ಉತ್ತರ ಪ್ರದೇಶ(ಅ.19): ಉತ್ತರ ಪ್ರದೇಶದಲ್ಲಿ ರಾಮರಾಜ್ಯ ಸ್ಥಾಪನೆ ಮಾಡುವುದು ನಮ್ಮ ಮುಖ್ಯ ಗುರಿ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತಿಳಿಸಿದ್ದಾರೆ.

ಅಯೋಧ್ಯೆಯ ಸರಯೂ ನದಿ ತೀರದಲ್ಲಿ ಬೃಹತ್‌ ದೀಪೋತ್ಸವಕ್ಕೆ ಚಾಲನೆ ನೀಡಿ ಆದಿತ್ಯನಾಥ್‌ ಮಾತನಾಡಿದರು.ಉತ್ತರ ಪ್ರದೇಶದಲ್ಲಿ ರಾಮರಾಜ್ಯ ಸ್ಥಾಪನೆ ನಮ್ಮ ಕನಸು. ಇದಕ್ಕೆ ಸಂಕಲ್ಪ ಮಾಡಲಾಗಿದೆ ಎಂದರು. ಅಯೋಧ್ಯೆಯು ಮಾನವತೆಯ ಪುಣ್ಯಭೂಮಿಯಾಗಿದೆ. ರಾಮರಾಜ್ಯ ಪೌರಾಣಿಕ ಪರಿಕಲ್ಪನೆಯ ಮೂಲಕ ಮಾನವತೆಯನ್ನು ಜಗತ್ತಿಗೆ ಕಲಿಸಲಾಗಿದೆ ಎಂದು ಆದಿತ್ಯನಾಥ್‌ ತಿಳಿಸಿದ್ದಾರೆ.

ರಾಮರಾಜ್ಯ ಸ್ಥಾಪನೆ ಮೂಲಕ ಉತ್ತರ ಪ್ರದೇಶವನ್ನು ಭಾರತ ಮತ್ತು ವಿಶ್ವದ ಅತ್ಯಂತ ಖ್ಯಾತ ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಲಾಗುವುದು. ಅಯೋಧ್ಯೆ ಅಭಿವೃದ್ಧಿಗಾಗಿ 133 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುತ್ತಿದೆ ಎಂದರು.ಶ್ರೀರಾಮನ ವಿರೋಧಿಸುವವರು ಅಯೋಧ್ಯೆಯ ಅಭಿವೃದ್ಧಿಗೆ ನಮ್ಮ ಪ್ರಯತ್ನಗಳನ್ನು ತಡೆಯಲಾರರು ಎಂದು ಯೋಗಿ ಆದಿತ್ಯನಾಥ್‌ ತಿಳಿಸಿದರು. ಸುಮಾರು ಎರಡು ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ಗಿನ್ನೆಸ್‌ ದಾಖಲೆ ನಿರ್ಮಿಸಲು ಪ್ರಯತ್ನಿಸಲಾಗುತ್ತಿದೆ.