ಬೆಂಗಳೂರಿನ ಬೆನ್ಜ್ ಶೋರೂಂನಿಂದ ಮೂರು ಮರ್ಸಿಡಿಜ್ ಕಾರುಗಳನ್ನು ಮನೆಗೆ ಕೊಂಡೊಯ್ದಿದ್ದಾರೆ ರಾಕಿಂಗ್ ಸ್ಟಾರ್.

ಬೆಂಗಳೂರು(ಡಿ.07): ಡಿಸೆಂಬರ್ 9 ಕ್ಕೆ ಯಶ್ ಮತ್ತು ರಾಧಿಕಾ ಮದುವೆಯ ಪ್ರಥಮ ವಾರ್ಷಿಕೋತ್ಸವ. ಹೀಗಾಗಿ ರಾಕಿಂಗ್ ಸ್ಟಾರ್ ಯಶ್ ತಮ್ಮ ಮೊದಲ ಮದುವೆ ವಾರ್ಷಿಕೋತ್ಸವವನ್ನು ಸ್ಮರಣೀಯವಾಗಿಸಿಕೊಳ್ಳಲು ಮುಂದಾಗಿದ್ದು, ಇದಕ್ಕೆ ಮೊದಲೇ ಪತ್ನಿ ಹಾಗೂ ತಂದೆ-ತಾಯಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಶ್ ಒಂದೇ ಶೋ ರೂಂನಲ್ಲಿ ಬರೋಬ್ಬರಿ ಮೂರು ಮರ್ಸಿಡಿಜ್ ಬೆನ್ಜ್ ಕಾರುಗಳನ್ನು ಕೊಂಡಿದ್ದಾರೆ. ಬೆಂಗಳೂರಿನ ಬೆನ್ಜ್ ಶೋರೂಂನಿಂದ ಮೂರು ಮರ್ಸಿಡಿಜ್ ಕಾರುಗಳನ್ನು ಮನೆಗೆ ಕೊಂಡೊಯ್ದಿದ್ದಾರೆ ರಾಕಿಂಗ್ ಸ್ಟಾರ್.

ಮೂರು ಕೂಡಾ ಟಾಪ್ ಎಂಡ್ ಮಾಡೆಲ್ ಕಾರುಗಳು ಎನ್ನುವುದು ಮತ್ತೊಂದು ವಿಶೇಷ. ಅಂದಹಾಗೆ ಒಂದೇ ಶೋರೂಂನಲ್ಲಿ ಮೂರು ಬೆನ್ಜ್ ಕಾರು ಖರೀದಿಸಿದ ಏಕೈಕ ವ್ಯಕ್ತಿ ಯಶ್ ಎಂದು ಶೋರೂಂನವರು ಯಶ್‌'ರನ್ನು ಕೊಂಡಾಡಿದ್ದಾರೆ. ಬೆನ್ಜ್ E-Class ಕಾರು ಅಪ್ಪ-ಅಮ್ಮನಿಗೆ, ಬೆನ್ಜ್ GLS ಪತ್ನಿ ರಾಧಿಕಾಗೆ ಮತ್ತು Benz GLC AMG COUPE ಕಾರು ಯಶ್ ಅವರಿಗೆ ಎಂದು ಪರ್ಚೇಸ್ ಮಾಡಲಾಗಿದೆ.

ತಮ್ಮ ವೆಡ್ಡಿಂಗ್ ಆನಿವರ್ಸರಿಗೆ ಇಡೀ ಫ್ಯಾಮಿಲಿಗೆ ಬಂಪರ್ ಗಿಫ್ಟ್ ಕೊಟ್ಟಿದ್ದಾರೆ ರಾಕಿಂಗ್ ಸ್ಟಾರ್. ಎಲ್ಲಾ ಕಾರುಗಳಿಗೂ ಪೂಜೆ ಮಾಡಿಸಿ ಖುಷಿಯಿಂದ ಮನೆಗೆ ಕೊಂಡೊಯ್ದಿದ್ದಾರೆ.