Asianet Suvarna News Asianet Suvarna News

ಲಿಂಗ ಬದಲಾಯಿಸಿಕೊಳ್ಳಲು ಬಂಗಾರ ಕದ್ದ ಬಾಲಕ

ಐಶಾರಾಮಿ ಜೀವನ ನಡೆಸುವ ಸಲುವಾಗಿ ಬಾಲಕನೋರ್ವ ಬಂಗಾರವನ್ನು ಕದ್ದೊಯ್ದು ಲಿಂಗ ಬದಲಾವಣೆ ಚಿಕಿತ್ಸೆಗೆ ಒಳಪಡಲು ಮುಂದಾದ ಘಟನೆ ನಾಗ್ಪುರದಲ್ಲಿ ನಡೆದಿದೆ. 

Year Old Boy Steals 50 tola Gold For Sex Change
Author
Bengaluru, First Published Sep 23, 2018, 1:53 PM IST
  • Facebook
  • Twitter
  • Whatsapp

ನಾಗ್ಪುರ :  ನಾಗ್ಪುರದಲ್ಲಿ 14 ವರ್ಷದ ಬಾಲಕನೋರ್ವ 50 ತೊಲ ಬಂಗಾರವನ್ನು ಕದ್ದು ಪರಾರಿಯಾದ ಒಂದು ತಿಂಗಳ ಬಳಿಕ ಪೊಲೀಸರು ಪತ್ತೆ ಹಚ್ಚಿದ್ದಾರೆ. 

ಸಂಬಂಧಿ ಮಹಿಳೆಯ ಬಂಗಾರವನ್ನು ಕದ್ದೊಯ್ದ ಬಾಲಕ ಲಿಂಗ ಬದಲಾವಣೆ ಚಿಕಿತ್ಸೆಗೆ ಒಳಪಡಲು ಬಯಸಿದ್ದ ಎನ್ನಲಾಗಿದೆ. 

ಬಾರ್ ಡಾನ್ಸರ್ ಗಳನ್ನು ನೋಡಿದ್ದ ಆತ ಅವರಂತೆ ಐಶಾರಾಮಿ ಜೀವನ ಶೈಲಿಯನ್ನು ನಡೆಸಬಹುದು ಎಂದು ಲಿಂಗ ಬದಲಾವಣೆ ಮಾಡಿಕೊಳ್ಳಲು ಮುಂದಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. 

8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಈ ಬಾಲಕ ಕಳೆದ ಆಗಸ್ಟ್ 7 ರಂದು ಮನೆಯಿಂದ ಪರಾರಿಯಾಗಿದ್ದ.  ಸೆಪ್ಟೆಂಬರ್ 17 ರಂದು ಈ ಬಾಲಕನನ್ನು ರಕ್ಷಣೆ ಮಾಡಿ ಕರೆತಂದಿದ್ದಾರೆ. 

ಇದೇ ವೇಳೆ ನಾಲ್ವರನ್ನು ಬಂಧಿಸಿ ಅವರಿಂದ  30 ತೊಲ ಬಂಗಾರ ದ್ವಿಚಕ್ರ ವಾಹನ ಹಾಗೂ ಮೂರು ಮೊಬೈಲ್ ಫೊನ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಈ ಇವರನ್ನು ಸದ್ಯ ರಿಮಾಂಡ್ ಹೋಮ್ ನಲ್ಲಿ ಇರಿಸಲಾಗಿದೆ. 

Follow Us:
Download App:
  • android
  • ios