ಈ ಬರಗಾಲದಲ್ಲಿ ನೂರಾರು ಅಡಿ ಆಳ ಬಾವಿ ತೋಡಿದರೂ ನೀರು ಸಿಗುವುದು ಕಷ್ಟ. ಆದರೆ ಇದು ನಟ ಯಶ್ ಸಂಕಲ್ಪಕ್ಕೆ ಸಿಕ್ಕ ಫಲವೋ, ಅಥವಾ ಈ ಭಾಗದ ಜನರ ಅದೃಷ್ಟವೋ ಗೊತ್ತಿಲ್ಲ. ಹೂಳೆತ್ತುತ್ತಿದ್ದ ಕೆರೆಯಲ್ಲಿ ಕೇವಲ 8 ಅಡಿ ಆಳದಲ್ಲಿ ಅಂತರ್ಜಲ ಜಿನುಗಲಾರಂಭಿಸಿದೆ. ಹಾಗಾದರೆ ಯಾವುದಪ್ಪಾ ಆ ಕೆರೆ? ನಟ್ ಯಶ್ ಗೂ ಆ ಕೆರೆಗೂ ಏನು ಸಂಬಂಧ ಅಂತೀರಾ.

ಕೊಪ್ಪಳ(ಮಾ.28): ಈ ಬರಗಾಲದಲ್ಲಿ ನೂರಾರು ಅಡಿ ಆಳ ಬಾವಿ ತೋಡಿದರೂ ನೀರು ಸಿಗುವುದು ಕಷ್ಟ. ಆದರೆ ಇದು ನಟ ಯಶ್ ಸಂಕಲ್ಪಕ್ಕೆ ಸಿಕ್ಕ ಫಲವೋ, ಅಥವಾ ಈ ಭಾಗದ ಜನರ ಅದೃಷ್ಟವೋ ಗೊತ್ತಿಲ್ಲ. ಹೂಳೆತ್ತುತ್ತಿದ್ದ ಕೆರೆಯಲ್ಲಿ ಕೇವಲ 8 ಅಡಿ ಆಳದಲ್ಲಿ ಅಂತರ್ಜಲ ಜಿನುಗಲಾರಂಭಿಸಿದೆ. ಹಾಗಾದರೆ ಯಾವುದಪ್ಪಾ ಆ ಕೆರೆ? ನಟ್ ಯಶ್ ಗೂ ಆ ಕೆರೆಗೂ ಏನು ಸಂಬಂಧ ಅಂತೀರಾ.

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ತಲ್ಲೂರು ಗ್ರಾಮದ 96 ಎಕರೆ ಪ್ರದೇಶದ ಈ ಕೆರೆ ಬರಡು ಭೂಮಿಯಂತಾಗಿತ್ತು. ಇದೇ ಕೆರೆಯನ್ನು ನಂಬಿಕೊಮಡಿದ್ದ ಜನ ನೀರಿಗಾಗಿ ಪರದಾಡುತ್ತಿದ್ದರು. ಅದರಲ್ಲೂ ಕಳೆದ ಎರಡು ಮೂರು ವರ್ಷಗಳಿಂದ ಈ ಭಾಗದ ಜನರು ತೀವ್ರ ಬರಗಾಲದಿಂದ ಬೆಂದು ಹೋಗಿದ್ದರು. ಕುಡಿಯಲು ನೀರಿಲ್ಲದೇ ತತ್ತರಿಸಿ ಹೋಗಿದ್ದ ಜನರ ಪಾಲಿಗೆ ಭಗೀರಥನಂತೆ ಬಂದವರು ನಟ ಯಶ್. ಕಳೆದ ತಿಂಗಳು 28 ರಂದು ಯಶ್, ತಮ್ಮ ಯಶೋಮಾರ್ಗ ಫೌಂಡೇಷನ್ ವತಿಯಿಂದ, ತಲ್ಲೂರು ಗ್ರಾಮದಲ್ಲಿ 4 ಕೋಟಿ ವೆಚ್ಚದಲ್ಲಿ, ಕೆರೆ ಹೂಳೆತ್ತುವ ಕೆಲಸಕ್ಕೆ ಚಾಲನೆ ಕೊಟ್ಟಿದ್ದರು. ಇದೀಗ ಕೇವಲ 8 ಅಡಿ ಆಳದಲ್ಲೇ ಜೀವಜಲ ಜಿನುಗುತ್ತಿದೆ.

ನಟ ಯಶ್ ಅವರ ಕೆರೆ ಹೂಳೆತ್ತುವ ಕೆಲಸಕ್ಕೆ ಸ್ಥಳೀಯರೂ ಸಾಥ್ ನೀಡಿದ್ದಾರೆ. ತಮ್ಮ ಸ್ವಂತ ಖರ್ಚಿನಿಂದ ಟ್ರ್ಯಾಕ್ಟರ್ ಮೂಲಕ ಹೂಳೆತ್ತಿಸಿದ ಆ ಮಣ್ಣನ್ನು ತಮ್ಮದೇ ಹೊಲಕ್ಕೆ ಹಾಕಿಸಿಕೊಳ್ಳುತ್ತಿದ್ದಾರೆ. ಈ ಕೆರೆ ಸಂಪೂರ್ಣ ಭರ್ತಿಯಾದರೆ 20 ಕಿಲೋಮೀಟರ್​ ವ್ಯಾಪ್ತಿಯ ಸರಿ ಸುಮಾರು 10 ಸಾವಿರ ಎಕರೆಗೂ ಹೆಚ್ಚಿನ ಪ್ರದೇಶ ನೀರಾವರಿಯಾಗುತ್ತದೆ. ಒಟ್ಟಿನಲ್ಲಿ ಬರದಿಂದ ಕಂಗೆಟ್ಟಿದ್ದ ಜನರಿಗೆ ಯಶ್ ಹೊಸದೊಂದು ಆಶಾಕಿರಣವಾಗಿದ್ದಾರೆ. ಇತ್ತ ಗ್ರಾಮಸ್ಥರಿಗೂ ಖುಷಿಯಾಗಿದ್ದು ಇದು ಇತರ ಕಲಾವಿದರಿಗೂ ಮಾದರಿಯಾಗಲಿ ಎನ್ನುವುದು ನಮ್ಮ ಆಶಯ.