ಯದುವಂಶದ ಕುಡಿ ಮೈಸೂರಿನ ಮಹಾರಾಜ ಯದುವೀರ್-ತ್ರಿಷಿಕಾ ದಂಪತಿ ಪುತ್ರ ಆದ್ಯವೀರ್’ನನ್ನು ಇಂದು ತಂದೆಯ ಮನೆಗೆ ಕರೆತರಲಾಗಿದೆ. ಮಗನನ್ನು ದಂಪತಿ ಇಂದು ಮೈಸೂರಿಗೆ ಕರೆತಂದಿದ್ದಾರೆ. ಆರತಿ ಮಾಡಿ ಇಳಿ ತೆಗೆದು ಮಗುವನ್ನು ಅರಮನೆಗೆ ಬರಮಾಡಿಕೊಳ್ಳಲಾಗಿದೆ.

ಮೈಸೂರು : ಯದುವಂಶದ ಕುಡಿ ಮೈಸೂರಿನ ಮಹಾರಾಜ ಯದುವೀರ್-ತ್ರಿಷಿಕಾ ದಂಪತಿ ಪುತ್ರ ಆದ್ಯವೀರ್’ನನ್ನು ಇಂದು ತಂದೆಯ ಮನೆಗೆ ಕರೆತರಲಾಗಿದೆ. ಮಗನನ್ನು ದಂಪತಿ ಇಂದು ಮೈಸೂರಿಗೆ ಕರೆತಂದಿದ್ದಾರೆ. ಆರತಿ ಮಾಡಿ ಇಳಿ ತೆಗೆದು ಮಗುವನ್ನು ಅರಮನೆಗೆ ಬರಮಾಡಿಕೊಳ್ಳಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರಿನಲ್ಲಿ ಮಗುವಿನ ನಾಮಕರಣವನ್ನು ನೆರವೇರಿಸಿದ್ದು, ಈ ಬಗ್ಗೆ ಮಾತನಾಡಿದ ಯದುವೀರ್ ಒಡೆಯರ್ ನಮ್ಮ ಅನುಕೂಲಕ್ಕಾಗಿ ಬೆಂಗಳೂರಲ್ಲಿ ನಾಮಕರಣ ಮಾಡಿಲಾಗಿದೆ ಅಷ್ಟೆ. ಅದನ್ನು ಹೊರತು ಪಡಿಸಿ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಹೇಳಿದ್ದಾರೆ. ಇನ್ನು ಶೀಘ್ರದಲ್ಲೇ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಾಗುವುದು ಎಂದರು.

ಇನ್ನು ಮಗುವಿಗೆ ಆದ್ಯವೀರ್ ಎಂದು ಹೆಸರಿಡಲಾಗಿದ್ದು, ಈ ಹೆಸರಿನ ಅರ್ಥವನ್ನು ಈ ವೇಳೆ ಯದುವೀರ್ ಒಡೆಯರ್ ತಿಳಿಸಿದ್ದು, ಇದರ ಅರ್ಥ ಚಾಮುಂಡಿ ಅಥವಾ ದುರ್ಗಿ ಎಂದು. ಮಗುವಿನ ಒಳಿತಿಗಾಗಿ ಈ ಹೆಸರು ಇಡಲಾಗಿದೆ ಮಗ ಆದ್ಯವೀರ್ ಚೆನ್ನಾಗಿದ್ದಾನೆ ಎಂದು ಹೇಳಿದರು.