ಯಶವಂತಪುರ-ಬಿಕಾನೇರ ರೈಲಿನಲ್ಲಿ ಬಾಂಬ್ ಶಂಕೆ: ತೀವ್ರಗೊಂಡ ತಪಾಸಣೆ

ಬಿಕಾನೇರ ರೈಲಿನಲ್ಲಿ ಬಾಂಬ್ ಇದೆ ಎಂಬ ಶಂಕೆ ಹಿನ್ನೆಲೆಯಲ್ಲಿ ಬಾಗಲಕೋಟೆ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿ ತಪಾಸಣೆ ನಡೆಸಲಾಗಿದೆ. ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.

Yeshwantpur-Bikaner  train searched at Bagalkot station after bomb Threat

ಬಾಗಲಕೋಟೆ, [ಅ.21]:  ಬಿಕಾನೇರ ರೈಲಿನಲ್ಲಿ ಬಾಂಬ್ ಇದೆ ಎಂಬ ಶಂಕೆ ಹಿನ್ನೆಲೆ ಬಾಗಲಕೋಟೆ ಮತ್ತು ಬೆಳಗಾವಿ ಬಾಂಬ್ ನಿಷ್ಕ್ರಿಯ ದಳ ರೈಲು ಪರಿಶೀಲನೆ ನಡೆಸಿದೆ.

ಯಶವಂತಪುರದಿಂದ ಬಾಗಲಕೋಟೆ ಮಾರ್ಗವಾಗಿ ಬಿಕಾನೇರಕ್ಕೆ ಹೊರಟಿದ್ದ ರೈಲಿನಲ್ಲಿ ಬಾಂಬ್ ಶಂಕೆ ವ್ಯಕ್ತವಾಗಿದೆ. ಇದ್ರಿಂದ ಬಾಗಲಕೋಟೆ ರೈಲು ನಿಲ್ದಾಣದಲ್ಲಿ  ಶ್ವಾನದಳ ಹಾಗೂ ಬಾಂಬ್  ನಿಷ್ಕ್ರಿಯ ದಳ ರೈಲು ತಪಾಸಣೆ ನಡೆಸಿದರು.

 ಪ್ರಯಾಣಿಕರನ್ನು ಕೆಳಗಿಳಿಸಿ ತೀವ್ರವಾಗಿ ಪರಿಶೀಲನೆ ನಡೆಸಿದ್ದಾರೆ. ಇದ್ರಿಂದ ಬಾಗಲಕೋಟೆ ರೈಲ್ವೆ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದೆ.ರಕ್ಷಣಾ ವಿಭಾಗದಿಂದ ಕರೆ ಬಂದ ಹಿನ್ನೆಲೆಯಲ್ಲಿ ರೈಲು ಪರಿಶೀಲನೆ ನಡೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ‌ರಿಷ್ಯಂತ್ ಸ್ಪಷ್ಟಪಡಿಸಿದರು.

Latest Videos
Follow Us:
Download App:
  • android
  • ios