇ ಸಿಎಂ ಯೋಗಿ ಯೋಧನ ಮನೆಗೆ ಕೊಟ್ಟು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ಸಂದರ್ಭದಲ್ಲಿ 4 ಲಕ್ಷ ರೂಪಾಯಿಗಳ ಪರಿಹಾರ ಚೆಕ್‌ ವಿತರಿಸಿದ್ದಾರೆ. ಅಲ್ಲದೇ ಯೋಧನ ಪತ್ನಿ ಹೆಸರಲ್ಲಿ 2 ಲಕ್ಷ ರೂ. ಬ್ಯಾಂಕ್‌‌ನಲ್ಲಿ ಠೇವಣಿ ಹಿಡುವ ಭರವಸೆಯನ್ನು ಕೊಟ್ಟಿದ್ದಾರೆ. ಬಳಿಕ ಸಿಎಂ ಯೋಗಿ ಹುತಾತ್ಮ ಯೋಧ ಮನೆಯಿಂದ ತೆರಳಿದ್ದಾರೆ.

ಆದರೆ, ಸಿಎಂ ಯೋಗಿ ಹುತಾತ್ಮ ಯೋಧನ ಮನೆಯಿಂದ ತೆರಳಿದ ನಂತರ 15ನಿಮಿಷದಲ್ಲಿ ಮನೆಯಲ್ಲಿ ಅಳವಡಿಸಿದ್ದ ಎಲ್ಲಾ ವಸ್ತುಗಳನ್ನು ಅಧಿಕಾರಿಗಳು ತೆರವು ಮಾಡಿದ್ದಾರೆ. ಇದನ್ನು ಯೋಧ ಸಹೋದರ ದಯಾಶಂಕರ್‌ ಮಾಧ್ಯಮಗಳ ಗಮನಕ್ಕೆ ತಂದಿದ್ದಾರೆ. ಅಲ್ಲದೇ, ಇದೀಗ ಈ ಘಟನೆ ದೇಶಾದ್ಯಂತ ಚರ್ಚೆ ಗ್ರಾಸವಾಗಿದೆ. ಆದರೆ, ಈ ಬಗ್ಗೆ ಜಿಲ್ಲಾಡಳಿತ ಇದುವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.