ಹಿರಿಯ ಬಿಜೆಪಿ ಮುಖಂಡ ಆಪ್ ಗೆ : ಲೋಕಸಭಾ ಚುನಾವಣೆಗೆ ಸ್ಪರ್ಧೆ?

First Published 9, Sep 2018, 11:15 AM IST
Yashwant Sinha May Join Aam Aadmi
Highlights

ಹಿರಿಯ ಬಿಜೆಪಿ ಮುಖಂಡ ಇದೀಗ ಆಪ್ ಗೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದ್ದು ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಅವರು ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. 

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಟೀಕಾಕಾರರಾಗಿರುವ ಹಿರಿಯ ಬಿಜೆಪಿ ಮುಖಂಡ ಯಶವಂತ್ ಸಿನ್ಹಾ ಅವರು ಲೋಕಸಭೆ ಚುನಾ ವಣೆಯಲ್ಲಿ ಆಮ್‌ಆದ್ಮಿ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎನ್ನಲಾ ಗುತ್ತಿದೆ. 

ನವದೆಹಲಿ ಕ್ಷೇತ್ರದಿಂದ ಸಿನ್ಹಾ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಆಪ್ ಶನಿವಾರ ಆಯೋಜಿಸಿದ್ದ ಜನ್  ಆಧಾರ್ ರ್ಯಾಲಿಯ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜೊತೆ ಯಶವಂತ್ ಸಿನ್ಹಾ ಹಾಗೂ ಶತ್ರುಘ್ನ ಸಿನ್ಹಾ ಪಾಲ್ಗೊಂಡಿದ್ದರು. 

ಈಗಾಗಲೇ ಲೋಕಸಭಾ ಚುನಾವಣೆಗೆ ವಿವಿಧ ಪಕ್ಷಗಳಲ್ಲಿ ಸಾಕಷ್ಟು ಸಿದ್ಧತೆಗಳು ನಡೆಯುತ್ತಿವೆ. ಗೆಲುವಿಗಾಗಿ ಎಲ್ಲಾ ಪಕ್ಷಗಳೂ ಕೂಡ ಯತ್ನಿಸುತ್ತಿವೆ. 

loader