ಬೆಂಗಳೂರು(ಸೆ.14): ಚಿತ್ರ ಸಾಹಿತಿ, ಸ್ಯಾಂಡಲ್'ವುಡ್ ನಿರ್ದೇಶಕ ಯೋಗರಾಜ್ ಭಟ್ ತಮ್ಮದೇ ಸ್ಟೈಲಿನಲ್ಲಿ ಕಾವೇರಿ ವಿಚಾರವಾಗಿ ರಾಜ್ಯದ ಜನತೆಗೆ, ರಾಜಕೀಯ ಮುಖಂಡರಿಗೆ ಪತ್ರವೊಂದನ್ನು ಬರೆದಿದ್ದಾರೆ.

ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಮುಖಂಡರೆಲ್ಲರು ಒಟ್ಟಿಗೆ ಸೇರಿ ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂದು ಒಗ್ಗಟ್ಟು ಪ್ರದರ್ಶೀಸ ಬೇಕು ಎಂದು ಯೋಗರಾಜ್ ಭಟ್ ಮನವಿ ಮಾಡಿದ್ದಾರೆ. 

ನಮ್ಮಲ್ಲಿ ಕುಡಿಯುವ ನೀರಿನ ಕೊರತೆ ಇದೆ, ಆದರೆ ಅವರು ಬೆಳೆಗೆ ನೀರು ಕೇಳುತ್ತಿದ್ದಾರೆ ಈ ಹಿನ್ನಲೆಯಲ್ಲಿ ನಮ್ಮ ನಾಯಕರು ಸುಪ್ರೀಂ ಕೋರ್ಟ್'ಗೆ ಇಲ್ಲಿನ ಪರಿಸ್ಥಿತಿಯನ್ನು ತಿಳಿ ಹೇಳಬೇಕು. ಕೇಳಲಿಲ್ಲ ಎಂದರೆ ನೀರು ಕೊಡುವುದಿಲ್ಲ ಎನ್ನಬೇಕು ಎಂದಿದ್ದಾರೆ. 

ರಾಜಕೀಯ ಮುಖಂಡರು ನಮ್ಮಲೇ ನೀರಿಲ್ಲ, ಕಾವೇರಿಯನ್ನು ಬಿಡುವುದಿಲ್ಲ ಎನ್ನುವುದನ್ನು ಕೂಗಿ ಹೇಳಬೇಕು. ಈ ವಿಷಯದಲ್ಲಿ ಜೈಲಿಗೆ ಹೋಗಲು ನಾಯಕರು ಹೆದರಬಾರದು ಎಂದಿದ್ದಾರೆ. 

ಜೀವನದಲ್ಲಿ ಒಮ್ಮೆಯಾದರು ಎಲ್ಲಾರು ಒಟ್ಟಾಗಿ ಹೋರಾಡಿ ಎಂದು ಮನವಿ ಮಾಡಿದ್ದಾರೆ. ಹಿಂಸೆ ಬೇಡ, ಬೆಂಕಿ ಇಡುವುದು ಬೇಡ, ಇದರ ಬದಲು ನಮ್ಮ ಮುಖಂಡರನ್ನು ಹಿಡಿಯೋಣ ಅವರು ಬಂದು ನಮ್ಮೊಂದಿಗೆ ಹೋರಾಟ ಮಾಡಲಿ, ನೀರು ಕೊಡುವುದಿಲ್ಲ ಎಂಬುದು ಒಂದೇ ಉತ್ತರವಾಗಲಿ ಎಂದು ಭಟ್ಟರು ಪತ್ರ ಬರೆದಿದ್ದಾರೆ.

Scroll to load tweet…