Asianet Suvarna News Asianet Suvarna News

'ಇದೊಂದು ಥರ ಲಜ್ಜೆ ಗೆಟ್ಟ ಸರ್ಕಾರ, ಸದನವನ್ನ ನಡೆಸೋಕೆ ಆಸಕ್ತಿಯಿಲ್ಲ'

ಕೊನೆಗಾಣುತ್ತಿಲ್ಲ ರಾಜಕೀಯ ಪ್ರಹಸನ| ವಿಶ್ವಾಸಮತ ಯಾಚಿಸದ ದೋಸ್ತಿ ಸರ್ಕಾರದ ವಿರುದ್ಧ ಬಿಜೆಪಿ ಶಾಸಕನ ಕಿಡಿ| ನೈತಿಕತೆ ಇದ್ರೆ ವಿಶ್ವಾಸಮತ ಯಾಚಿಸಿ

Yelahanka MLA SR Vishwanath Slams JDS Congress Leaders
Author
Bangalore, First Published Jul 20, 2019, 11:27 AM IST

ಬೆಂಗಳೂರು[ಜು.20]: ಎರಡು ವಾರಗಳಿಂದ ನಡೆಯುತ್ತಿರುವ ರಾಜಕೀಯ ಪ್ರಹಸನ ಕೊನೆಗಾಣುವ ಲಕ್ಷಣಗಳು ಕಾಣುತ್ತಿಲ್ಲ. ಸದನದಲ್ಲಿ ವಿಶ್ವಾಸಮತ ಮಂಡಿಸದಿರುವ ಸರ್ಕಾರದ ವಿರುದ್ಧ ಸದ್ಯ ಬಿಜೆಪಿ ನಾಯಕರು ಗರಂ ಆಗಿದ್ದಾರೆ. ಕಲಾಪ ಸೋಮವಾರಕ್ಕೆ ಮುಂದೂಡಿದ ಬಳಿಕ ಸದ್ಯ ಮೂರೂ ಪಕ್ಷದ ಶಾಸಕರು ರೆಸಾರ್ಟ್ ಗಳಿಗೆ ಶಿಫ್ಟ್ ಆಗಿದ್ದಾರೆ. ಹೀಗಿರುವಾಗ ರಮಡ ರೆಸಾರ್ಟ್ ನಲ್ಲಿರುವ  ಯಲಹಂಕ ಶಾಸಕ ಎಸ್‌. ಆರ್ ವಿಶ್ವನಾಥ್ ದೋಸ್ತಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮಗಳಿಗೆ ಸದನ ಕಲಾಪ ಕುರಿತಾಗಿ ಪ್ರತಿಕ್ರಿಯಿಸಿರುವ ಶಾಸಕ ಎಸ್‌. ಆರ್ ವಿಶ್ವನಾಥ್ 'ಇದೊಂದು ಥರ ಲಜ್ಜೆ ಗೆಟ್ಟ ಸರ್ಕಾರ ಸದನವನ್ನು ನಡೆಸಲು ಆಸಕ್ತಿಯಿಲ್ಲ. ಅತೃಪ್ತರು ಬರುವವರೆಗೆ ನಾವು ಸದನವನ್ನು ನಡೆಸಲ್ಲ ಎಂಬ ದೋಸ್ತಿಗಳ ಧೋರಣೆ ಸರಿಯಿಲ್ಲ. ಅವರು ಬರುವಂತಿದ್ದರೆ ಕರೆತಂದು ವಿಶ್ವಾಸ ಮತ ಯಾಚನೆ ಮಾಡಲಿ. ಆದರೆ ಕಾಲಹರಣ ಮಾಡೋದು ಸರಿ ಇಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದೇ ವೇಳೆ ದೋಸ್ತಿ ನಾಯಕರಿಗೆ ಎಚ್ಚರಿಸಿರುವ ವಿಶ್ವನಾಥ್ 'ಸಭಾಧ್ಯಕ್ಷರು ಸೋಮವಾರ ಮತಯಾಚನೆ ಮಾಡಿ ಎಂದು ಹೇಳಿದ್ದಾರೆ. ಅವರ ಮಾತಿನ ಮೇಲೆ ನಮಗೆ ವಿಶ್ವಾಸ ಇದೆ. ಅತೃಪ್ತರನ್ನು ಮನವೊಲಿಸ್ತಾರೋ ಏನು ಮಾಡ್ತಾರೋ ನಮಗೆ ಗೊತ್ತಿಲ್ಲ, ಆದರೆ ವಿಶ್ವಾಸ ಮತ ಯಾಚನೆ ಮಾಡಿ. ಜನರು ಈ ಎಲ್ಲಾ ಆಟವನ್ನು ನೋಡುತ್ತಿದ್ದಾರೆ. ನೈತಿಕತೆ ಇದ್ರೆ ವಿಶ್ವಾಸ ಮತಯಾಚನೆ ಮಾಡಿ. ಸುಮ್ಮನೆ ಕಾಲ ಹರಣ ಮಾಡೋದು ಸರಿಯಲ್ಲ' ಎಂದಿದ್ದಾರೆ.


 

Follow Us:
Download App:
  • android
  • ios