ಕಾರವಾರ [ಜು.25] : ಅತೃಪ್ತರ ಗುಂಪು  ಬಿಟ್ಟು ಮುಂಬೈನಿಂದ ವಾಪಸಾದ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಅವರಿಗೆ ವಾಪಸ್ ಆಗಲು ಸೂಚಿಸಲಾಗಿದೆ. 

ಮುಂಬೈನಲ್ಲಿರುವ ಅತೃಪ್ತ ನಾಯಕರು ಶಿವರಾಮ್ ಹೆಬ್ಬಾರ್ ಅವರಿಗೆ ಕರೆ ಮಾಡಿ ಯಾವಾಗ ವಾಪಸಾಗುತ್ತೀರಿ ಎಂದು ಪ್ರಶ್ನೆ ಮಾಡಿದ್ದು, ಇಂದೇ ಮರಳುವುದಾಗಿ ತಿಳಿಸಿದರು. ಗುರುವಾರ ಸಂಜೆಯ ವೇಳೆ ಮುಂಬೈನಲ್ಲಿ ಇರುವುದಾಗಿ  ಶಿವರಾಮ್ ಹೇಳಿದರು. 

ಅಲ್ಲದೆ ಕರೆ ಸ್ವೀಕರಿಸಿ ಮಾತನಾಡಿದ ಬಳಿಕವೇ ಅವರು ಮನೆಯಿಂದ ಹೊರಟಿದ್ದು, ಎಲ್ಲಿಗೆ ತೆರಳುತ್ತಿದ್ದಾರೆ ಎನ್ನುವ ಯಾವುದೇ ಮಾಹಿತಿ ನೀಡಿಲ್ಲ. ತುರ್ತಾಗಿ ತೆರಳುತ್ತಿರುವುದಾಗಿ ಹೇಳಿದರು. 

ಕರ್ನಾಟಕ ರಾಜಕೀಯದ ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ
 
ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ 14 ನಾಯಕರೊಂದಿಗೆ ಮುಂಬೈಗೆ ತೆರಳಿದ್ದ ಶಿವರಾಮ್ ಹೆಬ್ಬಾರ್ ದಿಢೀರ್ ಬುಧವಾರ ರಾತ್ರಿ ಮರಳಿದ್ದರು. ಸರ್ಕಾರ ಉಳಿಸಲು ದೋಸ್ತಿ ಪಡೆಯ ನಾಯಕರ ಮನವೊಲಿಸುವ ಯಾವ ಪ್ರಯತ್ನಕ್ಕೂ ಬಗ್ಗದೇ ಅಲ್ಲಿಯೇ ನೆಲೆಸಿದ್ದರು.