ನವದೆಹಲಿ : ಬಿಜೆಪಿ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದ  ಓಂ ಪ್ರಕಾಶ್ ರಾಜಭರ್ ಅವರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂಪುಟದಿಂದ ವಜಾಗೊಳಿಸಿದ್ದಾರೆ. 

ಬಿಜೆಪಿಗೆ ಬೆಂಬಲ ನೀಡಿದ ರಾಜ್ ಭರ್ ಅವರ ಪಕ್ಷ ಸುಹೇಲ್ ಭಾರತೀಯ ಸಮಾಜ ಪಕ್ಷವನ್ನು ಕೈ ಬಿಟ್ಟಿದ್ದಾರೆ. ಸಚಿವ ಶ್ರೇಣಿಯಲ್ಲಿರುವ ಅವರ ಆಪ್ತರನ್ನು ಕೈ ಬಿಡಲು ಗರ್ವನರ್ ಅವರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಶಿಫಾರಸ್ಸು ಮಾಡಿದ್ದಾರೆ. 

ಗರ್ವನರ್ ಅವರಿಗೆ ಮನವಿ ಮಾಡಿದ ಸಿಎಂ  ಓಂ ಪ್ರಕಾಶ್ ರಾಜ್ ಭರ್ ಸಂಪುಟದಿಂದ ತಕ್ಷಣವೇ ಕೈ ಬಿಡಲು ಅವಕಾಶ ನೀಡಬೇಕು. ವಿಶೇಷ ಚೇತನರ ಹಾಗೀ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿರುವ  ಅವರು ಹಿಂದೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ರಾಜೀನಾಮೆ ಅಂಗೀಕಾರವಾಗಿರಲಿಲ್ಲ ಎಂದು ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಎಸ್ ಪಿ - ಎಸ್ ಪಿ ಮೈತ್ರಿಕೂಟ ಬಿಜೆಪಿಯನ್ನು ಸೋಲಿಸಿ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸಲಿದೆ. ಬಿಜೆಪಿ ಹೆಚ್ಚಿನ ಸ್ಥಾನ ಕಳೆದುಕೊಳ್ಳಲಿದೆ ಎಂದು ರಾಜ ಭರ್ ಹೇಳಿದ್ದರು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.