ಗೋರಕ್'ಪುರ[ಆ.27]: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭದ್ರತಾ ಸಿಬ್ಬಂದಿಯೊಬ್ಬರು ತಮ್ಮ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಕಾಸ್ ಸಿಂಗ್ [35] ಆತ್ಮಹತ್ಯೆ ಮಾಡಿಕೊಂಡವರು. ಇವರು ತಮ್ಮ ಬುದ್ಧ ವಿಹಾರದ ಪ್ರದೇಶದ ಮನೆಯಲ್ಲಿ  ಸರ್ವಿಸ್ ರಿವಾಲ್ವಾರ್'ನಿಂದಲೇ ಗುಂಡು ಹೊಡೆದುಕೊಂಡಿದ್ದಾರೆ. ಕೋರಬಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಾಥಮಿಕ ತನಿಖೆಗಳ ವರದಿಯಂತೆ ಕೌಟಂಬಿಕ ಜಗಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಸ್ಪಿ ವಿನಯ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಇತ್ತೀಚಿಗಷ್ಟೆ ವಿಕಾಸ್ ಸಿಂಗ್ ಅವರನ್ನು ಸಿದ್ದಾರ್ಥ್ ನಗರ ಜಿಲ್ಲೆಯಿಂದ ಮುಖ್ಯಮಂತ್ರಿಗಳ ಭದ್ರತಾ ಸಿಬ್ಬಂದಿಯಾಗಿ ನಿಯೋಜಿಸಲಾಗಿತ್ತು.ಹೆಂಡತಿಯೊಂದಿಗೆ ಬಹಳ ಹೊತ್ತು ಜಗಳವಾಡಿದ ಕೆಲ ಹೊತ್ತಿನ ನಂತರ ಗುಂಡು ಹೊಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಈತನ ಪತ್ನಿ ತಾಯಿ ಹಾಗೂ ಮಕ್ಕಳು ಮಹಡಿ ಮೇಲಿದ್ದರು. ಆತ್ಮಹತ್ಯೆಗೆ ಬಳಸಿದ ರಿವಾಲ್ವಾರ್ ಅನ್ನು ಜಫ್ತಿ ಮಾಡಲಾಗಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.