ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ವಿರುದ್ಧದ ಪ್ರಕರಣವೊಂದಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಎಸಿಬಿ ಇತಿಶ್ರೀ ಹಾಡಿದೆ. ಇದರಿಂದ ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರಗೆ ಎದುರಾಗಿದ್ದ ದೊಡ್ಡ ಕುತ್ತು ದೂರಾಗಿದೆ.
ಬೆಂಗಳೂರು (ನ.02): ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ವಿರುದ್ಧದ ಪ್ರಕರಣವೊಂದಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಎಸಿಬಿ ಇತಿಶ್ರೀ ಹಾಡಿದೆ. ಇದರಿಂದ ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರಗೆ ಎದುರಾಗಿದ್ದ ದೊಡ್ಡ ಕುತ್ತು ದೂರಾಗಿದೆ.
ಮ್ಯಾಟ್ರಿಕ್ಸ್ ಇಮೆಂಜಿಂಗ್ ಕಂಪನಿ ಟೆಂಡರ್'ನಲ್ಲಿ ಯತೀಂದ್ರ ವಿರುದ್ಧ ಅಕ್ರಮ ನಡೆಸಿರುವ ಆರೋಪ ಕೇಳಿ ಬಂದಿತ್ತು. ಡಿವೈಎಸ್ಪಿ ವಜೀರ್ ಅಲಿ ಖಾನ್ ನೇತೃತ್ವದಲ್ಲಿ ಪ್ರಕರಣ ತನಿಖೆ ನಡೆದಿತ್ತು. ಸೂಕ್ತ ಸಾಕ್ಷ್ಯಾಧರವಿಲ್ಲ ಎಂಬ ನೆಪ ನೀಡಿ ಪ್ರಕರಣವನ್ನು ಎಸಿಬಿ ಮುಕ್ತಾಯಗೊಳಿಸಿದೆ. ಆರ್ಟಿಐ ಕಾರ್ಯಕರ್ತ ಭಾಸ್ಕರನ್ ಎಸಿಬಿಗೆ ಯತೀಂದ್ರ ವಿರುದ್ಧ ದೂರು ನೀಡಿದ್ದರು. ಯತೀಂದ್ರ ಕೇಸ್ನಿಂದ ಮುಕ್ತರಾಗಿದ್ದಕ್ಕೆ ನಿರಾಳರಾಗಿದ್ದಾರೆ. ಇನ್ನು ಈ ಕುರಿತು ಕೋರ್ಟ್ನಲ್ಲಿ ಹೋರಾಟ ಮುಂದುವರಿಸಲು ಭಾಸ್ಕರನ್ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
